BREAKING NEWS
Search

ಉದ್ಯೋಗ ಮಾರ್ಗದರ್ಶಿ-ಎಲ್ಲಿ ಏನು ಅವಕಾಶಗಳಿವೆ? ವಿವರ ನೋಡಿ.

152

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2023ಕ್ಕೆ ( Karnataka Teacher Eligibility Test -TET ) ಆನ್ ಲೈನ್ ಮೂಲಕ ಅರ್ಜಿಯನ್ನು ( Online Application ) ಆಹ್ವಾನಿಸಲಾಗಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ದಿನಾಂಕ 05-08-2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ( School Education Department ) ಅಧಿಸೂಚನೆಯನ್ನು ಹೊರಡಿಸಲಾಗಿದೆ. RTE ಕಾಯ್ದೆಯ ಸೆಕ್ಷನ್ 23ರ ಉಪ ವಿಭಾಗದ (1)ರ ನಿಬಂಧನೆಗಳ ಅನುಸಾರ ಆಗಸ್ಟ್ 23, 2010, ಜುಲೈ.29, 2011 ಮತ್ತು ಜೂನ್.28, 2018ರ ಅಧಿಸೂಚನೆಯಂತೆ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ ( NCTE) 1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ.?

ಆರ್ ಟಿ ಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು(ಎನ್)ನಲ್ಲಿ ಉಲ್ಲೇಖಿಸಲ್ಪಟ್ಟಿರವುಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTEಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ( TET)ಉತ್ತೀರ್ಣರಾಗಿರಬೇಕು ಎಂದು ತಿಳಿಸಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2023ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಶಾಲಾ ಶಿಕ್ಷಣ ಇಲಾಖೆಯ ಜಾಲತಾಣ www.schooleducation.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2023ಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 14-07-2023ರ ಆರಂಭಗೊಂಡಿದ್ದು ದಿನಾಂಕ 05-08-2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಪರೀಕ್ಷಾ ಶುಲ್ಕ

K-TET ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗಾ, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ ಪತ್ರಿಕೆ-1 ಅಥವಾ ಪತ್ರಿಕೆ-2ಕ್ಕೆ ರೂ.700, ಪತ್ರಿಕೆ-1 ಹಾಗೂ ಪತ್ರಿಕೆ-2ಕ್ಕೆ ರೂ.1000 ನಿಗದಿ ಪಡಿಸಲಾಗಿದೆ.

ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1ಕ್ಕೆ ಪತ್ರಿಕೆ-1 ಅಥವಾ ಪತ್ರಿಕೆ-2 ರೂ.350, ಪತಿರ್ಕೆ-1 ಹಾಗೂ ಪತ್ರಿಕೆ-2ಕ್ಕೆ ರೂ.500 ಶುಲ್ಕವನ್ನು ನಿಗದಿಪಡಿಸಿದೆ. ಅಂದರೇ 1 ರಿಂದ 5ನೇ ತರಗತಿ ಹಾಗೂ 5 ರಿಂದ 8ನೇ ತರಗತಿಗೆ ಸಂಬಂಧಿಸಿದಂತ ಪರೀಕ್ಷೆಯ ಪರೀಕ್ಷಾ ಶುಲ್ಕವಾಗಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ ವೇಳಾಪಟ್ಟಿ

ದಿನಾಂಕ 03-09-2023ರಂದು ಟಿಇಟಿ ಪರೀಕ್ಷೆ ನಡೆಯಲಿದೆ. ಪತ್ರಿಕೆ-1ರ ಪರೀಕ್ಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಗೆ ನಡೆದ್ರೇ, ಪತ್ರಿಕೆ-2ರ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 4.30ರವರೆಗೆ ನಡೆಯಲಿದೆ.

ಅರೆ ಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಅಹ್ವಾನ

ಕಾರವಾರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರ (Para Legal Volunteers) ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕಾರವಾರ ನಗರ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ಹಿರಿಯ ನಾಗರಿಕರು, MSW ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ವೈದ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನಿಷ್ಠ 10 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಸಮಾಜ ಸೇವೆಯಲ್ಲಿ ಆಸಕ್ತಿವುಳ್ಳವರು ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಜು. 28.ಸಂಜೆ 5.00 ಗಂಟೆಯ ಒಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08382-222990 ಗೆ ಸಂಪರ್ಕಿಸಿ ಎಂದು ಹಿರಿಯ ಸಿವಿಲ್‌ ನ್ಯಾಯಾದೀಶೆ ಹಾಗೂ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಪರೀಕ್ಷಾಪೂರ್ವ ತರಬೇತಿ

ಉತ್ತರ ಕನ್ನಡ ಜಿಲ್ಲೆಯ ಯೋಜನಾ ಉದ್ಯೋಗ ವಿನಿಮಯ ಕಛೇರಿಯ ವತಿಯಿಂದ ಎಸ್.ಡಿ.ಎ ಮತ್ತು ಎಫ್.ಡಿ.ಎ. ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಜುಲೈ 20 ರೊಳಗಾಗಿ ದೂರವಾಣಿ ಸಂಖ್ಯೆ : 9743360656, 8310044796, 08382-226386 ಅಥವಾ ಕಛೇರಿಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಯೋಜನಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!