ಆನೆ ದಾಳಿಗೆ ಬರಿದಾಯ್ತು ಮಾವುತನ ಬಾಳು-ಕೆಲಸ ಕಿತ್ತುಕೊಂಡು ನಡು ನೀರಲ್ಲಿ ಕೈ ಬಿಟ್ಟ ಅರಣ್ಯಾಧಿಕಾರಿಗಳು.


ಕಾರವಾರ:- ಆನೆಗಳನ್ನ ಪಳಗಿಸುವುದರಿಂದ ಹಿಡಿದು ಅವುಗಳ ಜೀವನ ಪೂರ್ತಿ ಆರೈಕೆಗೆ ಮಾವುತರು ಬೇಕು. ಮಾವುತರಿಲ್ಲದೇ ಆನೆಗಳು ತಾಯಿ ಇಲ್ಲದ ಮಗುವಿನಂತೆ ಅನಾಥ .ಇಂದು ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಮಾವುತರಾಗಿ ಕೆಲಸ ಮಾಡುವ ಅದೆಷ್ಟೋ ಮಾವುತರು ಆನೆಗಳನ್ನ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅದು ಅಗಲಿದರೇ ಅದರ ನೋವು ಮಾವುತರಿಗೆ. ಮಾವುತ ಆನೆ ತೊರೆದರೇ ಆನೆಯ ನೋವು ಹೇಳತೀರದು. ಹೀಗಿರುವಾಗ ಆನೆಯೊಂದಿಗೆ ಜೀವನ ಸಾಗಿಸುವ ಮಾವುತರ ಬದುಕು ಮಾತ್ರ ಕಾಡು ಬಿಟ್ಟು ಬಂಧನದಲ್ಲೇ ಜೀವನ ಕಳೆಯುವ ಆನೆಗಿಂತಲೂ ತೀರಾ ಕೆಳಮಟ್ಟದ್ದಾಗಿದೆ.
ಇದನ್ನೂ ಓದಿ:-Dandeli| ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಹೊಡೆದಾಟ ಕೊನೆಗೂ ಸಿಕ್ಕರು ಕುಡುಕ ಕುಚುಕುಗಳು!
ಹೌದು 2025 ರ ಜುಲೈ 30 ರಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಪಣಸೋಳಿ ಆನೆ ಬಿಡಾರದಲ್ಲಿ ಸಾಕಾನೆಯೊಂದು ಅಲ್ಲಿನ ಮಾವುತ ಲಕ್ಕು ಪಟಕಾರೆ ಎಂಬುವವರ ಮೇಲೆ ಹಟಾತ್ತನೆ ದಾಳಿ ಮಾಡಿತು. ಆ ದಾಳಿಯ ರಭಸಕ್ಕೆ ಮಾವುತ ಲಕ್ಕು ಪಟಕಾರೆ ಗಂಭೀರ ಗಾಯಗೊಂಡು ದಾಂಡೇಲಿಯ (dandeli)ಇ.ಎಸ್.ಐ ಆಸ್ಪತ್ರೆಗೆ ದಾಖಲು ಮಾಡಿದರು.
ನಂತರ ಹೆಚ್ವಿನ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೇ ಚಿಕಿತ್ಸೆಗೊಳಗಾದ ಅವರು ಮತ್ತೆ ಮೊದಲಿನಂತೆ ಆಗಲಿಲ್ಲ. ದೇಹಲ್ಲಿ ದವಡೆ ಭಾಗ ನಜ್ಜುಗುಜ್ಜಾದರೇ, ಬಲಗೈ ಕೂಡ ದೊಡ್ಡ ಪ್ರಮಾಣದಲ್ಲಿ ಘಾಸಿಯಾಗಿತ್ತು. ಇನ್ನು ಚಿಕಿತ್ಸೆ ಪಡೆದ ನಂತರ ದೇಹದ ಶಕ್ತಿಯನ್ನ ಕಳೆದುಕೊಂಡಿದ್ದ ಈ ಮಾವುತ ಇದೀಗ ಅಲ್ಪ ಚೇತರಿಸಿಕೊಂಡಿದ್ದಾನೆ.
ಕೆಲಸದಿಂದ ತೆಗೆದುಹಾಕಿದ ಅಧಿಕಾರಿಗಳು.

ಲಕ್ಕು ಪಟಕಾರೆ ಮೂಲತಹ ದಾಂಡೇಲಿ ತಾಲೂಕಿನ ಬಡಕಾನ ಬಳಿಯ ಶಿರಡಾ ಗ್ರಾಮದವರು.ಏಳು ಮಕ್ಕಳನ್ನು ಹೊಂದಿರುವ ಅವರು ಆನೆ ಬಿಡಾರದಲ್ಲಿ ಮಾವುತನ ಸಹಾಯಕನಾಗಿ ಗುತ್ತೆಗೆಆಧಾರದಲ್ಲಿ ಕರ್ತವ್ಯ ನಿರ್ವಹಿಸುತಿದ್ದರು.
ಇನ್ನು ಆನೆಯ ದಾಳಿಗೊಳಗಾದಾಗ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆಗಾಗಿ ಹಣ ನೀಡಿದರು. ಆದರೇ ಎಲ್ಲಿ ಚಿಕಿತ್ಸೆ ಪಡೆದು ದೈಹಿಕವಾಗಿ ಶಕ್ತರಾಗಲಿಲ್ಲವೋ ಒಂದು ಹೊತ್ತಿನ ಕೂಳಿಗೆ ಆಶ್ರಯವಾಗಿದ್ದ ಕೆಲಸದಿಂದಲೇ ಅವರನ್ನು ತೆಗೆದುಬಿಟ್ಟರು ಎಂಬುದು ಅವರ ಆರೋಪ .
ಆನೆ ದಾಳಿಯ ಪರಿಹಾರವಾಗಲೀ , ಪೂರಕ ವೆವಸ್ತೆಯಾಗಲಿ ಮಾಡದೇ ಅವರನ್ನು ದೂರ ಇಟ್ಟರು.ಇನ್ನು ಒಂದು ಹೊತ್ತಿಮ ಊಟಕ್ಕೆ ಪತ್ನಿ ಹಾಗೂ ಏಳು ಜನ ಮಕ್ಕಳನ್ನ ಸಾಕಲಾಗದ ಸ್ಥಿತಿ ಗೆ ತಲುಪಿದ ಅವರು ಅರಣ್ಯ ಇಲಾಖೆಯಲ್ಲಿ ಪರಿಹಾರಕ್ಕೆ ಅರ್ಜಿ ಹಾಕಿದರು. ಆದರೇ ಕಲ್ಲು ಮನಸ್ಸಿನ ಅಧಿಕಾರಿಗಳು ಮಾತ್ರ ಕರಗಿಲ್ಲ ಎಂಬುದು ಮಾವುತನ ದೂರು. ಈ ಘಟನೆ ಸಂಬಂಧ ಮೇಲಾಧಿಕಾರಿಗಳಿಗೆ ಪರಿಹಾರದ ಶಿಫಾರಸ್ಸನಾಗಲಿ ಬದಲಿ ಕೆಲಸವನ್ನು ನೀಡದೇ ಅನ್ಯಾಯ ಮಾಡಿರುವ ಆರೋಪ ಮಾಡಲಾಗಿದೆ.
ಇದನ್ನೂ ಓದಿ:-Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ತುತ್ತು ತುಂಬಿಸಿಕೊಳ್ಳಲು ಇದೀಗ ಲಕ್ಕು ಪಟಕಾರ ರವರ ಪತ್ನಿ ದಾಂಡೇಲಿಯ ರೆಸಾರ್ಟ ಒಂದರಲ್ಲಿ ಕೆಲಸ ಮಾಡುತಿದ್ದಾರೆ. ಇನ್ನು ಇದೀಗ ಚೇತರಿಸಿಕೊಂಡಿರು ಲಕ್ಕು ಪಟಕಾರ ಪರಿಹಾರದ ಹಣಕ್ಕಾಗಿ ಅರ್ಜಿ ಹಿಡಿದು ಅರಣ್ಯ ಇಲಾಖೆ ಕಚೇರಿ ಸುತ್ತುತಿದ್ದಾರೆ.
ಅರಣ್ಯ ಇಲಾಖೆ ಕಾಡುಪ್ರಾಣಿಗಳ ದಾಳಿಗೊಳಗಾದ ವಕ್ತಿಗಳಿಗೆ ಪರಿಹಾರವಾಗಿ ಐದುಲಕ್ಷ ಹಣ ನೀಡುತ್ತದೆ ,ಬೆಳೆ ನಾಶದಿಂದ ಹಿಡಿದೂ ಏನೇ ಆದರೂ ಪರಿಹಾರವನ್ನು ನೀಡುತ್ತದೆ. ಕಳೆದ ವರ್ಷ ಕರ್ನಾಟಕದ ಗಡಿಯಲ್ಲಿ ಆನೆ ದಾಳಿಯಿಂದ ಸತ್ತ ತಮಿಳುನಾಡಿನವರಿಗೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 20 ಲಕ್ಷ ಪರಿಹಾರ ನೀಡಿದ್ದರು.ಆದರೇ ತಮ್ಮದೇ ಇಲಾಖೆಯಲ್ಲಿ ಕೆಲಸ ಮಾಡುವ ಮಾವುತನಿಗೆ ಮಾತ್ರ ಯಾವುದೇ ಪರಿಹಾರ ನೀಡದೇ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಾವುತರು ಆನೆಗಳ ಜೊತೆ ಇದ್ದಾಗ ಜೀವ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಎಲ್ಲಿ ಯಾವಾಗ ಬೇಕಾದರೂ ಸಾಕು ಆನೆ ದಾಳಿ ಮಾಡಬಹುದು.ಗುತ್ತಿಗೆ ಆಧಾರದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುವ ಮಾವುತರು ಇಂತಹ ಸ್ಥಿತಿಯಲ್ಲಿ ಇದ್ದಾಗ ಸರ್ಕಾರ ಹಾಗೂ ಇಲಾಖೆ ಸಹಾಯದ ಔದಾರ್ಯ ತೋರದಿರುವುದು ಮಾವುತರಲ್ಲೇ ಆಕ್ರೋಶಕ್ಕೆ ಕಾರಣವಾಗಿದೆ.
ದಾಂಡೇಲಿಯ ಆನೆ ಬಿಡಾರದಲ್ಲಿ ಇದೀಗ ಹೊಸ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಮಾವುತರ ಕೊರತೆ ಇರುವುದರಿಂದ ಶಿವಮೊಗ್ಗದ ಸಕ್ರೆ ಬೈಲಿನ ಆನೆ ಬಿಡಾರದಿಂದ ಮಾವುತರನ್ನ ಎರವಲು ತರಲಾಗಿದೆ. ಇನ್ನು ಆನೆ ವೀಕ್ಷಿಸಲು ಹಾಗೂ ಪ್ರಾಣಿಗಳ ವೀಕ್ಷಣೆಗೆ ಪ್ರತ್ತೇಕ ಟಿಕೇಟ್ ಕೌಂಟರ್ ಮಾಡಲಾಗಿದೆ.
ಈ ಭಾಗದಲ್ಲಿ ಇಲಾಖೆ ಸಣ್ಣಪುಟ್ಟ ಕೆಲಸಕ್ಕಾದರೂ ಈತನಿಗೆ ನಿಯೋಜನೆ ಮಾಡುವ ಅವಕಾಶ ಇದೆ. ಇಲ್ಲವೇ ಪರಿಹಾರ ನೀಡಿದರೂ ಆತನ ಜೀವನ ನಡೆಸಿಕೊಳ್ಳಲು ಪುಟ್ಟ ಗೂಡಂಗಡಿಯನ್ನಾದರೂ ಹಾಕಿಕೊಳ್ಳಬಹಿದು. ಆದರೇ ಇದ್ಯಾವುದನ್ನೂ ಮಾಡದೇ ನಡೆದ ಘಟನೆಯನ್ನೇ ಮರೆಮಾಚಿ ,ಇಲಾಖೆ ಗಮನಕ್ಕೂ ತಾರದೇ ಸಿಗುವ ಪರಿಹಾರ ಕ್ಕೂ ಕೊಕ್ಕೆ ಹಾಕಲಾಗಿದ್ದು ಇಲಾಖೆ ವ್ಯವಸ್ತೆಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ.
