Kumta|15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ವಿಡಿಯೋ ನೋಡಿ.
ವಿಡಿಯೋ ನೋಡಿ:-
Kumta/ಕಾರವಾರ :- ಆಹಾರ ಅರಸಿ ತೋಡದಲ್ಲೇ ವಾಸವಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಯಳವಳ್ಳಿಯಲ್ಲಿ ನಡೆದಿದೆ.
ಯಳವಳ್ಳಿಯ ಲಕ್ಷ್ಮೀನಾರಾಯಣ ಹೆಗಡೆ ಎಂಬುವವರ ಮನೆಯ ತೋಟದಲ್ಲಿ ಬಂದು ಒಂದು ವಾರದಿಂದ ಅಲ್ಲಿಯೇ ನೆಲಸಿತ್ತು. ಹೀಗಾಗಿ ಕುಮಟಾದ ಉರುಗ ಪ್ರೇಮಿ ಪವನ್ ನಾಯ್ಕಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅವರು 15 ಅಡಿ ಉದ್ದದ 11 .250 ಕೆ.ಜಿ ಭಾರವಿದ್ದ ಕಾಳಿಂಗಸರ್ಪವನ್ನು ಹಿಡಿದು ಸ್ಥಳೀಯ ಕಾಡಿಗೆ ಬಿಟ್ಟಿದ್ದಾರೆ.ಇನ್ನು ಬೇಸಿಗೆಯಲ್ಲಿ ಕಾಳಿಂಗ ಸರ್ಪದ ಮಿಲನ ಸಮಯವಾಗಿದ್ದು, ಈ ಸಮಯದಲ್ಲಿ ಸಂಗಾತಿ ಹುಡುಕಿ 10 ರಿಂದ 20 ಕಿಲೋಮೀಟರ್ ದೂರದಷ್ಟು ಅರಣ್ಯದಲ್ಲಿ ಸಂಚರಿಸುತ್ತವೆ . ಹೀಗಾಗಿ ಈ ಕಾಳಿಂಗ ಸರ್ಪವು ಈ ಭಾಗದಲ್ಲಿ ಬಂದಿರುವ ಸಾಧ್ಯತೆಯನ್ನು ಉರುಗ ಪ್ರೇಮಿ ಪವನ್ ವಿವರಿಸುತ್ತಾರೆ.
ಇದನ್ನೂ ಓದಿ:-Mundgod| ಹತ್ತು ಅಡಿ ಉದ್ದದ ಹೆಬ್ಬಾವು,ನಾಗರಹಾವು ರಕ್ಷಣೆ | ವಿಡಿಯೋ ನೋಡಿ
ಇತ್ತೀಚೆಗೆ ಪಶ್ಚಿಮ ಘಟ್ಟ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯದಿಂದಾಗಿ ಕಾಳಿಂಗ ಸರ್ಪಗಳು ಹೆಚ್ಚಾಗಿ ನಾಡಿನತ್ತ ಬರುತ್ತಿದೆ. ಹೆಚ್ಚಾಗಿ ತಂಪು ಪ್ರದೇಶದಲ್ಲೇ ಇರಲು ಬಯಸುವ ಇವು ಇದೀಗ ನಾಡಿನತ್ತ ಬರುವ ಮೂಲಕ ಬಲಿಯಾಗುತ್ತಿವೆ. ವಿಶೇಷವೆಂದರೇ ಈವರೆಗೆ ಜನವಸತಿ ಪ್ರದೇಶಕ್ಕೆ ಬಂದರೂ ಜನರಿಗೆ ಹಾನಿ ಮಾಡದೇ ಇರುವುದು ವಿಶೇಷವಾಗಿದೆ.







