BREAKING NEWS
Search

ಆನಂದ್ ಆಸ್ನೋಟಿಕರ್ ,ಗೋಟ್ನೇಕರ್ ಗೆ JDS ನಿಂದ ಟಿಕೆಟ್! ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದೇನು?

125

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಜೆಡಿಎಸ್ ನ ಪಂಚರತ್ನ ಯಾತ್ರೆಯು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತ್ರತ್ವದಲ್ಲಿ ಕುಮಟಾ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಸೂರಜ್ ನಾಯ್ಕ ಸೋನಿ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಇನ್ನಲ್ಲಾ ಶಾಬೇಂದ್ರಿ ಪರ ಮುಂದಿನ ಚುನಾವಣೆಯ ಪ್ರಚಾರ ನಡೆಸಿದರು.
ಈ ವೇಳೆ ಹೊನ್ನಾವರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಶಿವರಾತ್ರಿ ನಂತರ ಈಗ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದಾರೆ.

ಈ ವೇಳೆ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆ ಕುರಿತು ಮಾತನಾಡಿದ ಅವರು ಶಿವರಾತ್ರಿ ನಂತರ ಕಾರವಾರ,ಕುಮಟಾ,ಭಟ್ಕಳ,ಹಳಿಯಾಳ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು.
ಇನ್ನು ಹಳಿಯಾಳದಲ್ಲಿ ಘೋಟ್ನೇಕರ್ ರವರು ಪಕ್ಷಕ್ಕೆ ಸೇರ್ಪಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಹಳಿಯಾಳದಲ್ಲಿ ಘೋಟ್ನೇಕರ್ ಗೆ ಟಿಕೇಟ್ ನೀಡುವ ಯೋಚನೆ ಇದೆ. ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ. ಕಾರವಾರ ದಿಂದ ಆನಂದ್ ಆಸ್ನೋಟಿಕರ್ ಸ್ಪರ್ದೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರ ಗೆಲ್ಲುವ ಗುರಿ ಇದೆ ಎಂದರು.

ಕುಮಾರಣ್ಣನ ಜೊತೆ ಆಸ್ನೋಟಿಕರ್!

ಫೆ.8 ರಂದು ಗೋವಾ ಮೂಲಕ ಜಿಲ್ಲೆಗೆ ಆಗಮಿಸುವ ವೇಳೆ ಕುದ್ದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ಗೋವಾದಿಂದ ಕಾರವಾರದ ವರೆಗೆ ಆಗಮಿಸಿದ್ದು ಈ ವೇಳೆ ಜೆಡಿಎಸ್ ನಿಂದ ಸ್ಪರ್ದಿಸುವಂತೆ ಆನಂದ್ ರವರಿಗೆ ಕುಮಾರಸ್ವಾಮಿಯವರು ತಿಳಿಸಿದ್ದಾಗಿ ತಿಳಿದುಬಂದಿದ್ದು ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆನಂದ್ ಆಸ್ನೋಟಿಕರ್ ಬೆಂಬಲಿಗ ಮುಖಂಡರು ಜಿಲ್ಲೆಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಇನ್ನೂ ಚಿಂತೆಯಲ್ಲಿರುವ ಆಸ್ನೋಟಿಕರ್!

ಆನಂದ್ ಆಸ್ನೋಟಿಕರ್ ಗೆ ಕ್ಷೇತ್ರದಲ್ಲಿ ತನ್ನದೇ ಆದ ಮತಗಳಿವೆ.ಆದರೇ ಸಕ್ರಿಯ ರಾಜಕಾರಣದಿಂದ ದೀಘ್ರ ವಿರಾಮ ತೆಗೆದುಕೊಂಡಿದ್ದರಿಂದ ಕ್ಷೇತ್ರದಲ್ಲಿ ಹಿಡಿತ ಕೈ ತಪ್ಪದೆ. ಹೀಗಾಗಿ ಎಲ್ಲವನ್ನೂ ದಾರಿಗೆ ತಂದು ಗೆಲುವು ಕಷ್ಟಕರವಾಗಿದೆ. ತಾನು ಈಬಾರಿ ಚುನಾವಣೆ ಸ್ಪರ್ದೆ ಮಾಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸುವಲ್ಲಿ ಪ್ರಯತ್ನ ನಡೆಸಿದ್ದರು. ಇತ್ತೀಚೆಗೆ ಯಾವ ಪಕ್ಷದಿಂದ ಸ್ಪರ್ದೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದಲ್ಲದೇ ಖಾಸಗಿ ವಾಹಿನಿ ನಡೆಸುತಿದ್ದ ಸಮೀಕ್ಷೆಗೆ ತನ್ನ ಹೆಸರನ್ನು ಚುನಾವಣೆ ಸ್ಪರ್ದೆ ಆಕಾಂಕ್ಷಿ ಪಟ್ಟಿಯಿಂದ ತೆಗೆಯಬೇಕು ಎಂದು ಫೇಸ್ ಬುಕ್ ಮೂಲಕ ವಿನಂತಿ ಮಾಡಿದ್ರು. ಹೀಗಾಗಿ ದಿನಕ್ಕೊಂದು ಗೊಂದಲದಲ್ಲಿ ಆಸ್ನೋಟಿಕರ್ ಇದ್ದು ,ಬಿಜೆಪಿಯ ರೂಪಾಲಿ ನಾಯ್ಕ, ಕಾಂಗ್ರೆಸ್ ನ ಸತೀಶ್ ಸೈಲ್ ಮುಂದಿನ ಪ್ರಭಾವ ವನ್ನು ತಗ್ಗಿಸಿ ಸ್ಪರ್ದೆ ಮಾಡಿ ಗೆಲ್ಲುವುದು ಅಷ್ಟು ಸುಲಭವಾಗಿಲ್ಲ.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ರೂಪಾಲಿ ನಾಯ್ಕರವರ ನಂತರ ಅತೀ ಹೆಚ್ಚು ಮತ ಗಳಿಸಿದ್ದ ಇವರಿಗೆ ಇದೀಗ ಮತ್ತೆ ಚುನಾವಣೆ ಎದುರಿಸುವ ಕುರಿತು ಇರುವ ಗೊಂದಲವೇ ದೊಡ್ಡ ಸಮಸ್ಯೆಯಾಗಿದ್ದು ಮುಂದಿನ ದಿನ ಯಾವ ನಿರ್ದಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!