Shivamogga | ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಸೇವೆ ಸ್ಥಗಿತ; ಕಾರಣವೇನು?

IndiGo has suspended its daily Bengaluru–Shivamogga flight service from May 1, affecting Malnad region connectivity. Rising fuel costs, pilot shortage, and subsidy issues are cited as major reasons.
IndiGo aircraft at Shivamogga Airport after suspension of Bengaluru-Shivamogga flight service IndiGo aircraft at Shivamogga Airport after suspension of Bengaluru-Shivamogga flight service

Shivamogga | ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಸೇವೆ ಸ್ಥಗಿತ; ಕಾರಣವೇನು?.

ಶಿವಮೊಗ್ಗ: ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ನಿತ್ಯ ವಿಮಾನ ಸೇವೆ ನಡೆಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ (indigo) ಇಂದಿನಿಂದ ತನ್ನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದ ಮಲೆನಾಡು ಭಾಗ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ವೈಮಾನಿಕ ಸಂಪರ್ಕಕ್ಕೆ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾದ ಬಳಿಕ ಮೊದಲಿಗೆ ಸೇವೆ ಆರಂಭಿಸಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ಆಗಿತ್ತು. 2023ರ ಆಗಸ್ಟ್ 31ರಂದು ಬೆಂಗಳೂರು-ಶಿವಮೊಗ್ಗ ನಡುವೆ ಮೊದಲ ಹಾರಾಟ ನಡೆದಿದ್ದು, ಆ ವೇಳೆ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಿ ಸ್ವಾಗತಿಸಲಾಗಿತ್ತು. ಈ ಸೇವೆ ಮಲೆನಾಡು ಭಾಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿತ್ತು.

Advertisement

ಇಂಡಿಗೋ ಸಂಸ್ಥೆ 72 ಆಸನಗಳ ಎಟಿಆರ್ ಮಾದರಿಯ ವಿಮಾನವನ್ನು ಈ ಮಾರ್ಗದಲ್ಲಿ ಬಳಸುತ್ತಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸೇವೆಯಾಗಿ ಇದು ಗುರುತಿಸಿಕೊಂಡಿತ್ತು.

ಆದರೆ ಮೇ 1ರಿಂದ ಬೆಂಗಳೂರು-ಶಿವಮೊಗ್ಗ ನಡುವಿನ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಸ್ಥೆ ಸ್ಥಗಿತಗೊಳಿಸಿತ್ತು. ಅದರಂತೆ ಇಂದಿನಿಂದ ವಿಮಾನ ಸಂಚಾರವೂ ಸಂಪೂರ್ಣ ನಿಂತಿದೆ.

ಸೇವೆ ಸ್ಥಗಿತಕ್ಕೆ ಕಾರಣಗಳೇನು?

Indigo flight shivamogga
ಇಂಡಿಗೋ ವಿಮಾನ -ಶಿವಮೊಗ್ಗ .ಚಿತ್ರ ಕೃಪೆ -ಗೂಗಲ್

ಇತ್ತೀಚಿನ ವಿಮಾನ ಸುರಕ್ಷತಾ ನಿಯಮಗಳಲ್ಲಿ ಬದಲಾವಣೆ ಮಾಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಪೈಲೆಟ್‌ಗಳ ಹಾರಾಟ ಅವಧಿಗೆ ಕಟ್ಟುನಿಟ್ಟಿನ ಮಿತಿ ವಿಧಿಸಿದೆ. ಒಬ್ಬ ಪೈಲೆಟ್ ದಿನಕ್ಕೆ ಗರಿಷ್ಠ ಆರು ಗಂಟೆಗಳಷ್ಟೇ ಹಾರಾಟ ನಡೆಸಬೇಕು ಎಂಬ ನಿಯಮದಿಂದ ಇಂಡಿಗೋ ಸಂಸ್ಥೆಯಲ್ಲಿ ಪೈಲೆಟ್ ಕೊರತೆ ಎದುರಾಗಿದೆ ಎನ್ನಲಾಗಿದೆ.

ಇದೇ ವೇಳೆ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದ ವೈಮಾನಿಕ ಇಂಧನ ದರ ಕೂಡ ಹೆಚ್ಚಳ ಕಂಡಿದೆ. ಇದರಿಂದ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚವೂ ಏರಿಕೆಯಾಗಿದೆ.

ಬೆಂಗಳೂರು-ಶಿವಮೊಗ್ಗ ಮಾರ್ಗವು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಇರಲಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರ ವಯೋಬಲಿಟಿ ಗ್ಯಾಪ್ ಫಂಡಿಂಗ್ (VGF) ಮೂಲಕ ಪ್ರತಿ ಟಿಕೆಟ್‌ಗೆ ₹500 ಸಹಾಯಧನ ನೀಡುತ್ತಿತ್ತು. ಆದರೆ ಈ ಒಪ್ಪಂದ 2025ರ ಆಗಸ್ಟ್‌ನಲ್ಲಿ ಅಂತ್ಯಗೊಂಡಿತ್ತು. ಇದರ ಪರಿಣಾಮ ಸಂಸ್ಥೆಗೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಸೇವೆ ಪುನರಾರಂಭವಾಗುತ್ತದೆಯೇ?

Shivamogga airport Karnataka
ಶಿವಮೊಗ್ಗ ವಿಮಾನ ನಿಲ್ದಾಣ.ಚಿತ್ರ ಕೃಪೆ-ಗೂಗಲ್

ಈ ಮಾರ್ಗದ ಸೇವೆ ಸ್ಥಗಿತ ತಾತ್ಕಾಲಿಕ ಮಾತ್ರ ಎಂದು ಇಂಡಿಗೋ ಮೂಲಗಳು ತಿಳಿಸಿವೆ. ಆದರೆ ಪುನಃ ಹಾರಾಟ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ದಿನಾಂಕ ಘೋಷಣೆ ಆಗಿಲ್ಲ. ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆಗಳು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.

ಸಂಸದ ಬಿ.ವೈ ರಾಘವೇಂದ್ರ ಪ್ರತಿಕ್ರಿಯೆ ಏನು?

ಇಂಡಿಗೋ ವಿಮಾನ ಸೇವೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement