Joida news| ಕಾಡಿನಿಂದ ನಾಡಿಗೆ ಬಂದ ಆನೆ ಹಲವು ಕಡೆ ಬೆಳೆ ನಾಶ.

Joida news:-Wild elephants from forest areas have entered human settlements in Joida taluk of Uttara Kannada district, causing fear among villagers and heavy damage to agricultural crops. Two elephants, including a female and a male
dandeli news joida dandeli news joida
ಜೋಯಿಡಾ ಭಾಗದಲ್ಲಿ ಕಾಡಾನೆ ರಸ್ತೆಗೆ ಬಂದಿರುವುದು

Joida news| ಕಾಡಿನಿಂದ ನಾಡಿಗೆ ಬಂದ ಆನೆ ಹಲವು ಕಡೆ ಬೆಳೆ ನಾಶ.

ವರದಿ:- ಶುಭಾ ಸಾಗರ್.

Joida news :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನಲ್ಲಿ ಎರಡು ಕಾಡಾನೆಗಳು ಕಾಡಿನಿಂದ ನಾಡಿನ ಭಾಗಕ್ಕೆ ಬಂದಿದ್ದು ಅವುರ್ಲಿ ಯಿಂದ ಉಳವಿ ಭಾಗ ಹಾಗೂ ಗಣೇಶ ಗುಡಿ ಭಾಗದ ಸುತ್ತಮುತ್ತ ಸಂಚರಿಸುತಿದ್ದು ಜನರು ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Mundgod | ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ ಗಂಟೆ ಘಟ್ಟಲೇ ರಸ್ತೆ ಬಂದ್ !

ಕಳೆದ ಎರಡು ದಿನದಿಂದ ಅವುರ್ಲಿ ಭಾಗದಲ್ಲಿ ಹೆಣ್ಣಾನೆ ಗದ್ದೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಇದೇ ಆನೆ ಇದೀಗ ಕಾರವಾರ-ದಾಂಡೇಲಿ ಮಾರ್ಗದ ಬಾಪೇಲಿ ಕ್ರಾಸ್ ನ ಸುತ್ತಮುತ್ತ ಸಂಚರಿಸುತ್ತಿದೆ. ಇದಲ್ಲದೇ ಪ್ರಧಾನಿ , ಕುಳಗಿ ಭಾಗದಲ್ಲೂ ಸಂಚಾರ ಮಾಡುತಿದ್ದು ಮುಂಜಾನೆ ಆರು ಗಂಟೆಯಿಂದ ಹತ್ತು ಗಂಟೆ ಆಸು ಪಾಸಿನಲ್ಲಿ ರಸ್ತೆಗಳಲ್ಲಿ ಹಾಗೂ ಗ್ರಾಮಗಳಲ್ಲಿ ಕಾಣಿಸುತಿದ್ದು ಜನರಲ್ಲಿ ಭಯ ಭೀತರನ್ನಾಗಿಸಿದೆ.

ಇನ್ನು ಉಳಿವಿ ಭಾಗದ ಸುತ್ತಮುತ್ತ ಗಂಡಾನೆಯೊಂದು ಚರಿಸುತಿದ್ದು ,ಸಿಂಥೇರಿ ರಾಕ್ ಭಾಗದ ಸುತ್ತಮುತ್ತ ಅರಣ್ಯ ಹಾಗೂ ಇಲ್ಲಿರುವ ಗದ್ದೆ ತೋಟದ ಬಳಿ ಸಂಚರಿಸುತ್ತಿದೆ.

ಇವೆರಡು ಆನೆಗಳು ಅಂಬಿಕಾ ನಗರದ ಅರಣ್ಯ ಭಾಗದಿಂದ ಈ ಭಾಗಕ್ಕೆ ಸಂಚಾರ ಮಾಡುತ್ತಿವೆ.

