Kaveri river protest: ಪದವಿ ಪರೀಕ್ಷೆಗಳು ಮುಂದೂಡಿಕೆ ವಿವರ ನೋಡಿ.

139

ಬೆಂಗಳೂರು:- ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಗೆ ನಾಳೆ ಕರೆಕೊಟ್ಟ ಹಿನ್ನಲೆಯಲ್ಲಿ ರಾಜ್ಯ ಮುಕ್ತ ವಿವಿ ಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ‌

ಕರ್ನಾಟಕದಾಧ್ಯಾಂತ ಸೆಪ್ಟೆಂಬರ್ 26, 28 ಹಾಗೂ 29 ರಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ.ಇನ್ನು ಬೆಂಗಳೂರು ನಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ.

ಧಾರವಾಡದಲ್ಲೂ ಪರೀಕ್ಷೆ ಮುಂದೂಡಿಕೆ.

ಸೆ. 26ರಂದು ನಡೆಯಬೇಕಿದ್ದ ರಾಜ್ಯ ಕಾನೂನು ವಿವಿ (State Law University)ವ್ಯಾಪ್ತಿಯ ಕಾಲೇಜ್‌ಗಳಲ್ಲಿ ನಡೆಯಬೇಕಿದ್ದ ಕಾನೂನು ಕೋರ್ಸ್ ವಿವಿಧ ಸೆಮಿಸ್ಟರ್ ಪರೀಕ್ಷೆಗಳು ಬಂದ್ ಹಿನ್ನೆಲೆಯಲ್ಲಿ ಕಾನೂನು ವಿವಿ ವ್ಯಾಪ್ತಿಯ ಎಲ್ಲ ಪರೀಕ್ಷೆ ಮುಂದೂಡಿಕೆ ಮಾಡಲಾಗಿದ್ದು ಅಕ್ಟೋಬರ್ 8ಕ್ಕೆ ಪರೀಕ್ಷೆ ನಡೆಯಲಿದೆ ಎಂದು ಹುಬ್ಬಳ್ಳಿ ಕಾನೂನು ವಿವಿ ರಜಿಸ್ಟರ್ ಆದೇಶ ಮಾಡಿದ್ದಾರೆ.

ನಾಳೆ ಬೆಂಗಳೂರು ಹೊರತುಪಡಿಸಿ ಎಲ್ಲೆಲ್ಲಿ ಬಂದ್ ಇರಲಿದೆ?

ಕಾವೇರಿ ಹೋರಾಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು ಮೈಸೂರಿನ ಟಿ.ನರಸೀಪುರ ,ರಾಮನಗರ ,ಮಂಡ್ಯ ಜಿಲ್ಲೆಗಳಲ್ಲಿ ಬಂದ್ ಇರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!