Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೇಟಿಗೆ ಬೀಗ! ಏನಾಯ್ತು ಅಂತದ್ದು?

Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೇಟಿಗೆ ಬೀಗ! ಏನಾಯ್ತು ಅಂತದ್ದು?.ಕಾರಣ ಏನು ವಿವರ ಇಲ್ಲಿದೆ.
Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ! ಏನಾಯ್ತು ಅಂತದ್ದು? Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ! ಏನಾಯ್ತು ಅಂತದ್ದು?
ಡಿಸಿ ಕಚೇರಿಯ ಗೇಟ್ ಗೆ ಬೀಗ

Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೇಟಿಗೆ ಬೀಗ! ಏನಾಯ್ತು ಅಂತದ್ದು?.

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವಧಿಯವರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸುತಿದ್ದಾರೆ.

ಇದೇ ಬೆನ್ನಲ್ಲೇ ಕಾರವಾರದ (karwar) ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುಂಭಾಗದ ಗೇಟ್ ಗೆ ಯಾರೂ ತೆರಳದಂತೆ ಬೀಗ ಹಾಕಲಾಗಿದೆ. ಇದಲ್ಲದೇ ಮೊದಲು ಸಭೆಗೆ ಮಾಧ್ಯಮಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಮಾಧ್ಯಮಗಳು ಬಿಡದೇ ಹೋದಾಗ ಸಭೆಯ ಒಳಗೆ ಪ್ರವೇಶ ಕಲ್ಪಿಸಲಾಯಿತು.

Advertisement

ಇದನ್ನೂ ಓದಿ:-Karwar|25 ವರ್ಷ ಬಿಜೆಪಿಯಲ್ಲಿ ಇದ್ದು ಎಲ್ಲವನ್ನೂ ನೋಡಿದ್ದೇನೆ-ಸಚಿವ ಲಕ್ಷಣ್ ಸವಧಿ ಹೇಳಿದ ಆರು ಪ್ರಮುಖ ವಿಷಯಗಳೇನು ಗೊತ್ತಾ? 

ಇನ್ನು ಪೊಲೀಸ್ ಮೂಲಗಳ ಪ್ರಕಾರ ಕೆಲವು ದಿನದ ಹಿಂದೆ ಬಿಜೆಪಿಯ ಪ್ರತಿಭಟನಾಗಾರರು ಜಿಲ್ಲಾ ಅಭಿವೃದ್ಧಿ ಹಿನ್ನಡೆ ಹಿನ್ನಲೆಯಲ್ಲಿ  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಮನವಿ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಬಾರದ ಕಾರಣ ನೇರ ಕಚೇರಿ ಒಳಗೆ ನುಗ್ಗಲು ಪ್ರಯತ್ನ ಮಾಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ  ಕಚೇರಿ ಬಳಿ ಪ್ರತಿಭಟನೆ ನಡೆಯುವ ಆತಂಕದಲ್ಲಿ ಪೊಲೀಸ್ ಬಿಗು ಬಂದವಸ್ತ್ ಕಲ್ಪಿಸಿ ಗೇಟಿಗೆ ಬೀಗ ಹಾಕಲಾಗಿದೆ.ಇನ್ನೊಂದು ಮುಖದಲ್ಲಿ ಮಾತ್ರ ತೆರೆಯಲಾಗಿದೆ.

AddText 08 06 12.46.43

ಜನರ ಸಮಸ್ಯೆ ಹೇಳಿಕೊಳ್ಳಲು ಸಿಗುತ್ತಿಲ್ಲ ಅವಕಾಶ.!

ಸಧ್ಯ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರು ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಭೆ ಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕುಮಟಾ ಶಾಸಕ ದಿನಕರ್ ಶಟ್ಟಿ,ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್,ಕಾರವಾರ ಶಾಸಕ ಸತೀಶ್ ಸೈಲ್ ಭಾಗಿಯಾಗಿದ್ದು ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.ಆದರೇ ಭಟ್ಕಳ ಶಾಸಕ ,ಮಾಜಿ ಸಚಿವ ಮಂಕಾಳು ವೈದ್ಯ,ಆರ್.ವಿ ದೇಶಪಾಂಡೆಗೈರಾಗಿದ್ದಾರೆ.

ಇದನ್ಬೂ ಓದಿ:-Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ

ಇನ್ನು ಸಧ್ಯ ಉಸ್ತವಾರಿ ಸಚಿವರಿಗೆ ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರಿಗೂ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಅನಾಹುತವಾದ ಸ್ಥಳಪರಿಶೀಲನೆ ವೇಳೆಯಲ್ಲಾದರೂ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ಜನರದ್ದು.

ಕೊನೆಗೂ ಬೀಗ ತೆಗೆದ ಪೊಲೀಸರು

Videoshot 20260806 123412
ಗೇಟಿನ ಬೀಗ ತೆಗೆದಿರುವುದು

ಇನ್ನು ಗೇಟಿಗೆ ಬೀಗ ಹಾಕಿರುವ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡುತಿದ್ದಂತೆ ಗೇಟಿನ ಬೀಗವನ್ನು ತೆರೆಯಲಾಯಿತು

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement