Karwar|ಉಚಿತ ತಪಾಸಣೆ ನೆಪದಲ್ಲಿ ದಂಪತಿವಳಿಗೆ 40 ಸಾವಿರ ವಂಚನೆ

In Karwar’s Sadashivgad, two fake healthcare staff duped a childless couple of ₹40,000 under the pretext of a free medical check-up. Police probe on.
karwar medical fraud karwar medical fraud
Karwar medical fraud ai image kannadavani

Karwar|ಉಚಿತ ತಪಾಸಣೆ ನೆಪದಲ್ಲಿ ದಂಪತಿವಳಿಗೆ 40 ಸಾವಿರ ವಂಚನೆ!

ಕಾರವಾರ (october 10):- ಹೆಲ್ತ್‌ಕೇರ್ ಉಚಿತ ತಪಾಸಣೆಯ ನೆಪದಲ್ಲಿ ಮನೆಗೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು, ಮಕ್ಕಳಿಲ್ಲದ ದಂಪತಿಗೆ ದುಬಾರಿ ಔಷಧಿ ನೀಡುವುದಾಗಿ ನಂಬಿಸಿ ಒಟ್ಟು ₹40,000 ನಗದು ಹಣ ವಂಚಿಸಿರುವ ಘಟನೆ ಕಾರವಾರ (karwar)ತಾಲೂಕಿನ ಸದಾಶಿವಗಡ ದೇಸಾಯಿವಾಡಾ ದಲ್ಲಿ ನಡೆದಿದೆ.

Karwar |ಮದ್ಯದ ಅಮಲಿನಲ್ಲಿ ಬೆತ್ತಲಾದ ಬಾಲಕನ ರಕ್ಷಣೆ| ವಿವಸ್ತ್ರ ಗೊಳಿಸಿ ಥಳಿಸಿದ ಆರೋಪ 

ಅಕ್ಟೋಬರ್ 9, 2025 ರಂದು ಬೆಳಗ್ಗೆ 8 ರಿಂದ 9:15 ರ ಅವಧಿಯಲ್ಲಿ, ಇಬ್ಬರು ಆರೋಪಿಗಳು ತಾವು ‘ಹೆಲ್ತ್ ಕೇರ್’ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಮನೆ ಮನೆಗೆ ಉಚಿತ ಆರೋಗ್ಯ ತಪಾಸಣೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ  ಮನೆಯವರ ವಿಳಾಸವನ್ನು ಖಚಿತಪಡಿಸಿಕೊಂಡು, ಸದಾಶಿವಗಡ ದೇಸಾಯಿವಾಡಾದಲ್ಲಿರುವ ಅವರ ಮನೆಗೆ ಆಗಮಿಸಿದ್ದಾರೆ.

Advertisement

IMG 20251009 WA0002

ಮಕ್ಕಳಾಗದ ಸಮಸ್ಯೆಯ ಬಗ್ಗೆ ಮಾತನಾಡಿದ ಆರೋಪಿಗಳು, ಅದಕ್ಕೆ ಸಂಬಂಧಿಸಿದ ‘ಮೆಡಿಕೇಶನ್’ ಬರೆದುಕೊಡುವುದಾಗಿ ಹೇಳಿದ್ದಾರೆ. ಈ ಔಷಧಿಗಳು ತುಂಬಾ ದುಬಾರಿಯಾಗಿದ್ದು, ಈಗ ಖರ್ಚು ಮಾಡಿದ ಹಣ ನಂತರದಲ್ಲಿ ಸಂಪೂರ್ಣವಾಗಿ ‘ರಿಫಂಡ್’ ಆಗುತ್ತದೆ ಎಂದು ಆ ದಂಪತಿಗಳನ್ನು ನಂಬಿಸಿದ್ದಾರೆ.

Karwar| ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ -ಆರೋಪಿ ಬಂಧನ

ಅವರ ಮಾತನ್ನು ನಂಬಿದ ದಂಪತಿ, ಆರೋಪಿಗಳಿಗೆ ನಗದು ₹40,000 ನೀಡಿದ್ದಾರೆ. ಹಣ ಪಡೆದ ನಂತರ ವಂಚಕರು ಯಾವುದೋ ಗುಳಿಗೆ ಮತ್ತು ದ್ರವದ ಮಿಶ್ರಣವನ್ನು ದಂಪತಿಗೆ ನೀಡಿ, ಅಲ್ಲಿಂದ ಪರಾರಿಯಾಗಿದ್ದಾರೆ. ತಮ್ಮನ್ನು ವಂಚಿಸಲಾಗಿದೆ ಎಂದು ಅರಿತು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement