Siddapur| ಅಕ್ರಮ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ – ₹3,30694 ನಗದು ವಶ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(siddapur) ಪೊಲೀಸ್ ಠಾಣೆ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಹೊನ್ನುಕಾರು ಹೋಮ್ ಸ್ಟೇ ಬಳಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಜೂಜಾಟ ಅಡ್ಡೆಯ ಮೇಲೆ ಶಿರಸಿ ವಿಭಾಗದ ಡಿ.ವೈ.ಎಸ್.ಪಿ ಗೀತಾ ಪಾಟೀಲ್ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿ 57 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ವಿವಿಧ ವಸ್ತುಗಳೊಂದಿಗೆ ₹3,30694 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿದ್ದಾಪುರ ತಾಲೂಕಿನ ಮಳವಳ್ಳಿ ಗ್ರಾಮದ ಹೊನ್ನುಕಾರು ಹೋಮ್ ಸ್ಟೇ ಬಳಿ ಅಕ್ರಮವಾಗಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರಂತೆ ದಾಳಿ ನಡೆಸಿದ ಪೊಲೀಸ್ ತಂಡ ಸ್ಥಳದಲ್ಲಿದ್ದ ಹಲವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿತು.
ಇದನ್ನೂ ಓದಿ:-Siddapur| ಕಳೆದುಹೋದ ಅಜ್ಜಿಯ ನಾಲ್ಕು ಲಕ್ಷ ಬೆಲೆಯ ಚಿನ್ನದ ಸರ ಪೊಲೀಸರು ಹುಡಕಿ ಕೊಟ್ಟಿದ್ದು ಹೇಗೆ ಗೊತ್ತಾ?
ದಾಳಿಯ ವೇಳೆ ₹3,30694 ನಗದು,₹47,600 ಮೌಲ್ಯದ ಮೊಬೈಲ್ ಗಳು,831 ಟೋಕನ್‌ಗಳು, ಪ್ಲಾಸ್ಟಿಕ್ ಇಸ್ಪೀಟ್ ಎಲೆಗಗಳು, ಸಿ.ಸಿ ಕ್ಯಾಮರಾಕ್ಕೆ ಅಳವಡಿಸಿದ್ದ ಡಿವಿಆರ್, ಮೂರು ರಿಜಿಸ್ಟರ್ ಹಾಗೂ ಇತರೆ ಜೂಜಾಟ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:-Siddapur |ಸಿದ್ದಾಪುರದಲ್ಲಿ ಚಿರತೆ ದಾಳಿ-ಕರು ಸಾವು
ಈ ಸಂಬಂಧ ಸಿದ್ದಾಪುರ (siddapur) ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 135/2026ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನು ಈ ಇಸ್ಪೀಟ್ ಅಡ್ಡ ಕಾಂಗ್ರೆಸ್ ನ ಪ್ರಭಲ ಮುಖಂಡರೊಬ್ಬರದ್ದು ಎನ್ನಲಾಗಿದ್ದು ತನಿಖೆ ನಂತರ ವಿಷಯ ಬೆಳಕಿಗೆ ಬರಬೇಕಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ರವರ ಮಾರ್ಗದರ್ಶನದಲ್ಲಿ ಶಿರಸಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




