Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರಿಗೆ ಸಿಕ್ಕಿದ್ದೇನು?

ಸಿದ್ದಾಪುರ ಐಗೋಡು ರಕ್ಷಿತ ಅರಣ್ಯದಲ್ಲಿ ಗುಂಡಿ ತೋಡಿ ಮಡಿಕೆ, ಅಕ್ಕಿ, ಭತ್ತ ಮತ್ತು ಅನ್ನ ಇಟ್ಟಿರುವ ಸ್ಥಳ ಸಿದ್ದಾಪುರ ಐಗೋಡು ರಕ್ಷಿತ ಅರಣ್ಯದಲ್ಲಿ ಗುಂಡಿ ತೋಡಿ ಮಡಿಕೆ, ಅಕ್ಕಿ, ಭತ್ತ ಮತ್ತು ಅನ್ನ ಇಟ್ಟಿರುವ ಸ್ಥಳ
ಚಿತ್ರ- ಐಗೋಡಿನ ಸ್ಥಳದ ಚಿತ್ರದ ಜೊತೆ ai ಕ್ರಿಯೇಷನ್ ಮಾಡಲಾಗಿದೆ.

Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರಿಗೆ ಸಿಕ್ಕಿದ್ದೇನು?

Auro wash karwar,uttarakannada
Auro wash karwar,uttarakannada

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ತಾಲೂಕಿನ ಕಾನಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ  ಐಗೋಡು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಅರಣ್ಯ ಸಿಬ್ಬಂದಿಗೆ ನಿರ್ಬಂಧಿತ ಅರಣ್ಯದಲ್ಲಿ ನಾಲ್ಕು ಅಡಿ ಅಗಲ,ಮೂರು ಅಡಿ ಆಳದಲ್ಲಿ ಗುಂಡಿ ನಿರ್ಮಿಸಿ ನಂತರ ಮಣ್ಣನ್ನು ಹಾಕಿ ಅದರ ಮೇಲೆ ಮರದಲ್ಲಿ ಮಡಿಕೆ ,ಅಕ್ಕಿ ,ಭತ್ತ,ಕಾಯಿ, ಅನ್ನ ವನ್ನು ಇಟ್ಟಿದ್ದು ಪತ್ತೆಯಾಗಿದ್ದು  ಬಲಿ ನೀಡಿ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು.

 ಇನ್ನು ಐಗೋಡಿನಲ್ಲಿ ಹೂತಿಟ್ಟ ಗುಂಡಿಯನ್ನು ತೆರೆದಾಗ ಕುರಿಯ ಕಳೆಬರಹ ಸಿಕ್ಕಿದೆ. ಪೊಲೀಸರ ಮಾಹಿತಿಯಂತೆ ಅಕ್ರಮವಾಗಿ ಅರಣ್ಯಕ್ಕೆ ಪ್ರವೇಶಿಸಿ ಅಮವಾಸೆ ದಿನದಂದು ದೇವರಿಗೆ ಬಿಟ್ಟ ಕುರಿಯನ್ನು ಇಲ್ಲಿ ಹೂಳಲಾಗಿದ್ದು ಯಾರು ಹೂತು ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Advertisement

Siddapur, Aigodu Forest, Kanagodu, Uttara Kannada, Siddapur Police, Forest Department, Sheep Carcass, Black Magic, Ritual, Amavasya, Reserved Forest, ಸಿದ್ದಾಪುರ, ಐಗೋಡು, ಕಾನಗೋಡು, ವಾಮಾಚಾರ, ಕುರಿ ಕಳೆಬರಹ, ಅರಣ್ಯ ಇಲಾಖೆ, ಸಿದ್ದಾಪುರ ಪೊಲೀಸ್
ಐಗೋಡಿನಲ್ಲಿ ಸಿಕ್ಕ ಕುರಿ ಕಳೆಬರಹ

ಸಧ್ಯ ಕುರಿಯ ಶವವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ವಾಮಾಚಾರ ಮಾಡಿರುವ ಸಾಧ್ಯತೆ ಹಿನ್ನಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಹಲವು ಅನುಮಾನ !

ಇನ್ನು ದೇವರಿಗೆ ಬಿಟ್ಟ ಕುರಿ ಎನ್ನಲಾಗಿದ್ದು , ಈ ಕುರಿ ಅನಾರೋಗ್ಯದಿಂದ ಸಾವು ಕಂಡಿದೆ ಎನ್ನಲಾಗಿದ್ದು ಅದನ್ನು ಇಲ್ಲಿ ಹೂತಿಡಲಾಗಿದೆ ಎನ್ನಲಾಗುತ್ತಿದೆ.

ಇದನ್ಬೂ ಓದಿ:-Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರು

ಆದರೇ ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ಅಮವಾಸೆ ದಿನ ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಹೂತಿದ್ದು ಏಕೆ ? ಒಂದುವೇಳೆ ಹೂತಿದ್ದರೂ ಹೂತಿದ್ದೇವೆ ಎಂದು ಯಾರು ಹೂತಿದ್ದಾರೆ ಅವರು ಒಪ್ಪಿಕೊಳ್ಳಬಹುದಿತ್ತು.ಆದರೇ ಯಾವುದನ್ನೂ ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ಇದು ವಾಮಾಚಾರವೇ ಎಂಬ ಸಂಶಯ ವ್ಯಕ್ತವಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement