Shiruru ಕಾರ್ಯಾಚರಣೆ| ಟ್ಯಾಂಕರ್ ,ಲಾರಿ ಪಳಯುಳಿಕೆ ಹೊರತೆಗೆದ ಈಶ್ವರ್ ಮಲ್ಪೆ

Ankola shiruru landslide rescue Ishwar Malpe Ankola shiruru landslide rescue Ishwar Malpe
ಶಿರೂರಿನಲ್ಲಿ ಕಾರ್ಯಾಚರಣೆ ವೇಳೆಯ ಚಿತ್ರ

ಕಾರವಾರ :- ಉತ್ತರ ಕನ್ನಡಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತವಾಗಿ 29 ನೇ ದಿನಕ್ಕೆ ಕಾಲಿಟ್ಟಿದೆ.

1001163561 1

ಇದರ ಬೆನ್ನಲ್ಲೇ ಗಂಗಾವಳಿ ನದಿಯಲ್ಲಿ ಕಾಣೆಯಾದ ಮೂವರ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಹಿಂದೇಟು ಹಾಕಿದ್ದು ಆದರೇ ಕಾರವಾರದ ಶಾಸಕ ಸತೀಶ್ ಸೈಲ್ ರವರ ಸೂಚನೆಯಂತೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಗಂಗಾವಳಿ ನದಿಯಲ್ಲಿ ಸಂಜೆ ವೇಳೆಯಲ್ಲಿ ಶೋಧಕಾರ್ಯಕ್ಕಿಳಿದಿದ್ದು ಗ್ಯಾಸ್ ಟ್ಯಾಂಕರ್ ನ ವಾಹನದ ಚಿಕ್ಕ ಭಾಗವನ್ನು ಶೋಧ ನಡೆಸಿ ಹೊರತೆಗೆದಿದ್ದಾರೆ. ಇದಲ್ಲದೇ ಕೇರಳ ಮೂಲದ ಅರ್ಜುನ್ ರವರ ಲಾರಿಯ ಜಾಕ್ ಸಹ ಪತ್ತೆಯಾಗಿದೆ.

ಕೇರಳದ ಲಾರಿ ಚಾಲಕ ಅರ್ಜುನ್ ,ಶಿರೂರಿನ ಜಗನ್ನಾಥ್ ,ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಸಬೇಕಿದ್ದು ಇದೀಗ ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದ ತಡೆಯ ಮಧ್ಯೆಯೇ ಶೋಧ ಕಾರ್ಯ ಮುಂದುವರೆದಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement