BREAKING NEWS
Search

ವರ್ಷ ಕಳೆದರೂ ರಸ್ತೆಗಿಲ್ಲ ಮುಕ್ತಿ:ಶಾಸಕ ದಿನಕರ್ ಶಟ್ಟಿ ಮನೆಗೆ ಮುತ್ತಿಗೆಗೆ ಗ್ರಾಮಸ್ತರ ನಿರ್ಧಾರ!

2168

ವರ್ಷ ಕಳೆದರೂ ರಸ್ತೆಗಿಲ್ಲ ಮುಕ್ತಿ:ಶಾಸಕ ದಿನಕರ್ ಶಟ್ಟಿ ಮನೆಗೆ ಮುತ್ತಿಗೆಗೆ ಗ್ರಾಮಸ್ತರ ನಿರ್ಧಾರ!

ಕಾರವಾರ :-ಒಂದು ವರ್ಷದ ಹಿಂದೆ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಬರುವ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದ ಹುಲ್ಕೋಡು ಮಕ್ಕಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ದಿನಕರ್ ಶಟ್ಟಿ ಉದ್ಘಾಟನೆ ನೆರವೇರಿಸಿದ್ದರು.

ಕಳೆದ ಒಂದು ವರ್ಷದ ಹಿಂದೆ ಹಿಂದೆ ಇದ್ದ ರಸ್ತೆಗೆ ಅಗಲೀಕರಣ ಗೊಳಿಸಿ ಜಲ್ಲಿಕಲ್ಲುಗಳನ್ನು ಹಾಕಲಾಗಿತ್ತು ಆದರೇ ನಂತರದಲ್ಲಿ ಡಾಂಬರೀಕರಣ ಮಾಡದೇ ಹಾಗೆಯೇ ಇವುಗಳನ್ನು ಬಿಟ್ಟು ಕಾಮಗಾರಿಯನ್ನು ಅಪೂರ್ಣ ಗೊಳಿಸಲಾಗಿತ್ತು. ಈ ಕುರಿತು ಗ್ರಾಮದವರು ಶಾಸಕರಿಗೆ ಹಾಗೂ ಪಿಡಬ್ಲುಡಿ ಅಧಿಕಾರಿಗಳಿಗೆ ಕೆಲಸ ಮುಗಿಸುವಂತೆ ಮನವಿ ಮಾಡಿದ್ದರು.

ಇನ್ನು ರಸ್ತೆ ಪೂರ್ಣ ಗೊಳಿಸದೇ ಜಲ್ಲಿಯನ್ನು ಹಾಕಿದ್ದರಿಂದ ವಾಹನ ಸಂಚಾಲಕರಿಗೆ ತೊಂದರೆ ಆಗುವ ಜೊತೆ ಅಪಘಾತಗಳು ಜರುಗುತಿದ್ದವು.

ಇನ್ನು ಒಂದು ವರ್ಷವಾದರೂ ಈ ಕಾಮಗಾರಿ ಪೂರ್ಣ ಗೊಳಿಸದಿದ್ದರಿಂದ ಫೆಬ್ರವರಿ 12 ರ ಒಳಗೆ ರಸ್ತೆ ಕಾಮಗಾರಿ ಮುಗಿಸದಿದ್ದರೆ ಪಿ.ಡಬ್ಲು.ಡಿ ಕಚೇರಿ ಹಾಗೂ ಕುಮಟಾ ಶಾಸಕ ದಿನಕರ್ ಶಟ್ಟೆ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ತೀರ್ಮಾನವನ್ನು ಗ್ರಾಮಸ್ತರು ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!