Karwar| ಕಾರವಾರ,ಗೋವಾ ಕರಾವಳಿಯಲ್ಲಿ ಪ್ರಧಾನಿ ಮೋದಿ | ಹೇಗಿತ್ತು ಗೊತ್ತಾ ದೀಪಾವಳಿ ಝಲಕ್ ?

Karwar–Goa (October 20): Prime Minister Narendra Modi celebrated Diwali with Navy personnel aboard INS Vikrant on the Karwar–Goa coast. Modi called it an honour to celebrate the festival with India’s brave sailors and praised their role in Operation Sindoor.
pm modi pm modi

Karwar| ಕಾರವಾರ,ಗೋವಾ ಕರಾವಳಿಯಲ್ಲಿ ಪ್ರಧಾನಿ ಮೋದಿ | ಹೇಗಿತ್ತು ಗೊತ್ತಾ ದೀಪಾವಳಿ ಝಲಕ್ ?

Goa news(october20): ದೇಶದೆಲ್ಲೆಡೆ ದೀಪಾವಳಿಯನ್ನು  ಸಂಭ್ರಮದಿಂದ ಆಚರಿಸಿತಿದ್ದರೇ,ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್‌ಗೆ (INS Vikrant) ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ (PM Modi Diwali Address) ದೀಪಾವಳಿ ಆಚರಿಸಿದರು.

FB IMG 1760961415578
ನೌಕಾದಳ ಸಿಬ್ಬಂದಿಗಳ ಜೊತೆ ಮೋದಿ

ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಅವರೊಂದಿಗೆ ಪವಿತ್ರ ಹಬ್ಬವನ್ನು ಆಚರಿಸುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.” ಮೋದಿ ಇಂದು ಆಪರೇಷನ್‌ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್‌ಎಸ್‌ ವಿಕ್ರಾಂತ್‌ ಕುರಿತು ಮಾತನಾಡಿದ್ದಾರೆ.

Advertisement

India news| ಮಕ್ಕಳನ್ನು ಕೊಲ್ಲುತ್ತಿದೆ ಕೆಮ್ಮಿನ ಸಿರಫ್ | ಎರಡು ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಲು ನಿರ್ಬಂಧ

ನೌಕಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪವಿತ್ರ ಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ನನಗೆ ತುಂಬಾ ಹೆಮ್ಮೆಯನಿಸುತ್ತಿದೆ. ನಾನು ಬಹಳ ಅದೃಷ್ಟವನ್ನು ಹೊಂದಿದ್ದೇನೆ. ಇಂದು ಅದ್ಭುತ ದಿನ. ಈ ದೃಶ್ಯ ಸ್ಮರಣೀಯ. ಇಂದು, ಒಂದು ಕಡೆ, ನನ್ನ ಬಳಿ ಸಾಗರವಿದೆ, ಮತ್ತು ಇನ್ನೊಂದು ಕಡೆ, ಭಾರತ ಮಾತೆಯ ವೀರ ಸೈನಿಕರ ಬಲವಿದೆ ಎಂದು ಹೇಳಿದರು.

FB IMG 1760961327448
ನೌಕಾನೆಲೆಯ ಯುದ್ದ ಹಡಗುಗಳು

“ಇಂದು ಒಂದು ಕಡೆ ಅನಂತ ಗಡಿಗಳು ಮತ್ತು ಅನಂತ ಆಕಾಶ, ಮತ್ತು ಇನ್ನೊಂದು ಕಡೆ ಅನಂತ ಶಕ್ತಿಗಳನ್ನು ಸಾಕಾರಗೊಳಿಸುವ ಈ ದೈತ್ಯ, ಐಎನ್‌ಎಸ್‌ ವಿಕ್ರಾಂತ್ ಇದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಪ್ರಭೆಯು ವೀರ ಯೋಧರು ಬೆಳಗಿಸಿದ ದೀಪಾವಳಿಯ ದೀಪಗಳಂತಿವೆ” ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ (modi)ದೀಪಾವಳಿ ಹೆಜ್ಜೆ ಗುರುತು

