BREAKING NEWS
Search

ಫೆ.7 ರಿಂದ 15 ಸಾಗರ ಮಾರಿಕಾಂಬ ದೇವಿ ಜಾತ್ರೆ| ವಾಹನ ಸಂಚಾರಕ್ಕೆ ನಿಷೇಧ?

174

ಸಾಗರ:- ಫೆ.7 ರಿಂದ 15 ರ ವರೆಗೆ ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆ ಮಹೋತ್ಸವ (ಮಾರಿಕಾಂಬ ಜಾತ್ರೆ) ನಂತರ. ಈ ಹಿನ್ನೆಲೆ ನಗರದ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ, ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

ಸಾಗರ ಮಾರಿಕಾಂಬ ದೇವಿ ಜಾತ್ರೆ ಮಹೋತ್ಸವದ ಹಿನ್ನಲೆಯಲ್ಲಿ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಈ ವೇಳೆ ಭಕ್ತರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.

ನಗರದ ಯಾವ ರಸ್ತೆಯಲ್ಲಿ ನಿಷೇಧ?

ಸಾಗರ ಪೇಟೆ ಪೊಲೀಸ್ ಠಾಣೆ ಎದುರಿನ ಜೆ.ಸಿ.ವೃತ್ತದಿಂದ ಜೆ.ಸಿ.ರಸ್ತೆ, ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ಸರ್ಕಲ್ ವರೆಗೆ ಎರಡು ಕಡೆ ಹೋಗಿ ಬರುವ ವಾಹನಗಳ ನಿಷೇಧಿಸಿದೆ.
ಅಂಬೇಡ್ಕರ್ ವೃತ್ತ ದಿಂದ ಸಾಗರ ಸರ್ಕಲ್ ವರೆಗೆ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್ ನಿಂದ ಸಾಗರ ಸರ್ಕಲ್ ವರೆಗೆ ,ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್ ವೃತ್ತದವರೆಗೆ ಎಲ್ಲಾ ಮಾದರಿ ವಾಹನಗಳ ನಿಲುಗಡೆ ನಿಷೇಧಿಸಿದೆ.
ಇನ್ನು ದುರ್ಗಾಂಬ ವೃತ್ತ ಮೂಲಕ ಸೊರಬ ರಸ್ತೆ ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್.ವೃತ್ತದವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಎಲ್ಲಾ ಸರಕು ಸಾಗಣೆ ವಾಹನ ಸಂಚಾರ ನಿಷೇಧಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!