Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್‌ 10 ಸೆಕೆಂಡ್‌ನಲ್ಲಿ ಚೆಕ್‌ ಮಾಡಿ

Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್‌ 10 ಸೆಕೆಂಡ್‌ನಲ್ಲಿ ಚೆಕ್‌ ಮಾಡಿ
Karnataka SIR Voter List Name Check Karnataka SIR Voter List Name Check
Karnataka SIR Voter List Name Check

Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್‌ 10 ಸೆಕೆಂಡ್‌ನಲ್ಲಿ ಚೆಕ್‌ ಮಾಡಿ.

ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎನ್ನುವ ಪ್ರಶ್ನೆ, ಆತಂಕ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.

ಚುನಾವಣಾ ಆಯೋಗ ಎಸ್‌ಐಆರ್‌ ಪ್ರಕ್ರಿಯೆಯ ಬಳಿಕ ವೆಬ್‌ಸೈಟ್‌ ರೂಪಿಸಿದೆ. ಈ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಎಪಿಕ್‌ ನಂಬರ್‌ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಸೈಟ್‌ನಲ್ಲಿ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದರೆ ಮತದಾರರು ಫಾರ್ಮ್-6 ಸಲ್ಲಿಸಿ ಹೆಸರನ್ನು ಸೇರಿಸಬಹುದು. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.

Advertisement

ಏನಿದು ASDDO ಪಟ್ಟಿ?

ರಾಜ್ಯದಲ್ಲಿ ಒಟ್ಟು 1.11 ಕೋಟಿ ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ASDDO(ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಭಯ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ:-Karwar|ಸಚಿವ ಸ್ಥಾನಕ್ಕೆ ಕೊಕ್ಕೆ- ಆರ್.ವಿ ದೇಶಪಾಂಡೆ ವಿರುದ್ಧ ಸತೀಶ್ ಸೈಲ್ ಗರಂ|ಏನಂದ್ರು ವಿವರ ಇಲ್ಲಿದೆ

ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ಸಂಪರ್ಕಿಸಿ ತಮ್ಮ ವಿವರಗಳನ್ನು ಸಲ್ಲಿಸಬಹುದು. ಒಂದು ವೇಳೆ ನಿಮಗೆ ಕಂಪ್ಯೂಟರ್‌ ಜ್ಞಾನವಿದ್ದರೆ ನೀವು ಆನ್‌ಲೈನ್‌ನಲ್ಲೇ https://voters.eci.gov.in/ ಈ ವೆಬ್‌ಸೈಟ್‌ಗೆ ಹೋಗಿ ಭರ್ತಿ ಮಾಡಬಹುದು.

ASDDO ಪಟ್ಟಿಯಲ್ಲಿ ಹುಡುಕೋದು ಹೇಗೆ?

– ಮೊದಲು ನೀವು https://karnataka-asddo-lookup.vercel.app/ ವೆಬ್‌ಸೈಟಿಗೆ ಹೋಗಬೇಕು

– ಇಲ್ಲಿ ನಿಮ್ಮ ಎಪಿಕ್‌ ನಂಬರ್‌(ವೋಟರ್‌ ಐಡಿ) ನಂಬರ್‌ ಎಂಟ್ರಿ ಮಾಡಬೇಕು.

– ಎಂಟ್ರಿ ಮಾಡಿದಾಗ ಒಳ್ಳೆಯ ಸುದ್ದಿ – ಈ ಗುರುತಿನ ಚೀಟಿ ತೆಗೆದುಹಾಕಿದ ಪಟ್ಟಿಯಲ್ಲಿ ಇಲ್ಲ ಎಂಬ ಸಂದೇಶ ಬಂದರೆ ನಿಮ್ಮ ಹೆಸರು ಡಿಲೀಟ್‌ ಆಗಿಲ್ಲ ಎನ್ನುವುದು ದೃಢಪಡುತ್ತದೆ.

– ಈ ಪಟ್ಟಿ ತೆಗೆದುಹಾಕುವಿಕೆಗಳನ್ನು ಮಾತ್ರ ಒಳಗೊಂಡಿದೆ. ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು voters.eci.gov.i ನೋಡಿ ಅಥವಾ ನಿಮ್ಮ BLO ಅವರನ್ನು ವಿಚಾರಿಸಬಹುದು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement