



ಕಾರವಾರ:- ಬಿಸಿಲಿನ ತಾಪದಿಂದ ಬಸವಳಿದ ಕಾರವಾರದ ಜನರಿಗೆ ದುಬಾರಿ ತರಕಾರಿಯ ಬಿಸಿಯೂ ತಟ್ಟಿದೆ.
ಕಾರವಾರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು ಒಂದು ಕೆಜಿ ಬೀನ್ಸ್ ಬೆಲೆ 200 ರುಪಾಯಿ ಜಿಗಿತ ಕಂಡಿದೆ.ಇನ್ನು ಕ್ಯಾರೆಟ್ 150 ರಿಂದ 180 ,ಹೂಕೋಸು -80 ರಿಂದ 100 , ಬೆಂಡೆಕಾಯಿ 100 ರಿಂದ 120 ,ಬೆಳ್ಳುಳ್ಳಿ ಕೆಜಿಗೆ 300 ರಿಂ 350 ರವರೆಗೆ ದರವಿದ್ದು , ಸೌತೆಕಾಯಿ- 70 -80 , ಮೂಲಂಗಿ ಕಟ್ಟಿಗೆ -80 (ಹತ್ತು ಪೀಸ್ ಗಳು), ಕುತಂಬರಿ ಕಟ್ಟು (ಒಂದಕ್ಕೆ) -30 ರಿಂದ 40 , ನಿಂಬೆಹಣ್ಣು ಒಂದಕ್ಕೆ 10 ರೂ, ದರವಿದ್ದು ತರಕಾರಿ ಬೆಲೆ ಗಗನಕ್ಕೇರಿದೆ.
ಇನ್ನು ಮಾವಿನ ಹಣ್ಣುಗಳು ಸಹ ಹೆಚ್ಚಿನ ದರವಾಗಿದ್ದು ಕರಿಶೇಡ್ ಡಸನ್ ಗೆ 1200 ರಿಂದ 1500 ರೂ ಇದ್ದು ,ಆಫೋಸ್ ತಳಿಯ ಮಾವು ಕೆಜಿಗೆ 150 ದರವಾದರೇ ಡಸನ್ ಗೆ 500 ರೂ ಗಳಿಗೂ ಅಧಿಕವಾಗಿದೆ.
ದರ ಏರಿಕೆ ಏಕೆ?
ಕಾರವಾರಕ್ಕೆ ಬೆಳಗಾವಿ ,ಹಾವೇರಿ,ಹುಬ್ಬಳ್ಳಿಗಳಿಂದ ತರಕಾರಿ,ಹಣ್ಣುಗಳು ಮಾರುಕಟ್ಟೆಗೆ ಬರುತ್ತದೆ.ಬಿಸಿಲು ಹೆಚ್ಚಾದ್ದರಿಂದ ತರಕಾರಿ ಬೇಡಿಕೆ ಹೆಚ್ಚಿದೆ. ಇದಲ್ಲದೇ ನೆರೆಯ ಗೋವಾದಿಂದ ಸಹ ಕಾರವಾರಕ್ಕೆ ತರಕಾರಿ ಕೊಳ್ಳಲು ಜನ ಬರುತ್ತಾರೆ. ಇನ್ನು ಹೆಚ್ಚು ಬೇಡಿಕೆ ಇದ್ದರೂ ನೀರಿನ ಸಮಸ್ಯೆಯಿಂದ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಈ ಕಾರಣದಿಂದಾಗಿ ಕಳೆದ ಒಂದು ವಾರದಿಂದ ತರಕಾರಿ ,ಹಣ್ಣುಗಳ ದರ ಏರಿಕೆ ಕಾಣುತ್ತಿದೆ.






