ನನಗೆ ಕರಾವಳಿ ಮುಂಜಾವು ಬ್ಲಾಕ್ ಮೇಲ್ ಮಾಡುತ್ತಿದೆ,ಅವರಿಗೆ ನಾನು ಹಣ ಕೊಟ್ಟರೇ ಮಾತ್ರ ಸರಿ ಇರುತ್ತಾರೆ,ನಮ್ಮ ಸುದ್ದಿ ಹೋಗಬೇಕು ಎಂದರೇ ಅವರಿಗೆ ಹಣ ಕೊಡಬೇಕು ಆಗಮಾತ್ರ ಹಾಕ್ತಾರೆ.ಇಲ್ಲದಿದ್ದರೇ ಉಲ್ಟಾ ಬರಿತಾರೆ ನನಗೆ ಹಣ ನೀಡುವಂತೆ ಕರಾವಳಿ ಮುಂಜಾವಿನ ಮಾಲೀಕ ಗಂಗಾಧರ್ ಹಿರೇಗುತ್ತಿ ಬ್ಲಾಕ್ ಮೇಲೆ ಮಾಡುತಿದ್ದಾರೆ ಎಂದು ಕಾರವಾರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಆರೋಪ ಮಾಡಿದರು.
ಇಂದು ಕಾರವಾರದ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕರಾವಳಿ ಮುಂಜಾವು ಪತ್ರಿಕೆ ಮಾಲೀಕ ಗಂಗಾಧರ್ ಹಿರೇಗುತ್ತಿ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ನ್ಯಾಯಾಲಯದಲ್ಲಿ ಐದು ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಹೇಳಿದರು.
ಎಲಕ್ಷನ್ ಸಂದರ್ಭದಲ್ಲಿ ಕೆಲವರನ್ನು ಒಟ್ಟುಗೂಡಿಸಿಕೊಂಡು ನನ್ನ ತೇಜೋವಧೆ ಮಾಡಲು ನಿಂತಿದ್ದಾನೆ,ಎಲ್ಲಾ ಪತ್ರಿಕೆಯಲ್ಲಿ ಮಾಡಿದ ಕೆಲಸಗಳು ಬರುತ್ತವೆ. ಬಿಜೆಪಿ ಸರ್ಕಾರದ ಸಾಧನೆ ಬರುತ್ತದೆ.ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಂದರು ಕಟೀಲು ಎಂದರೆ ಪಿಟೀಲು ಹೇಳ್ತಾರೆ, ಎಷ್ಟು insult ಮಾಡುವ ಕೆಲಸವನ್ನು ವ್ಯವಸ್ಥಾಪಕ ಮಾಡ್ತಾನೆ ಅಂದರೆ ಸರಸ್ವತಿ ಕೊಟ್ಟ ಬರವಣಿಗೆ ಅವನ ಬಳಿ ಇರಬಹುದು ಎಷ್ಟು ಉಲ್ಟಾ ಬರಿತಾನೆ ಎಂದರೇ ಅದು ಅವನಿಗೆ ಕೊನೆಯಾಗುತ್ತದೆ. ಸತ್ಯ ಯಾವತ್ತು ಸತ್ಯವೇ.
ಅಧಿಕಾರ ಇರಬಹುದು ರೂಪಾಲಿ ನಾಯ್ಕಗೆ ಇಲ್ಲದಿರಬಹುದು ಆದ್ರೆ ಮುಂಜಾವು ಮಾಡುತ್ತಿರುವುದು ಮಾತ್ರ ಆ ದೇವರು ಯಾವತ್ತೂ ಕ್ಷಮಿಸೋಲ್ಲ. ನನಗೆ ಮುಂಜಾವು ಬ್ಲಾಕ್ ಮೇಲ್ ಮಾಡುತ್ತಿದೆ,ಅವರಿಗೆ ನಾನು ಹಣ ಕೊಟ್ಟರೇ ಮಾತ್ರ ಸರಿ ಇರುತ್ತಾರೆ,ನಮ್ಮ ಸುದ್ದಿ ಹೋಗಬೇಕು ಎಂದರೇ ಅವರಿಗೆ ಹಣ ಕೊಡಬೇಕು ಆಗಮಾತ್ರ ಹಾಕ್ತಾರೆ.ಇಲ್ಲದಿದ್ದರೇ ಉಲ್ಟಾ ಬರಿತಾರೆ ಎಂದು ಆರೋಪ ಮಾಡಿದರು.
ಕಾರವಾರದ ಶಾಸಕಿ ರೂಪಾಲಿ ನಾಯ್ಕ ಕರಾವಳಿ ಮುಂಜಾವು ಪತ್ರಿಕೆ ಮಾಲೀಕ ಹಿರೇಗುತ್ತಿ ವಿರುದ್ಧ ಮಾಡಿದ ಆರೋಪದ ವೀಡಿಯೋ ನೋಡಿ.






