Karwar |ಮುಖ್ಯಮಂತ್ರಿಗಳ ಮುಂದೆ ಹೊರಬರಲಿಲ್ಲ ಪತ್ರಕರ್ತರ ನೂರೆಂಟು ಪ್ರಶ್ನೆಗಳು ! ಕಾರವಾರದಲ್ಲಿ ಆಗಿದ್ದೇನು?
ಕಾರವಾರ :- ಕಾರವಾರ (karwar) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾರವಾರ ಲೋಕೋಪಯೋಗಿ ಇಲಾಖೆ ಆಯೋಜಿಸಲಾಗಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಜೋಡೆತ್ತಿನಂತೆ ಕಾರವಾರಕ್ಕೆ ಬಂದಿದ್ದರು.
Karwar|ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು- ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರವಾರದ ಶಾಸಕ ಸತೀಶ್ ಸೈಲ್ ಹಟ ಹಲವು ದಿನದಿಂದ ಬಾಕಿ ಉಳಿದಿತ್ತು. ಕೊನೆಗೂ ಸಿಎಂ ಮತ್ತು ಡಿಸಿಎಂ ನನ್ನ ಹಲವು ಗೊಂದಲಗಳ ನಡುವೆಯೇ ಕಾರವಾರಕ್ಕೆ ಕರೆತರಲು ಸೈಲ್ ಯಶಸ್ವಿಕಂಡಿದ್ದರು.
ಆದರೇ ಪತ್ರಕರ್ತರು ಮಾತ್ರ ಜಿಲ್ಲೆಯ ಸಮಸ್ಯೆಯನ್ನ ಸಿ.ಎಂ ,ಡಿ.ಸಿ.ಎಂ ಎದುರು ಇಟ್ಟು ಉತ್ತರ ಹುಡುಕುವ ಪ್ರಯತ್ನ ಮಾತ್ರ ವಿಫಲವಾಯಿತು.
ಹೌದು ಹುಬ್ಬಳ್ಳಿಯಿಂದ ನೇರ ಅಂಕೋಲಕ್ಕೆ (ankola) ಬಂದಿದ್ದ ಜೋಡೆತ್ತುಗಳು ಸೇತುವೆ ಉದ್ಘಾಟನೆ ಮಾಡಿ ಕಾರ್ಯಕ್ರಮ ಮುಗಿಸಿ ಕಾರವಾರಕ್ಕೆ ಬರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಅಧಿಕಾರಿಗಳ ಇಸ್ತ್ರಿ ಮಾಡಿದ ಕೋಟುಗಳು ಮುಡುಗಟ್ಟಿಹೋಗಿದ್ದರೇ ,ಬಿಸಿಲಿನಲ್ಲಿ ಬೆಳಗಿನಿಂದ ನಿಂತ ಪೊಲೀಸರು ಬೆವರು ಹರಿಸಿ ಸುಸ್ತಾಗಿದ್ದರು.
ಇನ್ನು ಪತ್ರಕರ್ತರಿಗಾಗಿ ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಮಾಧ್ಯಮ ಗೋಷ್ಟಿಗಾಗಿ ಸಕಲ ಸಿದ್ದತೆ ಮಾಡಲಾಗಿತ್ತು. ಪತ್ರಕರ್ತರು ಸಹ ಜಿಲ್ಲೆಯ ಸಮಸ್ಯೆ ಕುರಿತು ಜೋಡೆತ್ತುಗಳಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯಬೇಕು ಎಂಬ ಹಂಬಲದಲ್ಲಿ ಒಂದಿಷ್ಟು ಅಧ್ಯಯನ ನಡೆಸಿ ಸಿದ್ದವಾಗಿ ಕುಳಿತಿದ್ದರು.
ಶರಾವತಿ ಪಂಪ್ ಸ್ಟೋರೇಜ್, ನದಿ ಜೋಡಣೆ , ಬಂದರು ,ಮೀನುಗಾರಿಕೆ ,ವೈದ್ಯಕೀಯ ಸಮಸ್ಯೆ ,ಕ್ರೀಡಾಂಗಣ, ರಸ್ತೆ ಸಮಸ್ಯೆ ಹೀಗೆ ಜಿಲ್ಲೆಯ ಹಲವು ಸಮಸ್ಯೆ ಬಗ್ಗೆ ಜೋಡೆತ್ತುಗಳ ಗಮನ ಸೆಳೆದು ಒಂದಿಷ್ಟು ಉತ್ತರ ಪಡೆಯುವ ಉಮೇದಿನಲ್ಲಿ ಇವತ್ತು ಜೇನುಗೂಡಿಗೆ ಕಲ್ಲು ಹೊಡೆಯಲು ಸಿದ್ದರಾಗಿದ್ದರು.
