UttraKannada weather forecast weekly report Karnataka

Karnataka weather: ಕರಾವಳಿಯಲ್ಲಿ ಚಳಿಯ ಪ್ರಮಾಣ ಏರಿಕೆ ಎಲ್ಲಿ ಹೇಗಿರಲಿದೆ ತಾಪಮಾನ ವಿವರ ನೋಡಿ.

131

ಬೆಂಗಳೂರು ಜನವರಿ 25: ರಾಜ್ಯಾದ್ಯಂತ ಇಂದು ಗುರುವಾರ ಕೆಲವು ಭಾಗದಲ್ಲಿ ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದ್ದು, ಕರಾವಳಿಯಲ್ಲಿ ಚಳಿಯ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಪ್ರಮುಖ ಜಿಲ್ಲೆಗಳಾದ ಚಾಮರಾಜನಗರ, ಉತ್ತರ ಕನ್ನಡ, ರಾಮನಗರಗಳ,(ramnagara) ಕೋಲಾರ, ಮೈಸೂರು,(Mysore) ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಏರಿಕೆ ಕಾಣಲಿದೆ.

ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಕರಾವಳಿ ಪ್ರದೇಶದಲ್ಲಿ ಚಳಿಯ ಪ್ರಮಾಣ ಏರಿಕೆ ಕಾಣಲಿದೆ.

ಜಿಲ್ಲಾವಾರು ಹವಾಮಾನ ವರದಿ ಇಲ್ಲಿದೆ

ಬೆಂಗಳೂರು: 29-18
ಮಂಗಳೂರು: 29-21
ಶಿವಮೊಗ್ಗ: 31-17
ಬೆಳಗಾವಿ: 31-17
ಮೈಸೂರು: 32-19
ಮಂಡ್ಯ: 32-20
ಮಡಿಕೇರಿ: 29-17
ರಾಮನಗರ: 31-19
ಹಾಸನ: 29-17
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 29-18
ಕೋಲಾರ: 29-18
ತುಮಕೂರು: 30-19
ಉಡುಪಿ: 29-21
ಕಾರವಾರ: 29-18
ಚಿಕ್ಕಮಗಳೂರು: 28-16
ದಾವಣಗೆರೆ: 32-17
ಹುಬ್ಬಳ್ಳಿ: 31-16
ಚಿತ್ರದುರ್ಗ: 31-17
ಹಾವೇರಿ: 32-15
ಬಳ್ಳಾರಿ: 34-21
ಗದಗ: 31-17
ಕೊಪ್ಪಳ: 32-18

ದೇಶದ ಪ್ರಮುಖ ರಾಜ್ಯಗಳಲ್ಲಿ ಹೇಗಿದೆ ವಾತಾವರಣ

ಪಶ್ಚಿಮ ಬಂಗಾಳ, ದಕ್ಷಿಣ ಜಾರ್ಖಂಡ್, ಒಡಿಶಾದ ಕೆಲವು ಭಾಗಗಳು, ಛತ್ತೀಸ್‌ಗಢ ಮತ್ತು ವಿದರ್ಭದ ಉತ್ತರ ಕರಾವಳಿ, ತೆಲಂಗಾಣ ಮತ್ತು ಆಂಧ್ರಪ್ರದೇಶದ 12 ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜನವರಿ 26 ರಿಂದ ಮಳೆಯ ತೀವ್ರತೆಯು ಹೆಚ್ಚಾಗಬಹುದು ಮತ್ತು ಜನವರಿ 26 ಮತ್ತು 28 ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ವಿಪರೀತ ಚಳಿ ಕಾಣಿಸಿಕೊಂಡಿದ್ದು, ದಟ್ಟ ಮಂಜಿನ ಜತೆಗೆ ಚಳಿಗಾಳಿಯ ದಾಳಿಯೂ ಮುಂದುವರಿದಿದೆ. ಈತನ್ಮಧ್ಯೆ ಜನವರಿ 25 ರಿಂದ 28 ರವರೆಗೆ ಹಿಮಾಲಯದ ಪಕ್ಕದ ಪ್ರದೇಶಗಳಲ್ಲಿ ಲಘು ಹಿಮಪಾತ ಮತ್ತು ಮಳೆಯಾಗುವ (Rain)ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ( Meteorological Department) ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಪಂಜಾಬ್, ಹರಿಯಾಣ, ಚಂಡೀಗಢ ದೆಹಲಿಯ ವಿವಿಧ ಸ್ಥಳ, ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜನವರಿ 28 ರ ಬೆಳಿಗ್ಗೆಯವರೆಗೆ ದಟ್ಟವಾದ ಮಂಜು ಇರುತ್ತದೆ

ಮುಂದಿನ ಎರಡು ಮೂರು ದಿನಗಳಲ್ಲಿ ಛತ್ತೀಸ್‌ಗಢ, ತೆಲಂಗಾಣ,(telangana)ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ.

ಅಯೋಧ್ಯೆಯಲ್ಲಿ (Ayodhya) ಚಳಿಯ ಪ್ರಮಾಣ ಹೆಚ್ಚಿರಲಿದ್ದು ಮಂಜು ಮುಸುಕಿದ ವಾತಾವರಣ ಇರಲಿದ್ದು ರಾಮಮಂದಿರಕ್ಕೆ ಪ್ರವಾಸ (tourist) ತೆರಳುವವರು ವ್ಯವಸ್ಥಿತವಾಗಿ ತೆರಳಿ.

ಇದನ್ನೂ ಓದಿ:-ಕಾರವಾರದಲ್ಲಿ ಮುಸ್ಲಿಂ ಯುವಕನಿಂದ ತಲೆ ತೆಗೆಯುವ ಪ್ರಚೋಧನಕಾರಿ ಪೋಸ್ಟ್ ! ಆಮೇಲಾಗಿದ್ದೇನು?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!