ಜುಲೈ 31,ಲಕ್ಷ ವೃಕ್ಷ ಅಭಿಯಾನ|ಏಕಕಾಲದಲ್ಲಿ 101 ಗ್ರಾ.ಪಂ ವ್ಯಾಪ್ತಿಯ 400 ಹಳ್ಳಿಗಳಲ್ಲಿ ಕಾರ್ಯಕ್ರಮ- ರವೀಂದ್ರ ನಾಯ್ಕ,

133

ಶಿರಸಿ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ 101 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 400 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ 31 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾದ್ಯಂತ ಏಕಕಾಲದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯವನ್ನು ರಕ್ಷಿಸಿ, ಸಂರಕ್ಷಿಸುವುದು ಜವಬ್ದಾರಿ ಅರಣ್ಯವಾಸಿಗಳದ್ದಾಗಿರುವುದರಿಂದ ಅರಣ್ಯವಾಸಿಗಳು ಪರಿಸರ ಅಭಿವೃದ್ಧಿ ದಿಶೆಯಲ್ಲಿ, ವಾಸ್ತವ್ಯಕ್ಕಾಗಿ ಅತಿಕ್ರಮಿಸಿದ ಪ್ರತಿ ಕುಟುಂಬದವರು ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ಅರಣ್ಯ ಸಾಂದ್ರತೆಯ ಮಟ್ಟ ಹೆಚ್ಚಿಸುವಲ್ಲಿ ಪಾಲ್ಗೊಂಡು ಸಕ್ರೀಯವಾಗಿ ಭಾಗವಹಿಸಬೇಕೆಂದು ರವೀಂದ್ರ ನಾಯ್ಕರವರು ಅರಣ್ಯ ಅತಿಕ್ರಮಣದಾರರಿಗೆ ಕರೆ ನೀಡಿದ್ದಾರೆ.

1 ಲಕ್ಷಕ್ಕೂ ಮಿಕ್ಕಿ ಗಿಡ-165 ಗ್ರಾ.ಪಂ ವ್ಯಾಪ್ತಿಯಲ್ಲಿ

ಜಿಲ್ಲಾದ್ಯಂತ 1 ಲಕ್ಷಕ್ಕೂ ಹೆಚ್ಚು ಗಿಡ ನೆಡುವ ಕಾರ್ಯಕ್ರಮವನ್ನು ವಿವಿಧ ತಾಲೂಕುಗಳ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜುಲೈ 31 ರಿಂದ ಅಗಸ್ಟ 14 ರವರೆಗೆ ಹಮ್ಮಿಕೊಳ್ಳಲಾಗಿದೆ.

ಏಕಕಾಲದಲ್ಲಿ 10 ಸಾವಿರ ಅತಿಕ್ರಮಣದಾರರು:

ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ 400 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ 31 ರಂದು ಏಕಕಾಲದಲ್ಲಿ ಜಿಲ್ಲಾದ್ಯಂತ 10 ಸಾವಿರ ಅರಣ್ಯ ಅತಿಕ್ರಮಣದಾರರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳುವರು.

ಐತಿಹಾಸಿಕ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಕಾಗೋಡ ತಿಮ್ಮಪ್ಪ ಚಾಲನೆ.

ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಸಿದ್ದಾಪುರ ತಾಲೂಕಿನ, ಸಾಮಾಜಿಕ ಚಿಂತಕ ಶಿರಳಗಿ ಗ್ರಾಮ ಪಂಚಾಯತಿಯಲ್ಲಿ ಮಾಜಿ ಸಚಿವರು ಹಾಗೂ ಮಾಜಿ ಸ್ಪೀಕರ್ ಕಾಗೋಡ ತಿಮ್ಮಪ್ಪ ಅವರು ಜುಲೈ 31, ಮುಂಜಾನೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ.

ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿ ಸಿದ್ದಾಪುರ ತಾಲೂಕಾದ್ಯಂತ ಜುಲೈ 31 ರಂದು 90 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಕಾರ್ಯಕ್ರಮ ಜರುಗಲಿದೆ. ಅರಣ್ಯವಾಸಿಗಳು ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ರವೀಂದ್ರ ನಾಯ್ಕರವರು ಕೋರಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!