Shivamogga|25 ಲಕ್ಷ ರೂ. ಲೋನ್ ಗಾಗಿ 3 ಲಕ್ಷ ರೂ. ಕಳೆದುಕೊಂಡ ಪೊಲೀಸ್ ಅಧಿಕಾರಿ!
Shivamogga news:-ಶಿವಮೊಗ್ಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ 25 ಲಕ್ಷ ರೂ ಲೋನ್ ಕೊಡಿಸುವುದಾಗಿ ನಂಬಿಸಿದ ವಂಚಕರು ಲಕ್ಷಾಂತರ ರೂ. ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ (shivamogga) ನಡೆದಿದೆ.
ದೂರುದಾರರಾದ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಕೇಂದ್ರ ಸರ್ಕಾರದ ಮುದ್ರಾ ಲೋನ್ ಯೋಜನೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮುದ್ರಾ ಯೋಜನೆಯಡಿ ನಿಮಗೆ 25 ಲಕ್ಷ ರೂ. ಸಾಲ ಹಾಗೂ ಅದರ ಜೊತೆಗೆ 5 ಲಕ್ಷ ರೂ. ಸಬ್ಸಿಡಿ ಕೊಡಿಸುವುದಾಗಿ ನಂಬಿಸಿದ್ದಾನೆ.
ಇದನ್ನೂ ಓದಿ:-Shivamogga| ಶಾಲಾ ವಾಹನಗಳ ದಿಢೀರ್ ತಪಾಸಣೆ – 7 ಚಾಲಕರ ಡಿಎಲ್ ರದ್ದಿಗೆ ಪೊಲೀಸರಿಂದ ಆರ್‌ಟಿಒಗೆ ಪತ್ರ!
ಅಪರಿಚಿತನ ಮಾತನ್ನ ಹಿರಿಯ ಅಧಿಕಾರಿ ನಂಬಿದ್ದಾರೆ. ಲೋನ್ ಪ್ರಕ್ರಿಯೆಯ ಹೆಸರಿನಲ್ಲಿ ವಿವಿಧ ದಾಖಲೆಗಳನ್ನು ಪಡೆದುಕೊಂಡಿದ್ದ ವಂಚಕರು, ನಂತರ ಹಂತ-ಹಂತವಾಗಿ ಒಟ್ಟು 3.04 ಲಕ್ಷ ರೂ. ಹಣವನ್ನ ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಹಣ ಸಂದಾಯವಾದ ಬಳಿಕ ಲೋನ್ ನೀಡದೇ ವಂಚಿಸಿರುವುದು ಬೆಳಕಿಗೆ ಬಂದಿದೆ.ಕೇಂದ್ರ ಸರ್ಕಾರದ ಮುದ್ರಾ ಲೋನ್ ಮ್ಯಾನೇಜರ್ ಎಂದು ನಟಿಸಿ, ನಕಲಿ ದಾಖಲಾತಿ ಸೃಷ್ಟಿಸಿ ತನ್ನ ಬ್ಯಾಂಕ್ ಖಾತೆಯಿಂದ 3,04 ಲಕ್ಷ ರೂ. ಹಣವನ್ನು ದೋಚಿದ ಸೈಬರ್ ವಂಚಕರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಂತೆ ಅಧಿಕಾರಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
