Mirjan aganashini river bridge collapse

Kumta|18 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತಿದ್ದ ಸೇತುವೆಕುಸಿತ.

207

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲ್ಲೂಕಿನ ಮಿರ್ಜಾನ್–ಹೆಗಡೆ ತಾರಿಬಾಗಿಲ ಗ್ರಾಮಗಳನ್ನು ಸಂಪರ್ಕಿಸಲು ಅಘನಾಶಿನಿ ನದಿಗೆ (Aganashini rever )ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯ ಮಧ್ಯಭಾಗ ಬುಧವಾರ ಕುಸಿದು ಬಿದ್ದಿದೆ.

ಸೇತುವೆಯ (Bridge) ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಅಳವಡಿಸಿದ್ದ ಕಾಂಕ್ರೀಟ್ ತೊಲೆ (ಬೀಮ್) ಏಕಾಏಕಿ ಕುಸಿದು ಬಿದ್ದ ಪರಿಣಾಮ ಬೃಹತ್ ಗಾತ್ರದ ಕ್ರೇನ್, ಹಿಟಾಚಿ, ದ್ವಿಚಕ್ರ ವಾಹನ ಸೇರಿದಂತೆ ಕೋಟ್ಯಂತರ ಮೌಲ್ಯದ ಪರಿಕರಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಜನರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಸೇತುವೆಯನ್ನು 18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೆ ಶೇ.40ಕ್ಕಿಂತ ಹೆಚ್ಚು ಭಾಗದ ಕಾಮಗಾರಿ ನಡೆದಿದ್ದು, ಎರಡು ಕಂಬಗಳ ನಡುವೆ ಜೋಡಿಸಿಟ್ಟಿದ್ದ ಕಾಂಕ್ರೀಟ್ ತೊಲೆ ಕುಸಿದು ಹಾನಿ ಉಂಟಾಗಿದೆ.

ಅಂದಾಜು 4 ಕೋಟಿ ಮೌಲ್ಯದ ಪರಿಕರ ಹಾನಿಯಾಗಿದ್ದು, ತೊಲೆ ಕುಸಿದಿದ್ದರಿಂದ 50 ಲಕ್ಷದಷ್ಟು ನಷ್ಟ ಉಂಟಾಗಿದೆ. ಕಾಮಗಾರಿ ವೇಳೆ ಕ್ರೇನ್ ಬಡಿದು ತೊಲೆ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪರಿಶೀಲನೆ ಕೈಗೊಳ್ಳಲಾಗಿದೆ’ ಎಂದು ಪಿಡಬ್ಲ್ಯೂಡಿ ಎಇಇ ಎಂ.ಪಿ.ನಾಯ್ಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇನ್ನು ಕಳಪೆ ಕಾಮಗಾರಿಯಿಂದಾಗಿ ಈ ಕುಸಿತವಾಗಿದೆ ,ಯಾವುದೇ ಮುಂಜಾಗ್ರತೆ ಸಹ ವಹಿಸುತಿಲ್ಲ, ವರ್ಷದಿಂದ ಕುಂಟುತ್ತಾ ಸಾಗಿರುವ ಈ ಸೇತುವೆ ಕಳಪೆ ಕಾಮಗಾರಿ ಮಾಡಲಾಗಿದೆ,ಈ ಬಗ್ಗೆ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!