BREAKING NEWS
Search

Karwar:ಪ್ರಮೋದ್ ಮಧ್ವರಾಜ್ ರವರಿಗೆ ಲೋಕಸಭಾ ಟಿಕೆಟ್ ನೀಡಲು ಮೀನುಗಾರ ಮುಖಂಡರ ಆಗ್ರಹ! ಕಾರಣ ಏನು?

56

ಕಾರವಾರ ,ಪೆಬ್ರವರಿ 01:-ಮುಂದಿನ ಲೋಕಸಭಾ ಚುನಾವಣೆಗೆ( Loksabha election )ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಷ್ಟ್ರದ ಹಿಂದುಳಿದ ವರ್ಗವ ಮೀನುಗಾರ ಸಮಾಜದ ನಾಯಕರಾದ ಪ್ರಮೋದ್ ಮಧ್ವರಾ‌ಜ್‌ ರವರಿಗೆ (pramod madvaraj) ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ‌.

2019ರ ಚುನಾವಣೆಯಲ್ಲಿ ಬಿಜೆಪಿಯ ಯಿಂದ ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂಬುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜ್ಯದ ಜನಸಂಖ್ಯೆಯು 50%ರಷ್ಟಿದ್ದರೂ ಒಬಿಸಿ ಅಭ್ಯರ್ಥಿಗಳಿಗೆ ಒಂದೇ ಒಂದು ಸೀಟು ನೀಡಿಲ್ಲವಾದ್ದರಿಂದ ಬಿಜೆಪಿಗೆ ಒಬಿಸಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ.

ಇದನ್ನೂ ಓದಿ:-daily astrology:ದಿನಭವಿಷ್ಯ01-02-2024

ರಾಜ್ಯದ 28 ಲೋಕಸಭಾ (lokasabha) ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರರು ಹಲವು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದು, ರಾಜಕೀಯ ವೇದಿಕೆಗಳಲ್ಲಿ ಮನ್ನಣೆ ಹಾಗೂ ಪ್ರಾತಿನಿಧ್ಯವನ್ನು ಪಡೆಯಲು ದೀರ್ಘ ಕಾಲ ಹೋರಾಡುತ್ತಿದ್ದು ಅನ್ನೂ ಹೆಣಗಾಡುತ್ತಿರುವ ತಮ್ಮ ಧ್ವನಿ ಕೇಳಿಸದೆ ಬಹಳ ಸಮಯದಿಂದ ನಿರ್ಲಕ್ಷಿಸಲಾಗಿದ್ದು ,ನಮ್ಮ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ರಾಜಕೀಯ ವೇದಿಕೆಗಳಲ್ಲಿ ನಮ್ಮ ಸದುದ್ದೇಶವನ್ನು ಸಮರ್ಥವಾಗಿ ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಮೀನುಗಾರರ ಪ್ರತಿನಿಧಿಯನ್ನು ಹೊಂದಿರುವುದು ಬಹಳ ಮುಖ್ಯ ಹೀಗಾಗಿ ಪ್ರಮೋದ್ ಮಧ್ವರಾಜ್ ರವರಿಗೆ ಈ ಬಾರಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಮೋದ್ ಮಧ್ವರಾಜ್ ರವರು ರಾಜಕೀಯ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಯಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಸಮಾಜದ ಹಿತಾಸಕ್ತಿಗಳ ಬಗ್ಗೆ ಪರಿಣಾಮಕಾರಿಯಾಗಿ ಪ್ರತಿನಿಧಿಸಿ ಅಂತರ್ಗತ ಬೆಳವಣಿಗೆ ಮತ್ತು ಸಾಮಾಜಿಕ ಆರ್ಥಿಕ ಪ್ರಗತಿಗೆ ಭವಿಷ್ಯದ ಯೋಜನೆ ಮತ್ತು ಬೆಳವಣಿಗೆಗೆ ಅವರ ಸಾಬೀತಾದ ಬದ್ಧತೆಯು ಅಸಂಘಟಿತ ವ್ಯಕ್ತಿಗಳ ವಿಶ್ವಾಸ ಮತ್ತು ಮೆಚ್ಚುಗೆಯು ಪ್ರಮೋದ್ ಮಧ್ವರಾಜ್‌ ರವರ ಪರಿಶ್ರಮ, ತ್ಯಾಗ, ಸಮರ್ಪಣೆ, ಚತುರ ಸಂಘಟಣೆಯಿಂದ ಸಮಾಜದ ನಿರಂತರ ಸಂಪರ್ಕ ಹಾಗೂ ರಕ್ತಗತವಾಗಿ ಬಂದಿರುವ ತನ್ನ ಸೇವಾ ಭಾವನೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಟ್ರಸ್ಟ್ ಮುಖೇನ ಸಮಾಜದ ಎಲ್ಲಾ ಜಾತಿ ಮತ ಧರ್ಮಗಳ ಕಷ್ಟ ಕಾರ್ಪಣ್ಯಗಳಿಗೆ ದುಡಿದ ಸಂಪತ್ತನ್ನು ಆರ್ಥಿಕ ಸಹಾಯಕರಾಗಿ ಸಮರ್ಪಿಸುತ್ತಿರುವ ನೆಚ್ಚಿನ ರಾಜಕಾರಣಿಯಾಗಿದ್ದಾರೆ.

ಇದನ್ನೂ ಓದಿ:-ಶಿರಸಿಯಲ್ಲಿ ಮತಾಂತರಕ್ಕೆ ಯತ್ನ -ಆರು ಜನರ ಬಂಧನ

ಕಳೆದ ಕರ್ನಾಟಕ ರಾಜ್ಯ ಸರಕಾರದಲ್ಲಿ ಕ್ರೀಡೆ, ಯುವಜನ ಸಬಲೀಕರಣ ಮತ್ತು ಮೀನುಗಾರಿಕಾ ಕ್ಯಾಬಿನೆಟು ದರ್ಜೆಯ ಸಚಿವರಾಗಿ ಮೀನುಗಾರಿಕೆಯಲ್ಲಿ ಆಧುನಿಕತೆ ಮತ್ತು ಕ್ರಾಂತಿಕಾರಿ ಬದಲಾವಣೆಯೊಂದಿಗೆ, ರಾಜ್ಯದ ಪ್ರವಾಸೋದ್ಯಮ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ಕಳಂಕ ರಹಿತ ರಾಜಕಾರಣಿ ಆಗಿರುವ ಅವರಿಗೆ ಉಡುಪಿ-ಚಿಕ್ಕಮಗಳೂರಿಗೆ ಮಾತ್ರ ಸ್ಪರ್ಧಿಸುವ ಅವಕಾಶ ಇದ್ದು ಈ ಹಿನ್ನಲೆಯಲ್ಲಿ ಪ್ರಮೋದ್ ಮಧ್ವರಾಜ್ ರವರಿಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಭಾರತೀಯ ಮೀನುಗಾರ ಸಂಘದ ಕಿಶೋರ್ ಸುವರ್ಣ, ಗಾಬಿತ ಸಮಾಜದ ಮುಖಂಡ ನಿತೀನ್ ಗಾಂವ್ಕರ್ ,ಜಿಲ್ಲಾ ಹರಿಕಾಂತ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೋಷನ್ ಹರಿಕಾಂತ್ರ,ಪರ್ಷಿಯನ್ ಮೀನುಗಾರ ಸಂಘದ ಸಂತೋಷ್ ,ಮೋಹನ್ ಕುಂದೂರು ಸೇರಿದಂತೆ ಅನೇಕ ರಾಜ್ಯ,ಜಿಲ್ಲಾ ಮುಖಂಡರು ಭಾಗಿಯಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!