ಕಾರವಾರ :-ಬಿಜೆಪಿಯಲ್ಲಿ (bjp) ಪಕ್ಷದ ಅಧ್ಯಕ್ಷರಿಗೂ, ಮಾಜಿ ಸಿಎ ಗೆ ಟಿಕೇಟ್ ಇಲ್ಲ,ಯಾರು ಮನೆ ಕಟ್ಟಿದ್ದಾರೆ, ಫೌಂಡೇಷನ್ ಹಾಕಿದ್ದಾರೆ ಹೋರಾಟ ಮಾಡಿದ್ದಾರೆ ಅವರಿಗೆ ಟಿಕೇಟ್ ಇಲ್ಲ ಅವರನ್ನು ಹೊರ ಹಾಕಿದ್ದಾರೆ.
ಪಕ್ಷ (party) ಕಟ್ಟಿದವರು ಮನೆಯಲ್ಲಿ ಹೊಸಬರಿಗೆ ಟಿಕೇಟ್ ಎಂದು ಬಿಜೆಪಿ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ (dk shivakumar) ಕಾರಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದಲ್ಲಿ ಮಹಾಬಲೇಶ್ವರ ದೇವರ ದರ್ಶನ ಪಡೆದು ಮಾಧ್ಯಮಗಳಿಗೆ ಮಾತನಾಡಿದ ಅವರು ಜೆಡಿಎಸ್ ಬಿಜೆಪಿ ಮೈತ್ರಿ ಪ್ರಾರಂಭದಲ್ಲೇ ಎಡವಿದೆ,ಜೆಡಿಎಸ್ ಗೆ ಸೆಕ್ಯುಲರ್ ಪದ ಇಲ್ಲ,ಅವರ ಕುಟುಂಬದವರನ್ನೇ ಬೇರೆ ಪಕ್ಷದಲ್ಲಿ ಚುನಾವಣೆ ನಿಲ್ಲಿಸುವ ಪರಿಸ್ಥಿತಿ ಜೆಡಿಎಸ್ ಗೆ ಇದೆ ಎಂದುರು.
ಇದನ್ನೂ ಓದಿ:- ಕಾಂಗ್ರೆಸ್ ಗೂ ಜೈ -ಬಿಜೆಪಿಗೂ ಜೈ ! ಕಾಂಗ್ರೆಸ್ ಕಛೇರಿಯಲ್ಲಿ ಹೈಡ್ರಾಮ
ಕೇಂದ್ರದಿಂದ ಇಡಿ ದಾಳಿ ಮಾಡಲಾಗುತ್ತಿದೆ,ಪ್ರಕೃತಿ ನಿಯಮ ಅನ್ನುವುದು ಒಂದು ಇರುತ್ತದೆ.ಸಮಯವೇ ಅವರಿಗೆ ಉತ್ತರ ಕೊಡಲಿದೆ ರಾಜ್ಯದಲ್ಲಿ ಬಿಜೆಪಿ ಗಾಳಿಯೂ ಇಲ್ಲ, ರಾಮನ ಗಾಳಿಯೂ ಇಲ್ಲ, ಹಿಂದುತ್ವನೂ ಇಲ್ಲ, ಯಾರ ಗಾಳಿಯೂ ಇಲ್ಲ, ಅದಕ್ಕಾಗಿ ಮೋದಿ ಅವರು ಬಿಜೆಪಿ ಗ್ಯಾರಂಟಿ ಅನ್ನುವ ಬದಲು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಅನ್ನುವುದನ್ನ ಬಿಟ್ಟು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ ಎಂದರು.
ಇನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಯಾರಾದರು ಪಕ್ಷದ ಸಿದ್ದಾಂತ ಒಪ್ಪಿ ಕೆಲಸ ಮಾಡುವುದಾದರೆ ಅವರಿಗೆ ಸ್ವಾಗತ,ಯಾರು ಅವರಿಗೆ ವಿರೋಧ ಮಾಡುವಂತಿಲ್ಲ,ಪಕ್ಷ ತಿರ್ಮಾನ ಮಾಡಿದ ನಂತರ ಯಾರೂ ವಿರೋಧ ಮಾಡುವಂತಿಲ್ಲ ಎಂದರು.






