Heavy rain uttra kannda sirsi yallapura city

Uttra Kannada| ಅಬ್ಬರದ ಮಳೆ ಎಲ್ಲಿ ಏನು ಅನಾಹುತ ವಿವರ ಇಲ್ಲಿದೆ.

62

UTTARAKANNADA RAIN DAMAGE NEWS:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲಿ ಅಲ್ಪ ಮಳೆ ಕಮ್ಮಿಯಾದರೂ ಮಲೆನಾಡು ಭಾಗವಾದ ಶಿರಸಿ,ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಬೆಳಗಿನಿಂದಲೂ ಹೆಚ್ಚಿನ ಮಳೆಯಾಗಿದೆ.

ಎಲ್ಲಿ ಏನು ಅನಾಹುತ?

Rain damage uttrakannada July month
Kannadavani.news

ಶಿರಸಿ (SIRSI) ತಾಲೂಕು.

ಈ ತಾಲೂಕಿನಲ್ಲಿ ಮಳೆಯಿಂದ ಶಾಲೆ ಕಾಂಪೌಂಡ್,ಮನೆ ಗೋಡೆ ಕುಸಿತವಾಗಿದೆ.ಶಿರಸಿಯ ಶಿವಳ್ಳಿಯ ಸರ್ಕಾರಿ ಶಾಲೆ ಯ ಮುಂಭಾಗದ ಕಾಂಪೌಂಡ್ ಕುಸಿತವಾಗಿದೆ. ಇನ್ನು ಹನುಮಂತಿ ಗ್ರಾಮದ ಅಹ್ಮದ್ ಖಾನ್ ಎಂಬುವವರ ಮನೆ ಗೋಡೆ ಕುಸಿತವಾಗಿ ನಷ್ಟವಾಗಿದ್ದು ಸ್ಥಳ ಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಲ್ಲಾಪುರ ತಾಲೂಕು

ಇಲ್ಲಿನ ಮಾಗೋಡು ರಸ್ತೆಯ ಕಾಳಿಮನೆ ಪ್ರದೇಶದ ರಸ್ತೆ ಜಲಾವೃತವಾಗುದ್ದು ಇದರಿಂದ ಯಲ್ಲಾಪುರ ,ಕವಡಿಕೆರೆ ಪ್ರದೇಶ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. ಇನ್ನು ಗಂಗಾವಳಿ ನದಿಯಿಂದಾಗಿ ಇಡಾಗುಂದಿ ಭಾಗದ ಕಿರು ಸೇತುವೆ ಎಂದಿನಂತೆ ಮುಳುಗಿದ್ದು ಇಲ್ಲಿನ ಗ್ರಾಮಗಳ ಸಂಚಾರ ಎಂದಿನಂತೆ ಸ್ಥಗಿತವಾಗಿದೆ.

ಗಂಗಾವಳಿ ನದಿ ನೀರು ಹೆಚ್ಚಳವಾದ್ದರಿಂದ ಯಲ್ಲಾಪುರ ತಾಲೂಕಿನ ಸಾತೋಡಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ( tourist) ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ:-Honnavara| ಲಂಚ ಪಡೆಯುತಿದ್ದ ಪಂಚಾಯಿತ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ.

ಇನ್ನು ಉಳಿದಂತೆ ಭಟ್ಕಳದ ಹಲವು ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ನೀರು ತುಂಬುತಿದ್ದು ಅಲ್ಪ ಹಾನಿ ವರದಿಯಾಗಿದೆ. ಇದನ್ನು ಹೊರತುಪಡಿಸಿದರೇ ಕರಾವಳಿ ಭಾಗ ಹಾಗೂ ಬಯಲುಸೀಮೆ ಭಾಗದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!