ವಿಡಿಯೋ ನೋಡಿ:-
ಕಾರವಾರ:- ಲಾರಿಯಲ್ಲಿ ಪ್ರತ್ತೇಕ ಕಂಪಾರ್ಟೆಂಟ್ ನಿರ್ಮಿಸಿ ಅಕ್ರಮವಾಗಿ ಗೋವಾ ಮೂಲಕ ತಮಿಳುನಾಡಿಗೆ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನು ರಹಸ್ಯವಾಗಿ ಸಾಗಾಟ ಮಾಡುತಿದ್ದ ವ್ಯಕ್ತಿಯನ್ನು ಅಕ್ರಮ ಮದ್ಯದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida) ತಾಲೂಕಿನ ಅನಮೋಡ್ ತಪಾಸಣಾ ಕೇಂದ್ರದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ಕೃಷ್ಣಗಿರಿಯ ಅರಳುಮಣಿ ಬಂಧಿತ ಆರೋಪಿಯಾಗಿದ್ದು ,ಈತನಿಂದ ಒಟ್ಟು 267 ಲೀಟರ್ ವಿವಿಧ ಕಂಪನಿಗಳ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಅಂದಾಜು ಮೌಲ್ಯ ₹1,20,000 ಎಂದು ಅಂದಾಜಿಸಲಾಗಿದೆ. ಕೃತ್ಯದಲ್ಲಿ ಬಳಸಿದ ವಾಹನದ ಮೌಲ್ಯ ಸುಮಾರು ₹20 ಲಕ್ಷ ವಾಗಿದೆ. ಗೋವಾದಿಂದ ತಮಿಳುನಾಡಿಗೆ ತೆರಳುತಿದ್ದ ಈತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಚಕ್ ಪೋಸ್ಟ್ ದಾಟುತಿದ್ದ ಸಂಸರ್ಭದಲ್ಲಿ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳ ತಂಡ ವಾಹನ ತಪಾಸಣೆ ನಡೆಸಿದ್ದು ,ಈವೇಳೆ ಮದ್ಯ ಸಾಗಾಟ ಮಾಡಲೆಂದು ವಾಹನ ಕೆಳಗೆ ಪ್ರತ್ತೇಕ ಕಂಪಾರ್ಟೆಂಟ್ ಮಾಡಿಸಿದ್ದು ಅಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಜೋಡಿಸಿಟ್ಟಿದ್ದನು.ಇದನ್ನು ಪತ್ತೆ ಹಚ್ಚಿದಾಗ ಈತ ಪ್ರತಿಬಾರಿ ಗೋವಾದಿಂದ ತಮಿಳುನಾಡಿನ ತನ್ನೂರಿಗೆ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡಿ ಮಾರಾಟಮಾಡುತಿದ್ದುದು ಪತ್ತೆಯಾಗಿದೆ.ಘಟನೆ ಸಂಬಂಧ ಅಬಕಾರಿ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
