Karwar Court news| ಚಿರಾಗ್ ಪೊಲೀಸ್ ಕಷ್ಟಡಿಗೆ |ತಾಯಿ ,ಚಿಕ್ಕಮ್ಮನಿಗೂ ತಂತು ಸಂಕಷ್ಟ.
ಕಾರವಾರ :- ಕಾರವಾರ (karwar)ತಾಲೂಕಿನ ಕದ್ರಾ ದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ ಸಂಬಂಧ ನಿನ್ನೆ ಚನೈ ನಲ್ಲಿ ಬಂಧಿತನಾಗಿದ್ದ ಚಿರಾಗ್ ನನ್ನು ಇಂದು ಕಾರವಾರದ ಕೋರ್ಟ ಮುಂದೆ ಕದ್ರಾ ಪೊಲೀಸರು ಹಾಜುರು ಪಡಿಸಿದರು.
ಆರೋಪಿ ಪರ ವಕೀಲ ನಾಗರಾಜ್ ನಾಯ್ಕ ವಾದ ಮಂಡಿಸಿದರು. ಸರ್ಕಾರದ ಪರ ವಕೀಲರಾದ ಸಬೀನ ಮುಲ್ಲಾ ರವರು ಮಂಡಿಸಿದರು.
ಇನ್ನು ವಾದ-ಪ್ರತಿವಾದ ಆಲಿಸಿದ ಅಡಿಷಿನಲ್ ಸೀನಿಯರ್ ಸಿವಿಲ್ ಜಡ್ಜ್ ಐದು ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ನೀಡಿ ಆದೇಶ ಮಾಡಿದ್ದು ಮುಂದಿ ಪೆಬ್ರವರಿ 4 ಕ್ಕೆ ವಿಚಾರಣೆ ಮುಂದೂಡಿದರು.
ಆರೋಪಿ ಚಿರಾಗ್ ಗೆ ಸಹಕರಿಸಿದವರ ವಿರುದ್ಧವೂ ಪ್ರಕರಣ.

ಇನ್ನು ಕಾರವಾರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್.ಪಿ ದೀಪನ್ ರವರು ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿ ಆರೋಪಿಯನ್ನು ಚನೈ ನಲ್ಲಿ ಬಂಧಿಸಲಾಗಿದೆ.
ಆರೋಪಿಗೆ ಸಹಕಾರ ನೀಡಿದ ಅವರ ಸಂಬಂಧಿ ನಿತೀನ್ ಗಾವ್ಕರ್ ಮೇಲೂ ಹಾರ್ಬರಿಂಗ್ ಪ್ರಕರಣ ದಾಖಲಿಸಲಾಗುತ್ತದೆ. ಇದಲ್ಲದೇ ಆರೋಪಿಗೆ ಬೆಂಬಲಿಸಿ ನಾಪತ್ತೆಯಾಗಲು ಸಹಕರಿಸಿದ ಜೈತ್ರಾ ಕೊಠಾರಕರ್, ಆರೋಪಿ ಚಿಕ್ಕಮ್ಮ ಸುವರ್ಣ ಮೇಲೂ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.ಇನ್ನು FSL ವರದಿ ಬರಬೇಕಿದೆ , ಇದಲ್ಲದೇ ಎರಡನೇ ಹಂತದ ಪೋಸ್ಟ್ ಮಾಟಮ್ ರಿಪೋರ್ಟ ಸಹ ಬರಬೇಕಿದ್ದು ಇದು ಬಂದ ನಂತರ ಅತ್ಯಾಚಾರವೂ ಇಲ್ಲವೋ ಎಂಬ ಬಗ್ಗೆ ತನಿಖೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಚಿರಾಗ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಪ್ರಕರಣ ದಾಖಲು.
ಇನ್ನು ಚಿರಾಗ್ ವಿರುದ್ಧ ಸುಳ್ಳು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದವ ವಿರುದ್ಧ ಒಂದು ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಯಾರು ಸುಳ್ಳುಮಾಹಿತಿ ಹಂಚುತ್ತಾರೋ ಅದನ್ನು ಮಾನಟರಿಂಗ್ ಮಾಡಿ ಪ್ರಕರಣ ದಾಖಲಿಸುವುದಾಗಿ ಎಸ್.ಪಿ ದೀಪನ್ ರವರು ತಿಳಿಸಿದ್ದಾರೆ.







