ನಾನು ಸತ್ತಿಲ್ಲ ಬದುಕಿದ್ದೇನೆ ಎಂದ ಪೂನಂಪಾಂಡೆ! ಮೂರ್ಖರಾದ ಮಾಧ್ಯಮ! ಆಕೆ ಹೇಳಿದ್ದೇನು?

171

ಮುಂಬೈ ,ಪೆಬ್ರವರಿ03:-ಬಾಲಿವುಡ್ ನಟಿ ಪೂನಂ ಪಾಂಡೆ (punam pandya) ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹಬ್ಬಿತ್ತು. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿತ್ತು. ಆದರೆ ಇದೀಗ ಪೂನಂ ಪಾಂಡೆ ಬದುಕಿದ್ದಾರೆ ಎನ್ನುವ ಸ್ಪಷ್ಟನೆ ಸಿಕ್ಕಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ವಿಡಿಯೋ ಇಲ್ಲಿದೆ.

ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದೇ ತನ್ನ ಸಾವಿನ ಸುದ್ದಿಯ ಉದ್ದೇಶ” ಎಂದು ಪೂನಂ ಪಾಂಡೆ ವಿಡಿಯೋದಲ್ಲಿ ಹೇಳುವ ಮೂಲಕ ಮಾಧ್ಯಮಗಳಿಗೆ ಶಾಕ್ ನೀಡಿದ್ದಾಳೆ.

ನಿನ್ನೆ ಪೂನಂ ಪಾಂಡೆ ಸಾವಿನ ಸುದ್ದಿ ಹೊರಬಿದ್ದ ಬಳಿಕ ಸತ್ಯಾಸತ್ಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು. ಕೆಲವರು ಪೂನಂ ಪಾಂಡೆ ಸತ್ತಿರುವುದು ಸತ್ಯ ಒಪ್ಪಿಕೊಂಡಿದ್ದರೆ, ಇನ್ನೂ ಕೆಲವರು ಇದು ಆಕೆಯ ಪ್ರಚಾರದ ಸ್ಟಂಟ್ ಎಂದು ಊಹಿಸಿದ್ದರು. ಆದರೆ ಪೂನಂ ಪಾಂಡೆ ಸಾವಿನ ಬಗ್ಗೆ ಆಕೆಯ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಳ್ಳಲಾಗಿತ್ತೇ ಹೊರತು. ಆಕೆಯ ಕುಟುಂಬಸ್ಥರಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಚರ್ಚೆಗಳು ವಿಪರೀತವಾಗುತ್ತಿದಂತೆ ಇದೀಗ ನಟಿಯಿಂದಲೇ ಸ್ಪಷ್ಟನೆ ಸಿಕ್ಕಿದ್ದು ಮಾಧ್ಯಮಗಳನ್ನ ಈಕೆ ಮೂರ್ಖರನ್ನಾಗಿಸಿದ್ದು ಮಾತ್ರ ಮಾಧ್ಯಮಗಳು ಸುದ್ದಿ ವಿಷಯದಲ್ಲಿ ಹೇಗಿರಬೇಕು ಎಂಬುದನ್ನ ಎಚ್ಚರಿಸುವ ಸಂದೇಶವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!