Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರು

ಸಿದ್ದಾಪುರ ಐಗೋಡು ರಕ್ಷಿತ ಅರಣ್ಯದಲ್ಲಿ ಗುಂಡಿ ತೋಡಿ ಮಡಿಕೆ, ಅಕ್ಕಿ, ಭತ್ತ ಮತ್ತು ಅನ್ನ ಇಟ್ಟಿರುವ ಸ್ಥಳ ಸಿದ್ದಾಪುರ ಐಗೋಡು ರಕ್ಷಿತ ಅರಣ್ಯದಲ್ಲಿ ಗುಂಡಿ ತೋಡಿ ಮಡಿಕೆ, ಅಕ್ಕಿ, ಭತ್ತ ಮತ್ತು ಅನ್ನ ಇಟ್ಟಿರುವ ಸ್ಥಳ
ಚಿತ್ರ- ಐಗೋಡಿನ ಸ್ಥಳದ ಚಿತ್ರದ ಜೊತೆ ai ಕ್ರಿಯೇಷನ್ ಮಾಡಲಾಗಿದೆ.

Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರು

Auro wash karwar,uttarakannada
Auro wash karwar,uttarakannada

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ತಾಲೂಕಿನ ಐಗೋಡು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಅರಣ್ಯ ಸಿಬ್ಬಂದಿಗೆ ನಿರ್ಬಂಧಿತ ಅರಣ್ಯದಲ್ಲಿ ನಾಲ್ಕು ಅಡಿ ಅಗಲ,ಮೂರು ಅಡಿ ಆಳದಲ್ಲಿ ಗುಂಡಿ ನಿರ್ಮಿಸಿ ನಂತರ ಮಣ್ಣನ್ನು ಹಾಕಿ ಅದರ ಮೇಲೆ ಮರದಲ್ಲಿ ಮಡಿಕೆ ,ಅಕ್ಕಿ ,ಭತ್ತ,ಕಾಯಿ, ಅನ್ನ ವನ್ನು ಇಟ್ಟಿದ್ದು ಪತ್ತೆಯಾಗಿದೆ‌.

ಇದನ್ನೂ ಓದಿ:-Siddapur| ಕಾನಸೂರು ವಿದ್ಯಾರ್ಥಿ ಸಾವಿಗೆ ಟ್ವಿಷ್ಟ್ -ಶಿಕ್ಷಕನ ಅಕ್ರಮ ಸಂಬಂಧ ನೋಡಿದ್ದಕ್ಕೆ ಹತ್ಯೆ!? 

Advertisement

ಮೊದಲು ನೋಡಿದಾಗ ಯಾರೋ ಅರಣ್ಯದಲ್ಲಿ  ಬಲಿ ನೀಡಿ ವಾಮಾಚಾರ ಮಾಡಿ ಹೋಗಿರುವ ಸಂಶಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಪಡಿಸಿದ್ದು ,ಮೊದಲು ತಮ್ಮ ಅಧಿಕಾರಿಗೆ ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ಹೋದ ಅರಣ್ಯಾಧಿಕಾರಿಗಳ ತಂಡ ಯಾರನ್ನಾದರೂ ಅಂತ್ಯ ಸಂಸ್ಕಾರ ಮಾಡಿರಬಹುದು ಅಥವಾ ಹತ್ಯೆ ಮಾಡಿ ಹೂತು ಹೋಗಿರಬಹುದು ಎಂಬ ಸಂಶಯದಲ್ಲಿ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರು
ಸ್ಥಳದ ಚಿತ್ರ.-ಐಗೋಡು ಅರಣ್ಯ ಪ್ರದೇಶ

ಇದನ್ನೂ ಓದಿ:-Siddapur| ಅಕ್ರಮ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ – ₹3,30694 ನಗದು ವಶ
ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಅಲ್ಲಿನ ಸ್ಥಳ ನೋಡಿ ಹಲವು ಸಂಶಯಗಳು ಬಂದಿದೆ. ಮಡಿಕೆ, ಅಕ್ಕಿ,ಭತ್ತ,ಅನ್ನ ಹಾಕಿ ಮರದಲ್ಲಿ ಇಟ್ಟಿರುವುದು ನೋಡಿದರೇ ಯಾರದ್ದೋ ಅಂತ್ಯ ಸಂಸ್ಕಾರ ಆಗಿರಬಹುದು ಎಂದು ಮೊದಲು ಸಂಶಯ ಬಂದಿದೆ.

ಇದನ್ನೂ ಓದಿ:-Siddapur |ಸಿದ್ದಾಪುರದಲ್ಲಿ ಚಿರತೆ ದಾಳಿ-ಕರು ಸಾವು

ಆದರೇ ಸುತ್ತಮುತ್ತ ಗ್ರಾಮದ ಜನರನ್ನ ವಿಚಾರಿಸಿದಾಗ ಯಾರೂ ಕೂಡ ಸಾವಾಗಿರುವ ಮಾಹಿತಿಯೇ ಇಲ್ಲ. ಇನ್ನು ಮನೆಯಲ್ಲಿ ಸಲಹಿದ ಗೋವುಗಳು ಸತ್ತಿದ್ದು ಅದನ್ನು ಹೀಗೆ ಕಾಡಿನಲ್ಲಿ ತಂದು ಹೂಳಿರಬಹುದು ಎಂಬ ಸಂಶಯದಲ್ಲಿ ಎಲ್ಲರನ್ನೂ ವಿಚಾರಿಸಿದರು. ಇಷ್ಟು ಸಾಲದ್ದಕ್ಕೆ ಸ್ಥಳದಲ್ಲಿ ಇದ್ದ ಮಡಿಕೆ ಮಾದರಿಯನ್ನು ಯಾರು ಮಾರಾಟ ಮಾಡುತ್ತಾರೆ ಅವರನ್ನ ಸಹ ಹುಡುಕಿ ಮಾಹಿತಿ ತೆಗೆದರು.ಆದರೇ ಈ ಅರಣ್ಯ ಸ್ಥಳದಲ್ಲಿ ಹೀಗೆ ಹಾಕಿ ಹೋಗಲು ಏನು ಕಾರಣ ಎಂಬುದನ್ನ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:-Siddapur|ಪರೀಕ್ಷೆಯಲ್ಲಿ ಫೇಲಾಗುವ ಭಯ -ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಇನ್ನು ಸ್ಥಳದಲ್ಲಿನ ಮಾಹಿತಿ ಪ್ರಕಾರ ಅಮವಾಸ್ಯೆ ದಿನ ಯಾರೋ ಹೀಗೆ ಇಟ್ಟುಹೋಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.ಇದಲ್ಲದೇ ಪ್ರಾಣಿ ಬಲಿ ಅಥವಾ ಮನುಷ್ಯ ಬಲಿ ನೀಡಿ ಮುಚ್ಚಿರುವ ಸಾಧ್ಯತೆಯನ್ನು ಸಹ ಅಲ್ಲಗೆಳೆಯುವಂತಿಲ್ಲ. ಹೀಗಾಗಿ ಪೊಲೀಸರು ಮುಚ್ಚಿರುವ ಗುಂಡಿಯನ್ನು ತಹಶಿಲ್ದಾರ್ ಮಂಜುಳ ನಾಯ್ಕ ನೇತ್ರತ್ವದಲ್ಲಿ ಅಗೆದು ತೆಗೆಯಲು ಸಿದ್ದರಾಗಿದ್ದು ,ಮುಚ್ಚಿದ ಗುಂಡಿ ತೆಗೆದಮೇಲೆಯೇ ಸತ್ಯಾಸತ್ಯತೆ ಹೊರಬರಲಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement