BREAKING NEWS
Search

Uttrakannada:ಕಟ್ಟಡವೇ ಇಲ್ಲದೇ ಶಡ್ ನಲ್ಲಿ ಪುಟ್ಟ ಮಕ್ಕಳಿಗೆ ಪಾಠ! ಮಕ್ಕಳ ಗೋಳು ಕೇಳುವವರು ಯಾರು?

73

ಕಾರವಾರ :- ರಾಜ್ಯ ಸರ್ಕಾರ (state govrnment )ಅಂಗನವಾಡಿಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಕಟ್ಟಡದ ಬಾಡಿಗೆಯಿಂದ ಹಿಡಿದು ಕಾರ್ಯಕರ್ತರ ಸೀರೆಗೂ ಹಣ ನೀಡಲು ವಿಳಂಬ ಮಾಡಿದೆ.ಆದ್ರೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಿಳೇಗೋಡ ದಲ್ಲಿ ಇರುವ ಅಂಗನವಾಡಿ ಕಟ್ಟಡವು ಶಿಥಿಲಾವಸ್ತೆ ತಲುಪಿದ್ದು ಬಾಡಿಗೆ ಕಟ್ಟಡಕ್ಕೆ ಹಣ ವಿಲ್ಲದೇ ತಗಡಿನ ಶೆಡ್ ನಲ್ಲಿ ನಡೆಸಲಾಗುತ್ತಿದೆ.

ಇದನ್ನೂ ಓದಿ:-ದಿನಭವಿಷ್ಯ:16-12-2023

ಇಲ್ಲಿನ ಶಾಲೆಯೊಂದರ ಆಡದ ಮೈದಾನದ ಮಣ್ಣಿನ ನೆಲದಲ್ಲಿ ತಗಡಿನ ಶಡ್ ಹಾಕಲಾಗಿದ್ದು ಇಲ್ಲಿಯೇ 25 ಜನ ಮಕ್ಕಳು ಇರಬೇಕಾಗಿದ್ದು ಬಿಸಿಲ ಛಳಕ್ಕೆ ಮಣ್ಣಿನ ನೆಲದಲ್ಲಿ ಚಿಕ್ಕ ಮಕ್ಕಳು ನರಕ ಯಾತನೆಯಲ್ಲೇ ಪಾಠ ಕೇಳುವಂತಾಗಿದೆ.ಆದ್ರೆ ಈ ಕುರಿತು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಮಾತ್ರ ದಿವ್ಯ ನಿರ್ಲಕ್ಷ ತೋರಿದೆ.

ಜಿಲ್ಲೆಯಲ್ಲಿ 2687 ಅಂಗನವಾಡಿಗಳಿವೆ ,2102 ಅಂಗನವಾಡಿಗೆ ಸ್ವಂತ ಕಟ್ಟಡಗಳಿವೆ, 81 ಕಟ್ಟಡಗಳು ಅಪೂರ್ಣ ಕಾಮಗಾರಿಯಲ್ಲಿದೆ,45 ಕಟ್ಟಡಗಳು ಮಂಜೂರಾಗಿದೆ. 62 ಕಟ್ಟಡಗಳು ಶಿಥಿಲಗೊಂಡು ಬೇರೆಕಡೆ ಸ್ಥಳಾಂತರಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!