BREAKING NEWS
Search
Anjali nimbalkar congress

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ನಿಂದಾಗಿ IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ಗೆ ಸಂಕಷ್ಟ! ಏನದು?

83

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪತಿ ಹೇಮಂತ್ ನಿಂಬಾಳ್ಕರ್ ಗೆ ಇದೀಗ ಕರ್ತವ್ಯಕ್ಕೆ ಸಮಸ್ಯೆ ಎದುರಾಗಿದೆ.

ಹೇಮಂತ್ ನಿಂಬಾಳ್ಕರ್ ಒಬ್ಬ IPS ಅಧಿಕಾರಿಯಾದ್ದರಿಂದ ಸಾವರ್ತಿಕ ಚುನಾವಣೆಯಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಅವರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಎಮ್.ಎಲ್.ಸಿ ಸಿ.ನಾರಾಯಣ ಸ್ವಾಮಿರವರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಗೆ ದೂರು ನೀಡಿದ್ದಾರೆ.

ಹೇಮಂತ್ ನಿಂಬಾಳ್ಕರ್ (Hemanth nimbalkar) ರವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ (congress) ಸರ್ಕಾರ ಬಂದ ನಂತರ ಅವರ ನೇಮಕವಾಗಿದೆ.

ಇದನ್ನೂ ಓದಿ:-Kumta|18 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತಿದ್ದ ಸೇತುವೆಕುಸಿತ.

ಅವರು ಪ್ರಭಾವಿ ಅಧಿಕಾರಿಯಾದ್ದರಿಂದ ಚುನಾವಣೆ ವೇಳೆ ( election) ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಗೊಂಡ ಪೊಲೀಸ್ ಅಧಿಕಾರಿಗಳು,ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು ಕಾಂಗ್ರೆಸ್ ಪರ ಕೆಲಸ ಮಾಡುವ ಸಾಧ್ಯತೆಗಳಿವೆ .ಅವರು ಈ ಹುದ್ದೆಯಲ್ಲೇ ಮುಂದುವರೆದರೇ ಕಾಂಗ್ರೆಸ್ ಪರ ಕೆಲಸ ಮಾಡುವ ಜೊತೆ ಅಧಿಕಾರಿಗಳ ಮೇಲೆ ಸಹ ಪ್ರಭಾವ ಬೀರುವ ಸಾಧ್ಯತೆಗಳಿವೆ.ಹೀಗಾಗಿ ಬೇರೆ ರಾಜ್ಯಕ್ಕೆ ಅವರನ್ನು ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಇನ್ನು ಪೊಲೀಸ್ ಇಲಾಖೆ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರ ಹೆಸರನ್ನು ರೌಡಿ ಶೀಟರ್ ಹೆಸರಿನಲ್ಲಿ ಸೇರಿಸಿ ಕಿರುಕುಳ ನೀಡುವ ಹಾಗೂ ಬಹಿಷ್ಕಾರದ ಆದೇಶಕ್ಕೆ ಕಾರಣವಾಗಬಹುದು ಎಂದು ಬಿಜೆಪಿ ದೂರಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!