ಬೆಳೆಗಾರರಿಗೆ ಆತಂಕ

Joida elephant crop loss
Joida news| ಕಾಡಿನಿಂದ ನಾಡಿಗೆ ಬಂದ ಆನೆ ಹಲವು ಕಡೆ ಬೆಳೆ ನಾಶ

ಜೋಯಿಡಾ ಹಾಗೂ ಹಳಿಯಾಳ ಭಾಗದಲ್ಲಿ ಭತ್ತ ಕಟಾವಿಗೆ ಬಂದಿದೆ,ಕೆಲವುಕಡೆ ಕಬ್ಬು ಬೆಳೆದು ನಿಂತಿದೆ. ಇಂತಹ ಸಂದರ್ಭದಲ್ಲಿ ಆನೆಗಳು ಗದ್ದೆಗೆ ನುಗ್ಗುತಿದ್ದು ಫಸಲು ಕಳೆದುಕೊಳ್ಳುವ ಜೊತೆ ವರ್ಷದ ಕೂಳಿಗೂ ತೊಂದರೆ ಆಗುತ್ತಿದೆ ಎಂಬುದು ರೈತರ ಅಳಲು

ಕಾಳಿ ಅರಣ್ಯದಲ್ಲಿ ಹೆಚ್ಚಾದ ಆನೆಗಳು.

dandeli news joida
ಜೋಯಿಡಾ ಭಾಗದಲ್ಲಿ ಕಾಡಾನೆ ರಸ್ತೆಗೆ ಬಂದಿರುವುದು

ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೇ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಸಾಂತಾನ ವೃದ್ಧಿ ಹೆಚ್ಚಾಗಿವೆ. ಕಾಳಿ ಹುಲಿ ಸಂರಕ್ಷಿತ ವಲಯದಲ್ಲಿ ಒಟ್ಟು 40 ಆನೆಗಳಿವೆ ಎಂದು ಕಾಳಿ ಹುಲಿ ಸಂರಕ್ಷಿತ ವಲಯದ ಎ.ಸಿ.ಎಫ್  ಎಂ.ಎಸ್ ಕರಳಿಮಠ್ ರವರು ಮಾಹಿತಿ ನೀಡಿದ್ದಾರೆ.

Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .

ರೈತರು ಬೆಳೆ ರಕ್ಷಿಸಿಕೊಳ್ಳಲು ತಮ್ಮ ತೋಟಸ ಸುತ್ತ ನಿಂಬೆ ಗಿಡ ನಡೆಬೇಕು , ಎಲಿಫೆಂಟ್ ಆಂಟಿ ಡಿವೈಸ್ ಅಳವಡಿಸಿಕೊಳ್ಳಬೇಕು ಎಂಬುದು ಅವರ ಸಲಹೆ.

Sirsi|ರಸ್ತೆಯಲ್ಲಿ ಕಳೆದುಹೋಯ್ತು ಮಧುಮಗಳ ರವಿಕೆ | ವೈರಲ್ ಆಯ್ತು ರಾಜಣ್ಣನ ಬಿಗ್ ಬ್ರೇಕಿಂಗ್ ಸುದ್ದಿ! ಏನಿದು ಗೊತ್ತಾ ?

ಕಳೆದ ಹತ್ತು ವರ್ಷದಿಂದ ಜೋಯಿಡಾ,ದಾಂಡೇಲಿ,ಹಳಿಯಾಳ ಭಾಗದಲ್ಲಿ ಆನೆಗಳ ಉಪಟಳ ಕಡಿಮೆ ಇದ್ದು ಇದೀಗ ಆನೆಗಳ ಸಂತತಿ ಹೆಚ್ಚಾಗುವ ಜೊತೆ ನಾಡಿನತ್ತ ಬರುವ ಹಾಗೂ ಬೆಳೆ ನಾಶ ಮಾಡುತ್ತಿರುವ ಪ್ರಕರಣ ಸಹ ಏರಿಕೆ ಕಾಣುತ್ತಿದೆ.

Screenshot 20251211 182224

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement