ಅಪರೂಪದ ಬೃಹತ್‌ ಹಿಮಾಲಯನ್ ಗ್ರಿಫನ್‌ ಓಲ್ಚರ್‌ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ|ವಿಶೇಷ ಏನು ಗೊತ್ತಾ?

350

ಕಾರವಾರ :- ರಣಹದ್ದುಗಳು ಕಾಣುವುದೇ ಅಪರೂಪ ಅದ್ರಲ್ಲೂ ವಿಶ್ವದಲ್ಲೇ ಅತೀ ದೊಡ್ಡ ಪಕ್ಷಿ ಎಂದು ಗುರುತಿಸಿಕೊಂಡಿರುವ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಇದೀಗ ಕಾರವಾರದ ಬೈತಖೋಲ್ ನಲ್ಲಿ ಕಾಣಿಸಿಕೊಂಡಿದೆ.

ಹುಲಿಗಿಂತಲೂ ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರಿಫನ್ ಓಲ್ಚರ್ ಸಾಮಾನ್ಯವಾಗಿ ಹಿಮಾಲಯ ಮತ್ತು ಟಿಬೆಟ್ ಗಳಲ್ಲಿ ವಾಸಿಸುತ್ತವೆ. ಇದೀಗ ಬೈಲಖೋಲ್ ಬಂದರಿನಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು

ಈ ದೈತ್ಯ ಪಕ್ಷಿಯು ಬೆಳಗ್ಗೆ ಬೈತಖೋಲ ಬಂದರಿನ ಆಸುಪಾಸು ಕೆಳಮಟ್ಟದಲ್ಲಿ ಹಾರಾಡಿತು. ಬಳಿಕ ಕಾಗೆಗಳು ಮತ್ತು ಸ್ಥಳೀಯ ಕಪ್ಪು ಗಿಡುಗಗಳೊಂದಿಗೆ ಜೊತೆಯಾಗಿ ಹಾರಾಡಿತು. ಬಂದರಿನ ಆಸುಪಾಸು ಸುತ್ತಿ ಇಲ್ಲಿನ ಹಳೆಯ ಕಟ್ಟಡದ ಮೇಲೆ ಕೂತು ವಿಶ್ರಾಂತಿ ಪಡೆಯಿತು. ನಂತರ ಮತ್ತೆ ಹಾರಾಟ ಮುಂದುವರಿಸಿತು. ಎತ್ತರದಲ್ಲಿ ಸುತ್ತುಹಾಕುವ ಮೂಲಕ ಇಲ್ಲಿನ ಭೂದೇವಿ ಗುಡ್ಡದ ತಪ್ಪಲು ಸೇರಿಕೊಂಡಿತು. ಈ ರಣಹದ್ದು ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ವಿರಳವಾಗಿ ಕಾಣ ಸಿಗುತ್ತವೆ.

ಮುಖ್ಯವಾಗಿ ಹಿಮಾಲಯ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯ ಬಹಳ ದೂರದ ವರೆಗೆ ಹಾರಾಟ ನಡೆಸುತ್ತವೆ. ಕೆಲವೊಮ್ಮೆ ಮತ್ತೂ ದೂರದ ಭೂಭಾಗಗಳಿಗೆ ವಲಸೆ ಹೋಗುತ್ತವೆ.

ಕರಾವಳಿಯಲ್ಲಿ ಕಾಣಲು ಕಾರಣವೇನು?

ವಿದೇಶಗಳಿಗೆ ವಲಸೆ ಹೋಗುವ ಈ ಪಕ್ಷಿಗಳು ಕೆಲವೊಮ್ಮೆ ದಕ್ಷಿಣ ಭಾರತದ ಕಡೆಗೂ ಮುಖ ಮಾಡುತ್ತವೆ. ಹೀಗೆ ಬರುವ ಪಕ್ಷಗಳು ಗುಂಪಾಗಿಯೇ ಬರುತ್ತದೆ. ಯಾವುದೋ ಕಾರಣಕ್ಕೆ ಗುಂಪುನಿಂದ ಬೇರ್ಪಟ್ಟ ರಣಹದ್ದು ಕರಾವಳಿಗೆ ಬಂದಿರಬಹುದು. 2020 ರಲ್ಲಿಯೂ ಇದೇ ಜಾತಿಯ ರಣಹದ್ದೊಂದು ನಿತ್ರಾಣ ಸ್ಥಿತಿಯಲ್ಲಿ ಕಾರವಾರದಲ್ಲಿ ಸಿಕ್ಕಿತ್ತು ಎನ್ನುತ್ತಾರೆ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು. ಇದನ್ನೂ ಓದಿ:- ಜೋಯಿಡಾ|ಕಾಡಿನಲ್ಲಿ ಸಿಕ್ತು ಪಿಸ್ತೂಲು ಆ ಎರಡು ಚೀಲಗಳು?

ಸಾಮಾನ್ಯವಾಗಿ ರಣಹದ್ದುಗಳು ಬೇರೆ ಪಕ್ಷಿಗಳ ಒಡನಾಟದಿಂದ ದೂರವಿರುತ್ತವೆ. ಕಾರವಾರದಲ್ಲಿ ಕಂಡುಬಂದ ರಣಹದ್ದು ಕಪ್ಪು ಗಿಡುಗ (ಬ್ಲಾಕ್‌ಕೈಟ್‌) ಗುಂಪಿನೊಂದಿಗೆ ಸ್ವಚ್ಛಂದವಾಗಿ ಹಾರಾಡಿದ್ದು ವಿಶೇಷವಾಗಿತ್ತು.

10 ಕೆಜಿವರೆಗೆ ತೂಕ

ಸುಮಾರು 30 ರಿಂದ 40 ವರ್ಷ ಜೀವಿತಾವಧಿಯ ಈ ಹಿಮಾಲಯನ್‌ ಗ್ರಿಫನ್‌ ಓಲ್ಚರ್‌ಗಳು ( himalayan griffon vulture) ಸ್ಕಾತ್ರ್ಯವೆಂಜರ್‌(ಕೊಳೆತ ಮಾಂಸ ತಿನ್ನುವ ಪಕ್ಷಿ) ಜಾತಿಗೆ ಸೇರಿವೆ. ವಯಸ್ಕ ರಣಹದ್ದುಗಳು ಸುಮಾರು 10 ಕೆಜಿ. ವರೆಗೆ ತೂಗುತ್ತವೆ. ಹೀಗಾಗಿ ಇವುಗಳು ಹದ್ದುಗಳ ಪ್ರಜಾತಿಯಲ್ಲಿಯೇ ಅತಿದೊಡ್ಡ ಹಾರುವ ಪಕ್ಷಿಗಳಾಗಿವೆ. ಸಾಮಾನ್ಯವಾಗಿ ಜನವರಿ ಸಂದರ್ಭದಲ್ಲಿ ಎತ್ತರ ಪ್ರದೇಶಗಳಲ್ಲಿರುವ ಕಲ್ಲು ಬಂಡೆಗಳ ಮೇಲೆ ಇವುಗಳು ಒಂದು ಅಥವಾ ಎರಡು ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ರವರು ಹೇಳುವಂತೆ ಭಾರತದಲ್ಲಿ ದೊಡ್ಡ ಗಾತ್ರದ ನಾಲ್ಕು ಜಾತಿಯ ರಣಹದ್ದುಗಳಿವೆ. ಇವುಗಳು ಕಾಣ ಸಿಗುವುದು ತುಂಬಾ ಅಪರೂಪ. ಹುಲಿಗಿಂತಲೂ ಹೆಚ್ಚು ಅಳಿವಿನಂಚಿನಲ್ಲಿರುವ ಪಕ್ಷಿಗಳು ಇವು. ಕಾರವಾರದಲ್ಲಿ ಕಂಡಿದ್ದು ಬಹಳ ವಿಶೇಷ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:-

Uttrakannada:ಕಟ್ಟಡವೇ ಇಲ್ಲದೇ ಶಡ್ ನಲ್ಲಿ ಪುಟ್ಟ ಮಕ್ಕಳಿಗೆ ಪಾಠ! ಮಕ್ಕಳ ಗೋಳು ಕೇಳುವವರು ಯಾರು?




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!