ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ರಾಜೀನಾಮೆ? ಏನಂದಿದ್ರು ಹೆಬ್ಬಾರ್!

AddText 02 27 02.57.15 AddText 02 27 02.57.15
advertisement contact

ಕಾರವಾರ,ಫೆಬ್ರವರಿ 27:- ವಿರೋಧ ಪಕ್ಷದ ಶಾಸಕಾಂಗದ ನಾಯಕನನ್ನು ಆಯ್ಕೆ ಮಾಡುವಾಗ ಸಭೆಗೆ ಗೈರಾಗಿದ್ದ ಹೆಬ್ಬಾರ್ ಬಿಜೆಪಿಯಲ್ಲಿ ಅಸಮಧಾನ ಹೊರಹಾಕಿದ್ದರು.


ಈ ಹಿಂದೆ ಯಲ್ಲಾಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ಶಿವರಾಮ್ ಹೆಬ್ಬಾರ್ (shivaram hebbar )ನನ್ನದೇ ಆದ ಸಮಸ್ತ ಇದೆ ಆ ಸಮಸ್ಯೆ ಬಗೆಹರಿಯುವ ವರೆಗೆ ನಾನು ತಟಸ್ಥವಾಗಿರುತ್ತೇನೆ .ನನ್ನ ಸ್ವಾಭಿಮಾನ ಕ್ಕೆ ದಕ್ಕೆ ಬಂದರೇ ಅದನ್ನು ಸಹಿಸಿಕೊಳ್ಳುವ ವ್ಯಕ್ತಿ ನಾನಲ್ಲ.


ನನ್ನದೇ ಆದ ಬದ್ದತೆ ಇದೆ.ಅದರದ್ದೇ ಆದ ಸಮಸ್ಯೆ ಇದೆ,ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ ಕೇಡರ್ ಬೇಸ್ ರಾಜಕಾರಣಿ. ಜನರ ಮಧ್ಯೆ ಇರುವವನು ಎಂದು ಹೇಳಿದ್ದರು.

Advertisement

ಇದೀಗ ಇಂದು ಬೆಳಗ್ಗೆ ಶಾಸಕ ಎಸ್.ಟಿ ಸೋಮಶೇಖರ್ ರವರ ಜೊತೆ ಮಾತೂಕತೆ ನಡೆಸಿದ್ದ ಹೆಬ್ಬಾರ್ ಬಿಜೆಪಿ (Bjp)ಯಲ್ಲಿರುವ ಅಸಮಧಾನ ಇದ್ದರೂ ಸಧ್ಯ ಬಿಜೆಪಿ ಬಿಡಲು ನನ್ನದೇಆದ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದಾಗಿ ತಿಳಿದುಬಂದಿದೆ. ಹೀಗಾಗಿ ಹಿಂದಿನಿಂದಲೂ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗೆ ಅಲ್ಪ ವಿರಾಮ ಬಿದ್ದಿದೆ.

ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಸೋಮಶೇಖರ್ ರವರ ಹಾದಿಯನ್ನು ತುಳಿಯಲಿದ್ದಾರೆ ಹೆಬ್ಬಾರ್ ಎಂಬ ಮಾತು ಕೇಳಿಬರುತಿದ್ದು ಬಹುತೇಕ ಹೆಬ್ಬಾರ್ ರವರು ಅಡ್ಡಮತದಾನ ಮಾಡುವ ಸಾಧ್ಯತೆಗಳು ಕಡಿಮೆ ಇದ್ದು ಮತದಾನದಿಂದ ಹೊರಗುಳಿಯಲಿದ್ದು ಈ ಮೂಲಕ ಪಕ್ಷಕ್ಕೂ ಮುಜುಗರ ತಪ್ಪಿಸುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ..ಆದ್ರೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ವಿಚಾರ ಸದ್ಯ ಮುಂದೂಡಿದ್ದು ಶಾಸಕ ಸ್ಥಾನಕ್ಕೆ ಎಸ್.ಟಿ ಸೋಮಶೇಖರ್ (ST Somashekar) ರಾಜಿನಾಮ ನೀಡುವ ಸಾಧ್ಯತೆಗಳಿವೆ.

ರಾಜ್ಯಸಭಾ ಚುನಾವಣೆಯಲ್ಲಿ ಈಗಾಗಲೇ ಬಹುತೇಕ ಶಾಸಕರು ( member of Logistic assembly)ಮತದಾನ ಮಾಡಿದ್ದಾರೆ. ಸದ್ಯ 222 ಮತಗಳು ಈಗಾಗಲೇ ಚಲಾವಣೆ ಆಗಿದೆ.ಆದ್ರೆ ಹೆಬ್ಬಾರ್ ಮಾತ್ರ ಈವರೆಗೂ ಮತದಾನಕ್ಕೆ ಹಾಜುರಾಗಲಿಲ್ಲ. ಮೂಲಗಳ ಪ್ರಕಾರ ಮತದಾನದಿಂದ ಹೆಬ್ಬಾರ್ ದೂರ ಉಳಿಯಲಿದ್ದಾರೆ.

ಹೆಬ್ಬಾರ್ ಕಚೇರಿಗೆ ವಿಪ್ ಅಂಟಿಸಿದ ಬಿಜೆಪಿ.

AddText 02 27 03.15.24

ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಅಡ್ಡ ಮತದಾನ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ಬೆಂಗಳೂರಿನ ಶಾಸಕ ಭವನದಲ್ಲಿ ಇರುವ ಶಾಸಕರ ಕಚೇರಿ ಬಾಗಿಲಿಗೆ ವಿಪ್ ಅನ್ನು ಅಂಟಿಸಲಾಗಿದೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement