Karwar|25 ವರ್ಷ ಬಿಜೆಪಿಯಲ್ಲಿ ಇದ್ದು ಎಲ್ಲವನ್ನೂ ನೋಡಿದ್ದೇನೆ-ಸಚಿವ ಲಕ್ಷಣ್ ಸವಧಿ ಹೇಳಿದ ಆರು ಪ್ರಮುಖ ವಿಷಯಗಳೇನು ಗೊತ್ತಾ? .
ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿ ಯಾವ ಶಾಸಕರಿಗೂ ಸಚಿವ ಸ್ಥಾನ ಕೊಟ್ಟಿಲ್ಲ ಎಂಬ ಅಸಮದಾನ ವಿಲ್ಲ ,ಅವಕಾಶಗಳು ಯಾವಾಗಲೂ ನಿರಂತರವಾಗಿ ಇರುವುದಿಲ್ಲ .ವೆತ್ಯಾಸಗಳು ಆಗುತ್ತವೆ, ಎಲ್ಲರೂ ಒಂದಾಗಿ ಹೋಗುತ್ತೇವೆ ಎಂದು ಉಸ್ತುವಾರಿ ಸಚಿವ ಲಕ್ಷಣ್ ಸವದಿ ಹೇಳಿದ್ದಾರೆ.
ಇಂದು ಕಾರವಾರಕ್ಕೆ (karwar) ಮೊದಲಬಾರಿ ಆಗಮಿಸಿದ ಅವರು ಜಿಲ್ಲೆಯ ಬರ ಹಾಗೂ ಅತೀವೃಷ್ಟಿ ಕುರಿತು ಅಧ್ಯಯನ ಪ್ರವಾಸಕ್ಕೆ ಆಗಮಿಸಿ ,ಕಾರವಾರದ ಕಾಳಿ ನದಿ ಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗ ನನ್ನ ಹೆಸರು ಮಂತ್ರಿ ಸ್ಥಾನಕ್ಕೆ ಪಟ್ಟಿಯಲ್ಲಿ ಇತ್ತು ಆದರೇ ಕೊನೆಗೆ ಕೈ ಬಿಡಲಾಯಿತು.
ಇದನ್ನೂ ಓದಿ:-Karwar|ಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ-ಉತ್ತರ ಕನ್ನಡ ಜಿಲ್ಲೆಯ 19 RFOಗಳ ವರ್ಗಾವಣೆ
ಹೈಕಮಾಂಡ್ ವಿರುದ್ಧ ಮಾತನಾಡಿದ ಆಡಿಯೋ ವೈರಲ್ ಆಗುದ್ದು, ಯಾರು ಮಾತನಾಡಿದ್ದಾರೋ ಅವರೇ ಉತ್ತರ ಕೊಡಬೇಕು.ಅವರೇ ಉತ್ತರ ನೀಡಲಿ ಎಂದರು.
ಇದನ್ನೂ ಓದಿ:-Karwar| ಕನ್ನಡ ಮರೆತ ಕದಂಬ ನೌಕಾನೆಲೆ -ಕನ್ನಡ ನಾಮಫಲಕಕ್ಕಿಲ್ಲ ಬೆಲೆ
ಇನ್ನು ಕಳಂಕಿತ ಸಚಿವ ನಾಗೇಂದ್ರರಿಗೆ ಸಚಿವ ಸ್ಥಾನ ನೀಡಿರುವ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಬಿಜೆಪಿಯಲ್ಲಿ 25 ವರ್ಷ ಇದ್ದು ಎಲ್ಲವನ್ನೂ ನೋಡಿ ಬಂದಿದ್ದೇನೆ ,ಅದರ ಚರ್ಚೆ ಬೇಡ ಅವರು ಪ್ರತಿಭಟನೆ ಮಾಡಿದಾಗ ಉತ್ತರ ಕೊಡುತ್ತೇವೆ . ಸಭಾಪತಿ ರಾಜೀನಾಮೆ ಕೊಟ್ಟಮೇಲೆ ,ಆ ಸ್ಥಾನ ಕಾಲಿಯಾದಮೇಲೆ ಇಂತ ಸ್ಥಾನಕ್ಕೆ ಇಂತವರಿಗೆ ಅವಕಾಶ ಕೊಡಬೇಕು ಎಂದು ಹೇಳಿರುವಂತದ್ದು ,ಅವರು ಹೇಳಿ ನಿಯುಕ್ತಿ ಮಾಡಿರುವುದಲ್ಲ.
ಇದನ್ನೂ ಓದಿ:-Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್
ಆ ಸ್ಥಾನ ಕಾಲಿಯಾದಮೇಲೆ ಆ ಸ್ಥಾನಕ್ಕೆ ಇಂತವರನ್ನ ಕೂರಿಸಬೇಕು ಎಂದು ಪಕ್ಷ ಹೇಳಿದೆ ಇದರಲ್ಲಿ ತಪ್ಪೇನಿದೆ?ಈ ರೀತಿ ಬಿಜೆಪಿಯಲ್ಲಿ ಆಗಿರಲಿಲ್ಲವೇ ,ಜೆಡಿಎಸ್ ನಲ್ಲಿ ಆಗಿರಲಿಲ್ಲವೇ ? ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ನಿಲುವನ್ನ ಸಮರ್ಥಿಸಿಕೊಂಡ ಅವರು ಯಾವ ಸ್ಥಾನಕ್ಕೆ ಯಾರನ್ನ ಕೂರಿಸಬೇಕು ಎಂದು ಅಧ್ಯಯನ ಮಾಡಿಯೇ ಮಾಡಿರುತ್ತಾರೆ ಎಂದರು.
ಇದನ್ನೂ ಓದಿ:-Ankola| ಯುವತಿ ಕೊಲೆಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ -ರಾತ್ರಿ ಜೊತೆಗೆ ಮಲಗಿದವಳೇ ಆರೋಪಿ!
ಇನ್ನು ಜಿಲ್ಲೆಯಲ್ಲಿ ಕೆಲವು ಕಡೆ ಅತೀ ವೃಷ್ಟಿ ಇದೆ ಕೆಲವು ಕಡೆ ಅನಾವೃಷ್ಟಿ ಆಗಿದೆ .ಎರಡು ದಿನ ಎಲ್ಲಾಕಡೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದರು.







