Karwar| ಮನೆಯಲ್ಲಿ ಅಕ್ರಮ ಗೋವಾ ಮದ್ಯದ ಮಾರಾಟ- ₹3,735 ಮೌಲ್ಯದ ಮದ್ಯ ವಶಕ್ಕೆ ಪಡೆದ ಪೊಲೀಸರು.
ಕಾರವಾರ: ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಕಾರವಾರ ನಗರ ಪೊಲೀಸರು ದಾಳಿ ನಡೆಸಿ, ₹3,735 ಮೌಲ್ಯದ 32 ಬಾಟಲ್ ಮದ್ಯವನ್ನು ವಶಪಡಿಸಿಕೊಂಡು, ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಬೈತಕೋಲ ಬಂದರು ರಸ್ತೆಯ ಸುರೇಶ ತಂದೆ ರುಮ್ಯಾ ಕೋಳಿ (55) ಹಾಗೂ ತಾರಾ ಸುರೇಶ ಕೋಳಿ (50), ಬೈತಕೂಲ ಬಂದರು ರಸ್ತೆ, ಕಾರವಾರ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಕಾರವಾರದ (karwar)ಬೈತಕೂಲ ಬಂದರು ರಸ್ತೆ ಸಮೀಪದ ಮನೆಯ ಆವರಣದಲ್ಲಿ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವಿವಿಧ ಬ್ರ್ಯಾಂಡ್‌ಗಳ ಒಟ್ಟು 32 ಬಾಟಲಿ ಮದ್ಯ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ:-Karwar|ಸಚಿವ ಸ್ಥಾನಕ್ಕೆ ಕೊಕ್ಕೆ- ಆರ್.ವಿ ದೇಶಪಾಂಡೆ ವಿರುದ್ಧ ಸತೀಶ್ ಸೈಲ್ ಗರಂ|ಏನಂದ್ರು ವಿವರ ಇಲ್ಲಿದೆ
ವಶಪಡಿಸಿಕೊಂಡ ಮದ್ಯದಲ್ಲಿ Light Horse Premium Blended Malt Whisky (750 ಮಿ.ಲೀ.) 12 ಬಾಟಲಿ, Gold & Black Reserved Matured XXX Rum (750 ಮಿ.ಲೀ.) 2 ಬಾಟಲಿ, Old Monk Special XXX Rum (180 ಮಿ.ಲೀ.) 7 ಬಾಟಲಿ ಹಾಗೂ Goa 77 Deluxe Cashew Fenny (750 ಮಿ.ಲೀ.) 11 ಬಾಟಲಿ ಸೇರಿವೆ.
ಇದನ್ನೂ ಓದಿ:-Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೇಟಿಗೆ ಬೀಗ! ಏನಾಯ್ತು ಅಂತದ್ದು?
ಕಾರವಾರ(karwar) ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುರೇಶ ಕೋಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವು ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32 ಮತ್ತು 34ರ ಅಡಿಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ಅ ಧರೆಪ್ಪನವರ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.







