ಸಾಕು ನಾಯಿಗೆ ಕಚ್ಚಿದ ಬೀದಿನಾಯಿಗೆ ಗುಂಡಿಟ್ಟು ಹತ್ಯೆ-ಆರೋಪಿ ಬಂಧನ

ಸಾಗರದ ನಾಡವಳ್ಳಿ ಗ್ರಾಮದಲ್ಲಿ ಅಕ್ರಮ ಬಂದೂಕಿನಿಂದ ಗುಂಡಿಟ್ಟು ಹತ್ಯೆಗೀಡಾದ ಬೀದಿ ನಾಯಿ ಸಾಗರದ ನಾಡವಳ್ಳಿ ಗ್ರಾಮದಲ್ಲಿ ಅಕ್ರಮ ಬಂದೂಕಿನಿಂದ ಗುಂಡಿಟ್ಟು ಹತ್ಯೆಗೀಡಾದ ಬೀದಿ ನಾಯಿ

ಶಿವಮೊಗ್ಗ:-ಸಾಕು ನಾಯಿಯೊಂದಿಗೆ ಜಗಳವಾಡಿದೆ ಎಂಬ ಕಾರಣಕ್ಕೆ ಬೀದಿ ನಾಯಿಯನ್ನ ಅಕ್ರಮ ಬಂದೂಕಿನಿಂದ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ (sagar) ನಾಡವಳ್ಳಿಯಲ್ಲಿ ನಡೆದಿದೆ‌.

 ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದ ಆರೋಪಿ ಲಿಂಗಮೂರ್ತಿಯನ್ನ ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದ ಬೋರಪ್ಪ ಎಂಬವರು ಎಂದಿನಂತೆ ದನ ಮೇಯಿಸಲು ತೆರಳುತ್ತಿದ್ದ ವೇಳೆ ಅವರೊಂದಿಗೆ ಬೀದಿ ನಾಯಿಯೊಂದು ಹಿಂಬಾಲಿಸಿ ತೆರಳಿತ್ತು. ಈ ವೇಳೆ ಗ್ರಾಮದ ಲಿಂಗಮೂರ್ತಿ ಅವರ ಮನೆ ಬಳಿಗೆ ಬಂದಾಗ ಅಲ್ಲಿದ್ದ ಸಾಕು ನಾಯಿಗಳೊಂದಿಗೆ ಜಗಳವಾಡಿದೆ. ಇದರಿಂದ ಕೋಪಗೊಂಡಿರುವ ಲಿಂಗಮೂರ್ತಿ, ಅಕ್ರಮವಾಗಿಟ್ಟುಕೊಂಡಿದ್ದ ಬಂದೂಕು ಬಳಸಿ ಬೀದಿ ನಾಯಿಗೆ ದಾಳಿ ಮಾಡಿದ್ದಾರೆ. ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಬೀದಿ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ.

Advertisement

ಇದನ್ನೂ ಓದಿ:-Shivamogga| ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ತಾಯಿ ! ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ !

ಅಕ್ರಮ ಬಂದೂಕಿನಿಂದ ಗುಂಡು ಹಾರಿಸಿ, ಬೀದಿ ನಾಯಿ ಹತ್ಯೆಗೈದ ಹಿನ್ನೆಲೆಯಲ್ಲಿ ಆರೋಪಿ ಲಿಂಗಮೂರ್ತಿ ವಿರುದ್ಧ  ಶಸ್ತ್ರಾಸ್ತ್ರ ಕಾಯ್ದೆಯಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement