Farmer speaker vishweshvara Hegde kageri speaking

ತಾಳಗುಪ್ಪ-ಶಿರಸಿ ರೈಲ್ವೆ ಮಾರ್ಗ ಯೋಜನೆ-3.95 ಕೋಟಿ ಬಿಡುಗಡೆ-ವಿಶ್ವೇಶ್ವರ ಹೆಗಡೆ ಕಾಗೇರಿ

332

ಶಿರಸಿ :- ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವಿನ ಸುಮಾರು 158 ಕಿ. ಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ (Railway project )ಮಂಡಳಿ ಒಪ್ಪಿಗೆ ನೀಡಿದ ಬೆನ್ನಲ್ಲೇ ನೈಋತ್ಯ ರೈಲ್ವೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು.

ಇದರ ಬೆನ್ನಲ್ಲೇ ಶಿರಸಿಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಪೆಭ್ರವರಿ 27 ರಂದು ತಾಳಗುಪ್ಪಾ ಶಿರಸಿ ಹುಬ್ಬಳ್ಳಿ ರೈಲ್ವೇ ವಿಸ್ತರಣೆ ಯೋಜನೆಯ 158 ಕಿಮೀಗಳ ಫೈನಲ್ ಲೊಕೇಶನ್ ಸರ್ವೇ ನಡೆಸಲು ತುರ್ತಾಗಿ ಮಂಜೂರಾತಿ ನೀಡಲು ಬರೆದ ಪತ್ರಕ್ಕೆ ಮ ಸಚಿವರು ಸ್ಪಂದಿಸಿ ಇಂದು ಫೈನಲ್ ಲೊಕೇಶನ್ ಸರ್ವೇ ನಡೆಸಿ ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟನ್ನು ನೀಡಲು 3.95 ಕೋಟಿ ರೂಪಾಯಿಗಳನ್ನು ಇಂದು (ಮಾರ್ಚ,15-2024) ಮಂಜೂರಾತಿ ನೀಡಿದ್ದಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಮೂಲಕ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ದಶಕಗಳ ಬೇಡಿಕೆ ಶೀಘ್ರ ಕಾರ್ಯಾರಂಭವಾಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!