News/Karnataka/ District/yallapura Bus conductor assaulted by passengers

ಯಲ್ಲಾಪುರ | ಬಸ್ ನಿಲ್ದಾಣದಲ್ಲೇ ಮಹಿಳಾ ಕಂಡಾಕ್ಟರ್ ಬಿತ್ತು ಪೆಟ್ಟು!

168

YALLAPURA NEWS:– ಯಲ್ಲಾಪುರ ದಿಂದ ಬೆಳಗಾವಿ ಕಡೆ ಹೊರಟಿದ್ದ ಬಸ್ ಪ್ರಯಾಣಿಕರೊಬ್ಬರನ್ನು ಬಿಟ್ಟು ಹೋಗಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಕಂಡಕ್ಟರ್ ( lady conductor) ಅವಾಚ್ಯ ಶಬ್ದ ಬಳಸಿದ್ದಕ್ಕೆ ಮಹಿಳಾ ಕಂಡಕ್ಟರ್ ಗೆ ಗೂಸ ನೀಡಿದ ಘಟನೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಳಗಾವಿ ಕಡೆಯಿಂದ ಹೊರಟಿದ್ದ ಬಸ್ ನಲ್ಲಿ ಕುಟುಂಬವೊಂದು ಪ್ರಯಾಣಿಸಬೇಕಿತ್ತು. ಆದರೇ ಕುಟುಂಬದ ಮಗುವು ಬಸ್(BUS) ಏರಿದ್ದು ಬಸ್ ಪ್ರಯಾಣಿಕರು ಹೆಚ್ಚಾದ್ದರಿಂದ ಇವರನ್ನು ಹತ್ತೊಸಿಕೊಳ್ಳದೇ ಮಹಿಳಾ ಕಂಡಕ್ಟರ್ ಸೀಟಿ ಊದಿದ್ದಾಳೆ .ಈ ವೇಳೆ ಬಸ್ ನಲ್ಲಿ ಮಗು ಮಾತ್ರ ಉಳಿದಿದ್ದು ಉಳಿದವರು ಬಸ್ ನಿಲ್ದಾಣದಲ್ಲೇ ಉಳಿಯುವಂತಾಯಿತು.

ಹೀಗಾಗಿ ಕುಟುಂಬದವರೊಂದಿಗೆ ಬಸ್ ನನ್ನು ಹಿಂಬಾಲಿಸಿ ಬಂದ ಕುಟುಂಬ ಮಹಿಳಾ ಕಂಡಾಕ್ಟರ್ ಗೆ ಪ್ರಶ್ನೆ ಮಾಡಿದ್ದಾರೆ. ಆದ್ರೆ ಮಹಿಳಾ ಕಂಡಕ್ಟರ್ ತಪ್ಪು ಮಾಡಿಯೂ ಕೆಟ್ಟ ಶಬ್ದ ಬಳಸಿದ್ದರಿಂದ ಮಾರಾಮಾರಿ ನಡೆದು ಪೊಲೀಸರ ಮದ್ಯ ಪ್ರವೇಶದಿಂದ ಗಲಾಟೆ ತಣ್ಣಗಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!