BREAKING NEWS
Search

ಶ್ರೀರಾಮ ಮಾಂಸ ಭಕ್ಷಕ! ಬಿರಿಯಾನಿ ಮಾಡುವಾಗ ನಮಾಜ್ ! ಅನ್ನಪೂರ್ಣೆ ನಯನಾತಾರ ಬಹಿರಂಗ ಹೇಳಿಕೆಯಲ್ಲಿ ಏನಿದೆ? ವಿವರ ನೋಡಿ

102

ಬೆಂಗಳೂರು,ಜನವರಿ19:- ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಯನತಾರಾ ನಟಿಸಿದ ತಮಿಳಿನ ‘ಅನ್ನಪೂರ್ಣಿ( annapurni movie)’ ಸಿನಿಮಾ ದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದ ದೃಶ್ಯಗಳ ಬಗ್ಗೆ ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಪೊಲೀಸ್ ಸ್ಟೇಷನ್‌ನಲ್ಲಿ ರಮೇಶ್ ಸೋಲಾಂಕಿ ಎಂಬುವವರು ದೂರು ದಾಖಲಿಸಿದ್ದರು.

ಇನ್ನು ಈ ಸಿನಿಮಾ ದಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಮಾಡುವಾಗ ನಮಾಜ್ ಮಾಡುವ ದೃಶ್ಯ ಇವೆಲ್ಲವೂ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ ಎಂದು ಚಿತ್ರತಂಡದ ವಿರುದ್ಧ ಕಿಡಿಕಾರಲಾಗಿತ್ತು. ಅನ್ನಪೂರ್ಣಿ’ ಸಿನಿಮಾ ವಿವಾದ ತಾರಕ್ಕೇರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲೂ ವಿರೋಧ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಶ್ರೀರಾಮ ಮಾಂಸ ಭಕ್ಷಕ ಎಂದು ಹೇಳುವ ದೃಶ್ಯವಿದೆ. ಹಾಗೇ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಮಾಡುವಾಗ ನಮಾಜ್ ಮಾಡುವ ದೃಶ್ಯ ಇವೆಲ್ಲವೂ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ ಎಂದು ಚಿತ್ರತಂಡದ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು.

ಇದನ್ನೂ ಓದಿ:-ರಾಮಮಂದಿರ ಉದ್ಘಾಟನೆ ವೇಳೆ ಡಾ.ಗಜಾನನ ಶರ್ಮಾ ವಿರಚಿತ ಗೀತೆ “ಇನ್ನಷ್ಟುಬೇಕೆನ್ನ ಹೃದಯಕ್ಕೆ ರಾಮ” ಹಾಡು ಪ್ರಸಾರ

ವಿವಾದ ಹೆಚ್ಚುತಿದ್ದಂತೆ ಜೀ ಸ್ಟುಡಿಯೋ ಕ್ಷಮೆಯಾಚಿಸುತ್ತು. ನೆಟ್‌ಫ್ಲಿಕ್ಸ್ ‘ಅನ್ನಪೂರ್ಣಿ’ ಸಿನಿಮಾವನ್ನು ಓಟಿಟಿ ವೇದಿಕೆಯಿಂದ ತೆಗೆದು ಹಾಕಿತ್ತು.

ವಿವಾಧ ತಾರಕಕ್ಕೆ ಏರುತಿದ್ದಂತೆ ನಯನತಾರಾ ಬಹಿರಂಗವಾಗಿ ಪತ್ರದ ಮುಕೇನ Instagram ಮೂಲಕ ಕ್ಷಮೆಯಾಚಿಸಿದ್ದಾರೆ.

ಕ್ಷಮೆ ಯಾಚಿಸಿದ ನಯನಾ ತಾರಾ

ಜೈ ಶ್ರೀರಾಮ್ ಎಂದು ಬರೆಯುವ ಮೂಲಕ ನಯನತಾರಾ ಪತ್ರವನ್ನು ಆರಂಭಿಸಿದ್ದಾರೆ. “ಈ ಪತ್ರವನ್ನು ನಾನು ಭಾರವಾದ ಹೃದಯದಿಂದ, ಇತ್ತೀಚೆಗೆ ನಮ್ಮ ಅನ್ನಪೂರ್ಣಿ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಬರೆಯುತ್ತಿದ್ದೇನೆ. ಅನ್ನಪೂರ್ಣಿಯನ್ನು ನಾವು ಕೇವಲ ಸಿನಿಮಾ ಮಾಡಬೇಕು ಅಂತ ಮಾಡಿದ್ದಲ್ಲ. ಅದರ ಹಿಂದೊಂದು ಉದ್ದೇಶವೂ ಇರುತ್ತದೆ.” ಎಂದು ನಯನತಾರಾ ಹೇಳಿದ್ದಾರೆ.

ನಾನು ಪಾಸಿಟಿವ್ ಮೆಸೇಜ್ ಅನ್ನು ಕೊಡುವ ಪ್ರಯತ್ನದಲ್ಲಿ, ನನಗೆ ಅರಿವಿಲ್ಲದೆ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದೇವೆ. ನಮ್ಮ ಸಿನಿಮಾ ಸೆನ್ಸಾರ್ ಆಗಿ ಚಿತ್ರಮಂದಿರದಲ್ಲಿ ಹಾಗೂ ಓಟಿಟಿಯಲ್ಲೂ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾವನ್ನು ಓಟಿಟಿ ವೇದಿಕೆಯಿಂದ ತೆಗೆದು ಹಾಕುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂಡದ ಉದ್ದೇಶ ಯಾರದ್ದೇ ಭಾವನೆಗಳಿಗೆ ಅಥವಾ ನಂಬಿಕೆ ಧಕ್ಕೆಯನ್ನು ಉಂಟುಮಾಡುವುದಾಗಿರಲಿಲ್ಲ. ನಾನು ದೇವರಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವವಳು. ದೇಶದಲ್ಲಿರುವ ಹಲವು ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತೇನೆ. ಯಾರಿಗೆಲ್ಲ ನೋವಾಗಿದೆ ಅವರಲ್ಲಿ ಪ್ರಾಮಾಣಿಕವಾಗಿ ಹೃದಯದಿಂದ ಕ್ಷಮೆ ಕೇಳುತ್ತೇನೆ” ಎಂದು ನಯನತಾರಾ ಬರೆದುಕೊಂಡಿದ್ದ ವಿವಾದಕ್ಕೆ ತೆರಯೆಳೆಯುವ ಪ್ರಯತ್ನ ಮಾಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!