BREAKING NEWS
Search

Joida: ಜಿಂಕೆ ಕೋಡು, ಕಾಡು ಬೆಕ್ಕಿನ ಹಲ್ಲು ವಶಕ್ಕೆ ಆರೋಪಿ ಬಂಧನ

122

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ(joida) ಜೋಯಿಡಾದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ದಾಳಿ ನಡೆಸಿ ಮನೆಯಲ್ಲಿ ಇರಿಸಿದ್ದ ಜಿಂಕೆ ಕೋಡು, ಕಾಡು ಬೆಕ್ಕಿನ ದವಡೆ ಹಲ್ಲನ್ನು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ.

ಜೋಯಿಡಾದ ಶಿವಾಜಿ ವೃತ್ತದ ಬಳಿ ಇರುವ ಪ್ರಕಾಶ ನಾಯ್ಕ ಎಂಬುವವರ ಮನೆ ಮೇಲೆ ದಾಳಿ ನಡೆಸಿದ (tiger reserve forest )ಕಾಳಿ ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಸಿಂಧೆ ನೇತೃತ್ವದ ಅಧಿಕಾರಿಗಳು ಜಿಂಕೆ ಕೋಡು,ಕಾಡುಬೆಕ್ಕಿನ ದವಡೆ ವಶಕ್ಕೆ ಪಡೆದು ಇದನ್ನು ಇಟ್ಟುಕೊಂಡಿದ್ದ ಮನೆಯ ಯಜಮಾನ ಪ್ರಕಾಶ ನಾಯ್ಕ ಎಂಬಾತನನ್ನು ಬಂಧನ ಮಾಡಿದ್ದಾರೆ.
ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಬಂಧಿತನ ವಿಚಾರಣೆ ನಡೆಸಿ ಪ್ರಕರಣ ದಾಖಲು ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!