Actor darshan family

ಕಾರವಾರದಲ್ಲಿ ಶನೀಶ್ವರನ ಮೊರೆಹೋದ ದರ್ಶನ್ ಕುಟುಂಬ! ದರ್ಶನ್ ಬಗ್ಗೆ ಹೇಳಿದ್ದೇನು?

122

ಕಾರವಾರ :- ಒಂದೆಡೆ ಚಿತ್ರ ನಟ ದರ್ಶನ್ (kannada actor darshan)ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕಷ್ಟಡಿಯಲ್ಲಿ ತನಿಖೆ ಎದುರಿಸುತಿದ್ರೆ, ಇತ್ತ ಅವರ ಕುಟುಂಬ ಅವರ ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋಗಿದೆ.

ದರ್ಶನ ಅವರ ಸಹೋದರಿ ದಿವ್ಯ ಪತಿ ಮಂಜುನಾಥ್ ರವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಕೈಗಾ ಡೌನ್ ಷಿಪ್ ನಲ್ಲಿ ಇರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ಸಂಕಷ್ಟ ನಿವಾರಣೆಗಾಗಿ ಶನಿಶ್ವರನಿಗೆ ದರ್ಶನ್ ಹೆಸರಿನಲ್ಲಿ ಶನಿಶಾಂತಿ ಪೂಜೆ ,ನವಗ್ರಹ ಪೂಜೆ,ಆಂಜನೇಯ ಹಾಗೂ ರಾಮಲಿಂಗ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ , ಪಂಚಾಂಬೃತ ಪೂಜೆ ನೆರವೇರಿಸಿದ್ದು ಸಂಕಷ್ಟ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಅರ್ಚಕರು ಹೇಳಿದ್ದೇನು?

ಸದ್ಯಕ್ಕೆ ಚಿತ್ರ ನಟ ದರ್ಶನ ಗೃಹ ಗತಿ ಸರಿಯಾಗಿಲ್ಲ, ಅಪಾಯಗಳು ಬರ್ತಾ ಇದೆ.ಹಾಗಾಗಿ ಅವರ ಭಾವ ಇಂದು ದರ್ಶನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇಂದು ಬೆಳಿಗ್ಗೆ ದರ್ಶನ ಹೆಸರಿನಲ್ಲಿ ಅರ್ಚನೆ ಹಾಗೂ ಅಭಿಷೇಕ ಮಾಡಿಸಲಾಯ್ತು,ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಹೊರ ಬರುವಂತೆ ಪೂಜೆ ಸಲ್ಲಿಸಲಾಗಿದೆ.ದರ್ಶನ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ ಎಂದು ಪ್ರಾರ್ಥಿಸಲಾಗಿದೆ.

ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪಿಡೆ ಅಂತಾ ಬರುತ್ತದೆ. ಅಂತ ದೋಷಗಳಿದ್ದಾಗ ಆದಷ್ಟು ಬೇಗ ನಿವಾರಣೆ ಆಗಲೇಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ದರ್ಶನ ಆಗಾಗ ಕೈಗಾ ದಲ್ಲಿರುವ ಸಹೋದರಿಯ ಮನೆಗೆ ಬಂದು ಹೋಗುತ್ತಿದ್ದರು,ದೇವರ ಆಶೀರ್ವಾದ ಪಡೆಯಲು ಸಹಿತ ಇಲ್ಲಿಗೆ ಬಂದಿದ್ರು
ಅವರನ್ನು ನಾನು ಬಹಳಷ್ಟು ಬಾರಿ ಕೈಗಾ ಪ್ರದೇಶದಲ್ಲಿ ನೋಡಿದ್ದೇನೆ.ದೇವಸ್ಥಾನಕ್ಕೆ ಯಾರೆ ಬಂದ್ರು ಅವರಿಗೆ ಆಶೀರ್ವಾದ ಮಾಡುವುದಷ್ಟೆ ನಮ್ಮ ಕೆಲಸ, ಇಲ್ಲಿ ಬರುವವರ ಯಾರ ವೈಯಕ್ತಿಕ ವಿಚಾರವಾಗಿಯೂ ನಾವು ಬಹಿರಂಗವಾಗಿ ಹೇಳುವುದಿಲ್ಲ ಅವರ ಸಂಕಷ್ಟ ನಿವಾರಣೆಯಾಗುತ್ತದೆ ಎಂದು ಕೈಗಾ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯ ನೆರವೇರಿಸಿದ ಅರ್ಚಕರಾದ ಶ್ರೀ ಪಾದ ಭಟ್ ಹೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!