KARWR|ಹಿಂದುಳಿದ ವರ್ಗದ ಪತ್ರಕರ್ತರಿಗೆ ಲ್ಯಾಬ್ ಟಾಪ್ ,DSLR ಕ್ಯಾಮರಾ ಕಿಟ್ ವಿತರಣೆ

TextMaster 06 15 10.00.20 TextMaster 06 15 10.00.20

ಕಾರವಾರ:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಾನ್ಯತಾ ಕಾರ್ಡ್ ಹೊಂದಿರುವ ಹಿಂದುಳಿದ ವರ್ಗಗಳ 9 ಪತ್ರಕರ್ತರಿಗೆ ಸರ್ಕಾರ ನೀಡಿದ ಲ್ಯಾಪ್ ಟಾಪ್, ಡಿಎಸ್ಎಲ್ಆರ್ ಕ್ಯಾಮೆರಾ ಒಳಗೊಂಡಂತೆ ಮಾಧ್ಯಮ ಕಿಟ್ ಗಳನ್ನು ವಿತರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ್ ಸಹಾಯಕ ನಿರ್ದೇಶಕರಾದ ಜಯಂತ್ ಹೆಚ್. ವಿ ಅವರು ನಗರದ ವಾರ್ತಾ ಭವನದಲ್ಲಿ ಗುರುವಾರ (ಜೂ.15) ಮಾಧ್ಯಮ ಕಿಟ್ ಗಳನ್ನು ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳಿಗೆ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳುವುದರ ಜತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುವಂತಹ ಪರಿಕರಗಳನ್ನು ಸರಕಾರ ನೀಡಿದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಲಾಖೆಯ ಸಿಬ್ಬಂದಿ ನಸೀರಾಬಿ ಶೇಖ, ಗೋವಿಂದ ನಾಯ್ಕ, ಗಂಗಾಧರ್ ಚಲುವಾದಿ, ಸೇರಿದಂತೆ ಅನೇಕ ಮಾಧ್ಯಮ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement