yallapura|ಕನ್ಯೆ ಸಿಗಲಿಲ್ಲ ಎಂದು ಹವ್ಯಕ ಯುವಕ ಆತ್ಮಹತ್ಯೆ

TextMaster 06 29 11.29.30 TextMaster 06 29 11.29.30

ಕಾರವಾರ :- ಕನ್ಯೆ ಸಿಗಲಿಲ್ಲವೆಂದು ಹವ್ಯಕ ಬ್ರಾಹ್ಮಣ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ
ಯಲ್ಲಾಪುರ ತಾಲೂಕಿನ  ತೇಲಂಗಾರ ಗ್ರಾಮದಲ್ಲಿ ನಡೆದಿದೆ.

ನಾಗರಾಜ ಗಣಪತಿ ಗಾಂವ್ಕರ್ (35) ಮೃತ ಯುವಕನಾಗಿದ್ದು ಊರಿನಲ್ಲೇ ಇದ್ದು ಕೃಷಿ ಕೆಲಸ ಮಾಡಿಕೊಂಡಿದ್ದನು. ಹವ್ಯಕ ಬ್ರಾಹ್ಮಣ ಯುವಕರಲ್ಲಿ ಕನ್ಯೆಯ ಸಮಸ್ಯೆ ಹಲವು ದಶಕದಿಂದ ಇದ್ದು ವಿದ್ಯಾವಂತರೇ ಹೆಚ್ಚಿರುವ ಈ ಜನಾಂಗದಲ್ಲಿ ಕೃಷಿ ನಂಬಿಕೊಂಡು ಜೀವನ ನಡೆಸುವ ಯುವಕರಿಗೆ ಕನ್ಯೆಯನ್ನು ನೀಡುವುದು ಬಹುತೇಕ ಕಮ್ಮಿ.

Advertisement

ಇದನ್ನೂ ಓದಿ:- ಇಂದಿನ ದಿನ ಭವಿಷ್ಯ( ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

ಆತ್ಮಹತ್ಯೆ ಮಾಡಿಕೊಂಡ ಯುವಕ ತಂದೆತಾಯಿಗೆ ಏಕೈಕಮಗನಾಗಿದ್ದು ಕೃಷಿ ಕೆಲಸ ಮಾಡಿಕೊಂಡು ಪೋಷಕರನ್ನು ನೋಡಿಕೊಂಡಿದ್ದಾನೆ. ಈತನಿಗಾಗಿ ಹಲವು ಭಾಗದಲ್ಲಿ ಕನ್ಯೆಯನ್ನು ಹುಡುಕಿದ್ದಾರೆ.ಆದರೇ ಕೃಷಿ ಕೆಲಸ ಮಾಡಿಕೊಂಡು ಮನೆಯಲ್ಲೇ ಇರುವ ಕಾರಣ ಕನ್ಯೆ ನೀಡಲು ಯಾರೂ ಮುಂದೆಬರಲಿಲ್ಲ. ಹೀಗಾಗಿ ಮನನೊಂದ ಈತ ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಘಟನೆ ಸಂಬಂಧ ಕುಟುಂಬದವರು ಇದೇ ವಿಷಯದಲ್ಲಿ ದೂರು ದಾಖಲಿಸಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:- Joida| ಪೊಲೀಸ್ ಅಧಿಕಾರಿಗೆ ಮೆಸೇಜ್ ಮಾಡಿ **ಗೆ ಕರೆದು ಠಾಣೆಯಲ್ಲೇ ಹೊಡೆದಾಡಿಕೊಂಡ ಕಾನ್ಸ್ಟೇಬಲ್ ಸಸ್ಪೆಂಡ್!

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement