BREAKING NEWS
Search

ಹೊಸ ವರ್ಷಕ್ಕೆ ಹಳೇ ವೈರೆಸ್ ! ಏನಿದು B.F. 7 ಉಪತಳಿ- ಇದರ ಲಕ್ಷಣ ಏನು| ವಿವರ ನೋಡಿ.

132

ನ್ಯಾಷನಲ್ ಡೆಸ್ಕ್ :- ಕರೋನಾ ಮೂರು ಅಲೆಗಳಲ್ಲಿ ಸಂಕಷ್ಟಕ್ಕೀಡಾಗಿ ಇನ್ನೇನು ಚೇತರಿಕೆ ಕಾಣುತಿದ್ದೇವೆ ಎನ್ನುತಿದ್ದಂತೆ ಮತ್ತೆ ಕರೋನಾ ಉಪತಳಿಯ ಆತಂಕ ಹೊಸವರ್ಷದ ಆಚರಣೆಗೆ( new year celebration 2023) ಕಂಠಕವಾಗಿದೆ. ನೆರೆಯ ಚೀನಾದ ಪರಿಸ್ಥಿತಿಯಿಂದಾಗಿ ಇದೀಗ ವಿಶ್ವದಲ್ಲೇ ಹೊಸ ವರ್ಷಕ್ಕೆ ನಾಲ್ಕನೆ ಅಲೆ ಭೀತಿ ಎದುರಾಗಿದೆ.

ಭಾರತದಲ್ಲಿ ಭೀತಿ ಎಚ್ಚರಿಕೆ!

ನೆರೆಯ ಚೀನಾದಲ್ಲಿ (China )ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಭಾರತದಲ್ಲಿ ಭೀತಿ ಉಂಟು ಮಾಡಿದೆ. ಕೂಡಲೇ ಎಚ್ಚೆತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈ ಅಲರ್ಟ್‌ ಆಗಿವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ಕುರಿತು ಸಭೆಗಳನ್ನು ನಡೆಸುತ್ತಿವೆ.

ಭಾರತದಲ್ಲಿ (India Covid lockdown) ಲಾಕ್‌ಡೌನ್‌ ಮಾಡುವ ಪರಿಸ್ಥಿತಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ ಗೋಯಲ್ ಹೇಳಿರುವುದು ಸದ್ಯ ಸಮಾದಾನ ತಂದುಕೊಳ್ಳುವಂತಾಗಿದೆ.

ದೇಶದಲ್ಲಿ ಶೇ.95 ರಷ್ಟು ಜನರು ಈಗಾಗಲೇ ಲಸಿಕೆಯನ್ನು ಪಡೆದಿರುವ ಕಾರಣ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಇಲ್ಲ. ಭಾರತೀಯರು ಚೀನಾದ ಜನರಿಗಿಂತ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಭಾರತವು ಕೋವಿಡ್‌ ಮೂಲಭೂತ ಅಂಶಗಳಾದ ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚುವಿಕೆಗೆ ಮರಳಬೇಕು ಎಂದು ಡಾ.ಗೋಯಲ್ ತಿಳಿಸಿದ್ದಾರೆ.

ಚೀನಾದ ಕೋವಿಡ್‌ ಹೊಸ ತಳಿ ಭಾರತದಲ್ಲಿ ಪತ್ತೆ!

ಕೊರೊನಾ ವೈರಸ್ ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಗುಜರಾತ್ ಹಾಗೂ ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಗಿದೆ. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಜಪಾನ್‌, ಸೌತ್‌ ಕೊರಿಯಾ, ಬ್ರೆಜಿಲ್‌, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿ.ಫ್.7 ಉಪತಳಿ ಪತ್ತೆಯಾಗಿದ್ದು, ಇನ್ನುಷ್ಟು ಆತಂಕ ಹೆಚ್ಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 185 ಹೊಸ ಪ್ರಕರಣಗಳು ದೃಢಪಟ್ಟರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402 ಕ್ಕೆ ಇಳಿದಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,515) ದಾಖಲಾಗಿದೆ. ಒಟ್ಟು 5,30,681 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,42,432 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ದೇಶದಲ್ಲಿ 220.03 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

B.F .7 ಉಪ ತಳಿ ಲಕ್ಷಣಗಳೇನು?

ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ ಕೊರೊನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಅಂತೆಯೇ ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪ-ತಳಿಯ ಲಕ್ಷಣಗಳೆಂದರೆ, ಜ್ವರ, ಗಂಟಲು ನೋವು, ಮೂಗು ಸ್ರವಿಸುವಿಕೆ, ಕೆಮ್ಮು, ಉಸಿರಾಟದ ಸಮಸ್ಯೆ ಯಾಗಿದೆ. ಇದಲ್ಲದೇ ಇದು ಅತೀ ವೇಗವಾಗಿ ಹಬ್ಬುವ ವೈರೆಸ್ ಆಗಿದ್ದು ಲಸಿಕೆ ಪಡೆದವರಲ್ಲೂ ಸಹ ಸೋಂಕು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಲಸಿಕೆ ಪಡೆದುಕೊಂಡವರು ಸಹ ಆದಷ್ಟು ಜಾಗೃತವಾಗಿರಬೇಕು.
ಇನ್ನು ಮದುಮೇಹಿ,ಅಧಿಕ ರಕ್ತದೊತ್ತಡ, ವಯಸ್ಸಾದವರು ಅದಿಕ ಜನಜಂಗುಳಿ ಇರುವ ಪ್ರದೇಶದಲ್ಲಿ ಓಡಾಡದೇ ಇರುವುದು ಒಳಿತು.

ನ್ಯೂ ಇಯರ್‌ಗೆ ನಿರ್ಬಂಧ? ಮಾಸ್ಕ್ ಕಡ್ಡಾಯ.

ಹೊಸವರ್ಷ ಸಮೀಪಿಸುತ್ತಿರುವ ಹೊತ್ತಲ್ಲೇ ಕೊರೊನಾ ವೈರಸ್‌ ಭೀತಿ ಮತ್ತೆ ಶುರುವಾಗಿದೆ. ಇದರಿಂದ ನ್ಯೂ ಇಯರ್‌ ಸಂದರ್ಭದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ಈಗಾಗಲೇ ಮಾಸ್ಕ್‌ ಕಡ್ಡಾಯಕ್ಕೆ ಆದೇಶ ಹೊರಡಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆದಿದೆ . ನ್ಯೂ ಇಯರ್‌ ವಿಜೃಂಭಣೆ ಆಚರಣೆಗೆ ಬ್ರೇಕ್‌ ಹಾಕುವ ಸಾಧ್ಯತೆ ಇದೆ. ಅನೇಕ ನಿರ್ಬಂಧಗಳೊಂದಿಗೆ ಸಂಭ್ರಮಾಚರಣೆಗೆ ಈ ಬಾರಿ ಅವಕಾಶ ಕಲ್ಪಿಸಬಹುದಾಗಿದ್ದು ಇನ್ನೆರೆಡು ದಿನದಲ್ಲಿ ರಾಜ್ಯ ಸರ್ಕಾರ ಸಹ ಅಂತಿಮ ತೀರ್ಮಾನ ಕೈಗೊಳ್ಳಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!