FB IMG 1760961428274
INS ವಿಕ್ರಾಂತ್ ಯುದ್ದ ನೌಕೆಯಲ್ಲಿ ಪ್ರಧಾನಿ ಮೋದಿ

2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪ್ರಧಾನಿ ಮೋದಿ(modi) ಭಾರತದಾದ್ಯಂತ ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ. ಪ್ರಧಾನಿಯಾಗಿ ಮೊದಲ ದೀಪಾವಳಿಯನ್ನು ಸಿಯಾಚಿನ್ ಹಿಮನದಿಯಲ್ಲಿ ಆಚರಿಸಿದರು.

FB IMG 1760961434019
ಯುದ್ದ ಹಡಗಿನಲ್ಲಿ ಪ್ರಧಾನಿ ಮೋದಿ ನೌಕಾದಳದ ಅಧಿಕಾರಿಗಳ ಜೊತೆ

ನಂತರದ ಭೇಟಿಗಳಲ್ಲಿ ಡೋಗ್ಯ ಯುದ್ಧ ಸ್ಮಾರಕ, ಹಿಮಾಚಲ ಪ್ರದೇಶದ ಸುತ್ತೋ, ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯ, ಉತ್ತರಾಖಂಡದ ಹರ್ಸಿಲ್, ಹಿಮಾಚಲ ಪ್ರದೇಶದ ಲೆಪ್ಪಾ, ಗುಜರಾತ್‌ ಸರ್ ಕ್ರೀಕ್ ಮತ್ತು ರಾಜಸ್ಥಾನದ ಲೋಂಗವಾಲಾದಲ್ಲಿ ಆಚರಿಸಿದ್ದಾರೆ. ಈ ಸಂಪ್ರದಾಯವು ಭೂಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರನ್ನು ಗೌರವಿಸುವುದು ಮತ್ತು ಸಂಪರ್ಕಿಸುವುದರ ಬದ್ಧತೆಯನ್ನು ತೋರಿಸುವ ಜೊತೆ ಆತ್ಮವಿಶ್ವಾಸ ಹೆಚ್ವಿಸುತ್ತದೆ.

ಕಾರವಾರಕ್ಕೆ(karwar) ಮೋದಿ!

FB IMG 1760961440220
ಪ್ರಧಾನಿ ಮೋದಿಯಿಂದ ವಿಕ್ರಾಂತ್ ಹಡಗಿನಲ್ಲಿ ವೀಕ್ಷಣೆ

ಇನ್ನು ಗೋವಾ ಮೂಲಕ ಕಾರವಾರದ (karwar)ಕದಂಬ ನೌಕಾನೆಲೆಗೂ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಕಾರವಾರ ಕದಂಬ ನೌಕಾನೆಲೆಯಲ್ಲೂ  ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೇ ಕಾರವಾರ-ಗೋವಾ ಕರಾವಳಿ ಮಧ್ಯೆ ಸಮುದ್ರಯಾನ ಮಾಡಿದ ಮೋದಿ ಯುದ್ದ ಹಡಗಿನಲ್ಲಿ ಒಂದಿಷ್ಟು ಸಮಯ ಕಳೆದರು.

ಇನ್ನು ನೌಕಾದಳದ ಸಿಬ್ಬಂದಿಗಳ ಜೊತೆ ಉಭಯಕುಶಲೋಪರಿ ವಿಚಾರಿಸಿ ಸಿಹಿ ಹಂಚಿ ದೀಪಾವಳಿ ಸಂಭ್ರಮ ಆಚರಿಸಿದರು.

IMG 20251020 WA0013

add
10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also.
IMG 20251017 WA0003
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.
IMG 20251016 WA0001
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ.
IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement