Karwar :ನಡುರಸ್ತೆಯಲ್ಲೇ ತುಂಡಾಯ್ತು KSRTC ಬಸ್ ಚಕ್ರದ ಲಿಂಕ್!

150

ಕಾರವಾರ :- ಪ್ರಯಾಣಿಕರನ್ನು ಕರೆದೊಯ್ಯುತಿದ್ದ ಕೆ.ಎಸ್ ಆರ್.ಟಿ.ಸಿ (ksrtc bus ) ಬಸ್ಸಿನ ಹಿಂಭಾಗದ ಚೆಸ್ಸಿ ತುಂಡಾಗಿ ಬಿದ್ದು ಪ್ರಯಾಣಿಕರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿ ಇಂದು ನಡೆದಿದೆ.

ಕಾರವಾರ(Karwar) ನಗರದಿಂದ ಕೆರವಾಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸ್ ಇದಾಗಿದ್ದು ಬಸ್ಸಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಜನರು ಇದ್ದರು. ಬಸ್ಸಿನ ಹಿಂಭಾಗದ ಚಕ್ರದ ಭಾಗದ ಚಸ್ಸಿ ಒಮ್ಮೆಲೆ ಕಟ್ ಆಗಿದ್ದು ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಈ ವೇಳೆ ಪಲ್ಟಿಯಾಗುವ ಹಂತದಲ್ಲಿದ್ದ ಬಸ್ಸನ್ನು ಸಾರ್ವಜನಿಕರು ಸಹಾಯದಿಂದ ತಡೆದು ನಿಲ್ಲಿಸಿದ್ದು ಅದೃಷ್ಟವಶಾತ್ ಪ್ರಯಾಣಿಕರ ಜೀವಕ್ಕೆ ಯಾವುದೇ ತೊಂದರೆಗಳಾಗಿಲ್ಲ.

ನಡು ರಸ್ತೆಯಲ್ಲೇ ಬಸ್ ನ ಚಸ್ಸಿ ಕಟ್ಟಾದ್ದರಿಂದ ಕೈಗಾ-ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಇದನ್ನೂ ಓದಿ:- Ayodhya Rama Mandir -ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ| ಶ್ರಮದ ಹಿಂದಿನ ಸ್ಟೋರಿ ಇಲ್ಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!