Kumta|ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು- ಬಿಜೆಪಿ ಶಾಸಕ ದಿನಕರ್ ಶಟ್ಟಿ.
ಕಾರವಾರ:- ನಿನ್ನೆದಿನವಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಯಾಗುವಂತೆ ಆಹ್ವಾನ ಬಂದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಶಾಸಕ ದಿನಕರ್ ಶಟ್ಟಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕಿತ್ತು ಎಂದಿದ್ದಾರೆ.
ಕುಮಟಾದ (kumta ) ಹೆಗಡೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪವರ್ ಶೇರಿಂಗ್ ಆ ಪಕ್ಷದ ಆಂತರಿಕ ವಿಚಾರ,ನನ್ನ ಮಾಹಿತಿ ಪ್ರಕಾರ ಇಬ್ಬರ ನಡುವೆ 50:50 ಮಾತುಕತೆ ಆಗಿದೆ.
ಪಕ್ಷದಲ್ಲಿನ ರಾಜಕೀಯ ಮುಖ್ಯಮಂತ್ರಿ ಸ್ಥಾನ ತಪ್ಪಿಸುತ್ತಿದೆ.ಏನಾದ್ರೂ ಮಾತಾಡಿದ್ರೆ ಕಾಂಗ್ರೆಸ್ ನಲ್ಲಿ ಪುಡಾರಿಗಳು ಮಾತಾಡ್ತಾರೆ.ಮುಖ್ಯಮಂತ್ರಿ ಏನು ಸ್ವರ್ಗದಿಂದ ಬಂದವರಲ್ಲ.ಮುಖ್ಯಮಂತ್ರಿ ಕೂಡ ನನ್ನ ತರಾ ಎಂಎಲ್ಎ ಆಗಿರುವವರು.
Kumta|ನಾವ್ಯಾರೂ ಸಿಎಂ ರೇಸ್ ನಲ್ಲಿ ಇಲ್ಲ -ಸತೀಶ್ ಜಾರಕಿಹೊಳಿ
ಈ ಹಿಂದೆ ಆರ್ ಗುಂಡುರಾವ್ ಬಹಳ ಸಣ್ಣ ವಯಸ್ಸಿನಲ್ಲೇ ಸಿಎಂ ಆಗಿದ್ರು,ಯಾರೂ ಬೇಕಾದ್ರೂ ಸಿಎಂ ಆಗಬಹುದು.ಸಮಯ ಸಂದರ್ಭ ಬರಬೇಕ ಅಷ್ಟೆ ಎಂದರು.
ಪಕ್ಷಕ್ಕೆ ಡ್ಯಾಮೇಜ್ ಆಗಿದೆ.
ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆ ಬಿದ್ದ ಪ್ರಕರಣ ಸಂಬಂಧ ಮಾತನಾಡಿದ ಅವರು ಈ ಘಟನೆಯಿಂದ ಬಿಜೆಪಿ ಪಕ್ಷಕ್ಕೆ ತುಂಬಾ ಡ್ಯಾಮೇಜ್ ಆಗಿದೆ.ಪಕ್ಷ ಇಂತವರ ಬಗ್ಗೆ ಕ್ರಮ ಕೈಗೊಳ್ಳತ್ತದೆ.ಪಕ್ಷದಲ್ಲಿ ಇದನ್ನ ಸಹಿಸಲ್ಲ ಎಂಬ ವಿಶ್ವಾಸ ಇದೆ ,ಚಂದ್ರು ಲಮಾಣಿ ಮಾಡಿದ್ದು ಅಕ್ಷಮ್ಯ ತಪ್ಪು ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ರು.
ನಿನ್ನೆ ಸಿಎಂ ಜಿಲ್ಲೆಗೆ ಬಂದಾಗ ಪಕ್ಷಕ್ಕೆ ಅಹ್ವಾನಿಸಿದ್ದರು.ಸಿಎಂ ಡಿಸಿಎಂ ಇಬ್ರು ಇದ್ದಾಗ ಚರ್ಚೆ ಆಯಿತು.ಜಿಲ್ಲೆಯಲ್ಲಿ ಒಬ್ಬನೇ ಬಿಜೆಪಿ ಶಾಸಕ ಇದಿರಾ ,ನೀವು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಅಂದರು.ಒಬ್ಬನೇ ಶಾಸಕನಾಗಿ ಹೊರಾಡುವ ಶಕ್ತಿ ಇದೆ,ಬಿಜೆಪಿ ಪಕ್ಷ ಬಿಟ್ಟು ಬರಲ್ಲ ಅಂತ ಹೇಳಿದೆ.ಆಯ್ತು ನೀನು ಅಲ್ಲೆ ಇರು ಬೇಡ ಅಂತ ಸಿಎಂ ಹೇಳಿದರು . ನಾನು ಈ ಹಿಂದೆ ಜೆಡಿಎಸ್ ನಲ್ಲಿ ಶಾಸಕ ಇದ್ದಾಗ ಸಹ ಬಿಜೆಪಿಗೆ ಬರಲು ಪ್ರಸರ್ ಇತ್ತು.ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹೋಗುವುದು ಸರಿಯಲ್ಲ ಎನ್ನುವ ಕಾರಣ ಹೋಗಲಿಲ್ಲ ಎಂದರು.







