Kumta| ಕುಮಟಾ ಪುರಸಭೆ ಚಿಕನ್ ತ್ಯಾಜ್ಯ ಶುಲ್ಕ ದುರುಪಯೋಗ ಸಿಬ್ಬಂದಿ ವಜಾ.
ಕಾರವಾರ/ಕುಮಟಾ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲೋಡರ್ಸ ಕೆಲಸಕ್ಕೆ ಪೂರೈಸಿರುವ ಸಿಬ್ಬಂದಿ ಸುಧೀರ ಮಾದೇವ ಗೌಡ ಇವರನ್ನು ಪುರಸಭೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಕರ್ತವ್ಯದಿಂದ ವಜಾಗೊಳಿಸಿ ಪುರಸಭೆ ಮುಖ್ಯಾಧಿಕಾರಿ ಆದೇಶ ನೀಡಿದ್ದಾರೆ.
ಕುಮಟಾದ ಪುರಸಭೆ ಆರೋಗ್ಯ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸುಧೀರ ಮಾದೇವ ಗೌಡ, ಕುಮಟಾ ಪುರಸಭೆ ವ್ಯಾಪ್ತಿಯಲ್ಲಿನ ಕೋಳಿ ಮಾಂಸ ಮಾರಾಟ ವ್ಯಾಪಾರಸ್ಥರಿಂದ ಚಿಕನ್ ತ್ಯಾಜ್ಯದ ವಿಲೇವಾರಿ ಶುಲ್ಕವನ್ನು ಸಂಗ್ರಹಿಸಿ, ಪುರಸಭೆ ನಿಧಿಗೆ ಪಾವತಿಸದೇ ಅಂದಾಜು ರೂ. 3.81 ಲಕ್ಷ ಮೊತ್ತವನ್ನು ಅಧಿಕೃತ ರಶೀದಿ ಮಾಡಿ ಪುರಸಭೆ ನಿಧಿಗೆ ಭರಣ ಮಾಡದೇ ಹಣವನ್ನು ದುರ್ಬಳಕೆ ಮಾಡಿ ವಂಚಿಸಿದ್ದಾನೆ.
ಇದನ್ನೂ ಓದಿ:-Kumta|ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಕುಮಟಾದ ವ್ಯಕ್ತಿಗೆ 20 ವರ್ಷ ಜೈಲು
ದಿನಾಂಕ:23-07-2026 ರಂದು ನಡೆದ ಚಿಕನ್ ಮಾಂಸ ವ್ಯಾಪಾರಸ್ಥರ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಆತ ವಂಚನೆ ಮಾಡಿರುವುದು ಸಾಬಿತಾಗಿರುತ್ತದೆ. ಈ ರೀತಿ ಹಣವನ್ನು ಸರ್ಕಾರಕ್ಕೆ ಭರಣ ಮಾಡದೇ ವಂಚನೆ ಮಾಡಿ ದುರುಪಯೋಗ ಪಡಿಸಿಕೊಂಡು (Misappropriation of Money) ಸ್ವಂತಕ್ಕೆ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾದ ಕಾರಣ ಸುಧೀರ ಮಾದೇವ ಗೌಡ ಹೊರಗುತ್ತಿಗೆ ಲೋಡರ್ಸ ಇವರನ್ನು ಕುಮಟಾ ಪುರಸಭೆ ಕಛೇರಿಯ ಕರ್ತವ್ಯ ದಿಂದ ವಜಾಗೊಳಿಸಲಾಗಿದೆ.
