ವಿಶ್ವ ಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ Wi-Fi -7 ಸೇವೆ -ಹೇಗೆ ಬಳಸೋದು? ವಿಶೇಷ ಏನು

170

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ ಸಿಗಬೇಕು ಎಂದರೇ ಅದು ದೊಡ್ಡ ಸಾಹಸ, ನಗರದಿಂದ ಅಲ್ಪ ದೂರ ಹೋದರೂ ಮೊಬೈಲ್ ನೆಟ್ವರ್ಕ್ ಸಿಗುವುದೇ ದುಸ್ತರ.ಹೀಗಿರುವಾಗ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಸಹ ಪರಬಾಡದ ಪಾಡು ಪಡಬೇಕು. ಇನ್ನು ಯಾಣದಂತ ಪ್ರದೇಶದಲ್ಲಿ ಸಹ ನೆಟ್ಟರ್ಕ ಸಮಸ್ಯೆ ದೊಡ್ಡ ತಲೆನೋವಾಗಿದ್ದು ಸಂಪರ್ಕ ಸಿಗದೇ ಪ್ರವಾಸಿಗರು ಕಾಡು ಸೇರಿ ಕಾಣೆಯಾದ ಘಟನೆ ಸಹ ನಡೆದಿತ್ತು.

ಇದೀಗ ಉತ್ತರ ಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ(Yana) ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ-7 ಸೇವೆಯನ್ನು
ಮಾರ್ಚ 8 ಮಹಾಶಿವರಾತ್ರಿ ದಿನದಂದು ಉದ್ಘಾಟನೆ ಗೊಳ್ಳಲಿದೆ.

ಬಿ.ಎಸ್.ಎನ್.ಎಲ್.(BSNL) ಭಾರತ ಏರ್ ಫೈ (Bharat Wi-Fi )ಹಾಗೂ ಜಿ.ಎನ್.ಎ (GNA) ಕಂಪನಿಗಳ ಸಹಯೋಗದೊಂದಿಗೆ ಯಾಣದ ಶ್ರೀ ಭೈರವೇಶ್ವರ ದೇವಸ್ಥಾನ ಹತ್ತಿರ ಹಾಗೂ ಎರಡು ಪಾರ್ಕಿಂಗ್ ಸ್ಥಳಗಳಲ್ಲಿ ವೈಫೈ ಸೌಲಭ್ಯ ವದಗಿಸಲಿದೆ.

ಇದರಿಂದ ಪ್ರವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಸಂಪರ್ಕದ ಜೊತೆಗೆ ಡಿಜಿಟಲ್ ಪಾವತಿಗೂ ತುಂಬಾ ಅನುಕೂಲವಾಗಲಿದೆ.

ಏನಿದು WiFi -7 ?
WiFi networks ನಲ್ಲಿಯೇ ಅತೀ ವೇಗ ಹಾಗೂ ಹೆಚ್ಚು ದೂರ ನೆಟ್ವರ್ಕ್ಸ್ ಕವರೇಜ್ ಹಿಂದಿರುವ ಹೊಸ ತಂತ್ರಜ್ಞಾನದ ಸಾಧನವಾಗಿದೆ.ಭಾರತದಲ್ಲಿ ಇದೀಗ 5G ನೆಟ್ವರ್ಕ್ ಬಂದ ಹಿನ್ನಲೆಯಲ್ಲಿ wifi -7 ನನ್ನು ಪರಿಚಯಿಸಲಾಗಿದೆ.

ಅತೀ ವೇಗದ ಇಂಟರ್ನೆಟ್ ಸೌಲಭ್ಯ ವದಗಿಸುವ ಈ ಸಾಧನ ಇತ್ತೀಚಿನ ತಂತ್ರಜ್ಞಾನ ದಲ್ಲಿ ಹೊಸತಾಗಿದ್ದು ಮಾಮೂಲಿ wifi ಗಿಂತ ದುಪ್ಪಟ್ಟು ವೇಗ ಹೊಂದಿದೆ.

ಡೌನ್ ಲೋಡ್ ಸ್ಪೀಡ್ ಸಹ ಹೆಚ್ಚಾಗಿದ್ದು ,ಮುಂದುವರೆದ ದೇಶಗಳಲ್ಲಿ ಹೆಚ್ಚು ಬಳಕೆ ಆಗುತ್ತಿದೆ. ಇನ್ನು ಈ ಸಾಧನದ ಬೆಲೆಯೂ ದುಪ್ಪಟ್ಟಿ‌ನದ್ದಾಗಿದೆ. ಈ ಸಾಧನ ಕೂಡ ನೀವು ಬಳಸುವ WI-FI ನಂತೆಯೇ ಕಾರ್ಯ ನಿರ್ವಹಿಸಲಿದೆ.

ಯಾಣದಲ್ಲಿ ಹೇಗೆ ಕಾರ್ಯ ನಿರ್ವಹಿಸಲಿದೆ? ಉಚಿತವೇ?

ಇನ್ನು WiFi-7 ನನ್ನು ಬಳಸಲು ಶಲ್ಕ ವಿಧುಸಲಾಗುತ್ತದೆ. ಸಾಧನವಿರುವ 200 ರಿಂದ 250 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಕವರ್ ಆಗಲಿದೆ.
ಈ ರೈಂಜ್ ನಲ್ಲಿ ಇರುವ ಗ್ರಾಹಕ ಮೊಬೈಲ್ ನಲ್ಲಿ ವೈಫೈ ಸರ್ಚ ಮಾಡುದಾಗ ನೆಟ್ವರ್ಕ್ ಹೆಸರು ತೋರಿಸುತ್ತದೆ. ಇದನ್ನು ಯಾಕ್ಟವ್ ಮಾಡಲು ನಿಮ್ಮ ಮೊಬೈಲ್ ನಂಬರ್ ಹಾಕಬೇಕು,ನಂತರ ಎಷ್ಟು ಜಿಬಿ(GB) ಪ್ಯಾಕ್ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಬಳಸಬಹುದಾಗಿದೆ.

ಉದ್ಘಾಟನೆ ಯಾರಿಂದ
ಸಂಸದ ಅನಂತಕುಮಾರ್ ಹೆಗಡೆ ಉದ್ಘಾಟನೆ ಮಾಡಲಿದ್ದು ಶಾಸಕ ದಿನಕರ್ ಶಟ್ಟಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತಿ ಇರಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!