A young man was stabbed by a quarreling brother over a love affair

Uttrakannda|ಯುವತಿ ಜೊತೆ ಪ್ರೇಮ ವಿಚಾರ-ಸಹೋದರನಿಂದ ಯುವಕನಿಗೆ ಚಾಕು ಇರಿತ

137

ಕಾರವಾರ:- ತನ್ನ ಸಹೋದರಿ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತಿದ್ದ ಯುವಕನಿಗೆ ನಡು ರಸ್ತೆಯಲ್ಲೇ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ದಲ್ಲಿ ನಡೆದಿದೆ.

ಹಳಿಯಾಳ (haliyala)ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ(24) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದು ಹಳಿಯಾಳದ ತೇರಗಾಂವ್ ನ ಮಹ್ಮದ್ ಕೈಪ್(20) ಚಾಕು ಇರಿದ ಯುವಕನಾಗಿದ್ದಾನೆ.

ಘಟನೆ ಏನು?

ಶುಕ್ರವಾರ ಸಂಜೆ 6.30 ಸುಮಾರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್ ಘೋಟ್ನೇಕರ ಅವರ ಕಚೇರಿ ಹತ್ತಿರ ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿ ಹಮಾಲಿ ಕೆಲಸ ಮಾಡುವ ಯುವಕ ಮಹ್ಮದಜಬಿವುಲ್ಲಾ ಮಹಾಬುಬಲಿ ಮಕೇಸಾಬ ಇತನಿಗೂ ತಾಲೂಕಿನ ತೇರಗಾಂವ ಗ್ರಾಮದ ನಿವಾಸಿ
ಮಹ್ಮದ್ ದಕೈಫ್ ನಾಸೀರ ದುರ್ಗದ ಇತನಿಗೂ ಸಹೋದರಿಯ ಪ್ರೀತಿಯ ವಿಚಾರವಾಗಿ
ಜಗಳವಾಗಿ ಮಹ್ಮದ್ ಕೈಫ್ ಮಾವಿನ ಹಣ್ಣು ಕಟ್ ಮಾಡುವ ಚಾಕುವಿಂದ ಮಹ್ಮದ್ ಜಬಿವುಲ್ಲಾ ಈತನ ಎಡ ತೋಳಿಗೆ ಹಾಗೂ ಎಡ ಭುಜದ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ. ಅದೃಷ್ಟವಶಾತ್ ಯುವಕ ಬಚಾವ್ ಆಗಿದ್ದು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕು ಇರಿತಕ್ಕೆ ಒಳಗಾಗಿರುವ ಮಹ್ಮದ್ ಜಬಿವುಲ್ಲಾ ಹಾಗೂ ಮಹಮ್ಮದಕೈಫ್ ನಾಸೀರ ದುರ್ಗದ ಇತನ ಸಹೋದರಿಯ ಹಿಂದೆ ಬಿದ್ದು ಪೀಡಿಸಿದ ವಿಚಾರವಾಗಿ ಕಳೆದ 6 ತಿಂಗಳ ಹಿಂದೆ ಗಲಾಟೆ ನಡೆದು ಪ್ರಕರಣ ಕೆಲವು ಮುಖಂಡರ ನಡುವೆ ಇತ್ಯರ್ಥ ಗೊಂಡಿತ್ತು. ಆದರೇ ಮತ್ತೆ ಶುಕ್ರವಾರ ಇಬ್ಬರು ಮುಖಾ ಮುಖಿ ಆದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ಚಾಕು ಇರಿತದಲ್ಲಿ ಕೊನೆಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!