Karwar |ಬಾಯಿ ಮುಚ್ಚಿಕೊಂಡು ಇದ್ರೆ ನನಗೂ ಒಳ್ಳೆದಾಗುತ್ತೆ- ಡಿಕೆ ಶಿವಕುಮಾರ್
ಎಲ್ಲಿ ಕಾರವಾರಕ್ಕೆ ಬರುವುದು ತಡವಾಯಿತೋ ಟಿವಿ ಮಾಧ್ಯಮಗಳು ಮೈಕ್ ಹಿಡಿದು ಸಿಎಂ, ಡಿಕೆ ಮುಸುಡಿಗೆ ಇಡಲು ಹೆಣಗಾಡಿದರು. ತಡವಾದ್ದರಿಂದ ಒಂದಿಷ್ಟು ಸಂಘಟನೆಗಳ ಮನವಿ ಸ್ವೀಕರಿಸಿ ಬಿಸಿಲ ಹೊಡೆತಕ್ಕೆ ಬಿಸಿ ಆಗಿದ್ದ ಸಿಎಂ ನೇರ ಕಾರಿನೊಳಗೆ ಹೊಕ್ಕಿ ಕುಳಿತಿದ್ದರು.
ಪತ್ರಿಕಾಗೋಷ್ಟಿಯಲ್ಲೇ ಮಾತನಾಡುತ್ತೇನೆ ಎಂದ ಸಿಎಂ ನೇರ ಊಟಕ್ಕೆ ತೆರಳಿದರೇ ,ಪ್ರತ್ತೇಕ ಕಾರಿನಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸಹ ಸಿಎಂ ಹಾದಿ ತುಳಿದರು.
ಟಿವಿ ಮಾಧ್ಯಮಗಳು ಬಿಸಿಲಿನಲ್ಲಿ ಮುಖ ಸುಟ್ಟುಕೊಂಡು ಕೊನೆಗೆ ಐಬಿಗೆ ಬಂದು ನಿಂತರು. ಆಗಲೂ ಸಿಎಂ ಲೇಟಾಯಿತು ಅಲ್ಲಿ ಮಾತನಾಡುತ್ತೇನೆ ಎಂದು ಕ್ರಿಮ್ಸ್ ಮೆಡಿಕಲ್ ಕಾಲೇಜಿಗೆ ಹೋಗಿಬಿಟ್ಟರು. ಇನ್ನು ಹಟ ಬಿಡದ ಟಿವಿ ಮಾಧ್ಯಮಗಳು ಡಿಕೆ ಶಿವಕುಮಾರ್ ಗೆ ಮೈಕ್ ಹಿಡಿದರೂ , ಏಕಾ ಏಕಿ ತೂರಿಬಂದ ನೂರಾರು ಪ್ರಶ್ನೆ, ಮೈಕ್ ಸೌಂಡಿನ ಜೊತೆ ಬಿಸಿಗಾಳಿಗೆ ರಾಜಕೀಯ ಸಂಬಂಧ ಮಾತ್ರ ಬೈಟ್ ಕೊಟ್ಟು ಹೊರನೆಡೆದರು.
ಕೊನೆಗೆ ಭಾಷಣ ಮುಗಿದು ಹೊರಬರುತಿದ್ದಂತೆ ಎಲ್ಲಾ ಪತ್ರಕರ್ತರು ಮುಗಿಬಿದ್ದರೂ “ಕಚ್ಚುವ ಸೊಳ್ಳೆ” ಹೊಡೆತದಿಂದ ತಪ್ಪಿಸಿಕೊಂಡಂತೆ ಸಿಎಂ ಜಾಗ ಕಾಲಿ ಮಾಡಿದರು.
ಇನ್ನು ಪತ್ರಕರ್ತರು ಜಿಲ್ಲೆಯ ಬಗ್ಗೆ ಒಂದಿಷ್ಟು ಗಮನ ಸೆಳೆಯಬೇಕು ಎಂದು “ಮಲ್ಪಿ ಸ್ಪೆಷಾಲಿಟಿ ಪ್ರಶ್ನೆಗಳನ್ನ ” ತಲೆಯಲ್ಲಿ ತುಂಬಿಕೊಂಡು ಬಂದು ಕಾಲಿ ಮಾಡಲಾಗದೇ ಪರಿತಪಿಸಿ ಹೊರಟರು.
ಒಟ್ಟಿನಲ್ಲಿ ಜಿಲ್ಲೆಯ ಸಮಸ್ಯೆಗಳನ್ನ ಸಿ.ಎಂ ,ಡಿಸಿಎಂ ಕಿವಿಗೆ ಊದುವ ಪ್ರಯತ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸಿನಂತೆ ಹಾಗೆಯೇ ಉಳಿಯಿತು.







